ರಾತ್ರಿಯಿಡೀ ಸದನದಲ್ಲೇ ವಾಸ್ತವ್ಯ ಹೂಡಿದ ಕಮಲ ಪಾಳಯ

ಬೆಂಗಳೂರು: ಸಿಎಂ  ಕುಮಾರಸ್ವಾಮಿ  ವಿಶ್ವಾಸಮತ ಯಾಚನೆ ಮಾಡದಿರುವ ಕಾರಣಕ್ಕೆ ಸಿಎಂ ವಿರುದ್ಧ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದು, ಸದನದಲ್ಲೇ ಅಹೋರಾತ್ರಿ ಧರಣಿ ನಡೆಸಿದ್ದಾರೆ.

 ಮಾನ ಮಾರ್ಯಾದೆ ಇರೋರು ನಡೆಕೊಳ್ಳೋ ರೀತಿನಾ ಇದು? ಬಹುಮತ ಸಾಬೀತು ಮಾಡ್ತೀನಿ ಅಂದರು, ಆದರೆ ಇಲ್ಲಿ  ಮಾಡಿದ್ದೇನು   ಎಂದು ಪ್ರಶ್ನಿಸಿದ್ದಾರೆ.

 

ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡ್ತೀವಿ ಅಂದಿದ್ದಕ್ಕೆ ನಾವು ಅವಿಶ್ವಾಸ ನಿರ್ಣಯ ಕೈ ಬಿಟ್ಟೆವು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸ್ಪೀಕರ್ ಎದುರು ಒಪ್ಪಿಕೊಂಡು ಬಂದರು. ಸಿಎಂ ನಿರ್ಧಾರಕ್ಕೆ ನಾವೂ ಗೌರವ ಕೊಟ್ಟು ಒಪ್ಪಿಕೊಂಡೆವು. ಆದರೆ ಈಗ ಅವರ ಮೈತ್ರಿ ಪಕ್ಷಗಳ 99 ಶಾಸಕರಷ್ಟೇ ಸದನಕ್ಕೆ ಹಾಜರಾಗಿದ್ದಾರೆ. ಹೀಗಾಗಿ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬಂದಿದ್ದಕ್ಕೆ  ಸುಮ್ಮನೆ ಕಾಲಾಆರಣೆ ಮಾಡುತ್ತಿದಾರೆ.

   ಇನ್ನು ಧರಣಿನಿರತ ಬಿಜೆಪಿ ಶಾಸಕರಿಗೆ, ಮಾರ್ಷಲ್‌ಗಳಿಗೆ, ಕಾರ್ಯಕರ್ತರಿಗೆ, ಪಿ.ಎಗಳು ಸೇರಿ ಒಟ್ಟು 250 ಊಟ ಮತ್ತು ಬೆಡ್ ವ್ಯವಸ್ಥೆ ಮಾಡಲಾಗಿತ್ತು. ವಿಧಾನಸಭೆ ವಿರೋಧಪಕ್ಷದ ಜಾಗದಲ್ಲೆ   ಬಿಜೆಪಿ ಶಾಸಕರು ನಿದ್ರೆ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap