ಬೆಂಗಳೂರು:
ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್‌ನಲ್ಲಿ ಇದ್ದಾರೆ. ಇಂದು ಪ್ರಜ್ವಲ್ ಭೇಟಿಗೆ ಮಹಿಳೆಯೊಬ್ಬರು ಆಗಮಿಸಿದ್ದರು.
ಪ್ರಜ್ವಲ್ ರೇವಣ್ಣ ಸ್ವಕ್ಷೇತ್ರ ಹಾಸನದ ಹೊಳೆನರಸೀಪುರದಿಂದ ಆ ಮಹಿಳೆ ಬಂದಿದ್ದು, ಪ್ರಜ್ವಲ್ ರೇವಣ್ಣ ಅವ್ರನ್ನು ಭೇಟಿಯಾಗೋ ಉದ್ದೇಶದಿಂದ ಜೈಲಿಗೆ ಆಗಮಿಸಿದ್ದರು. ಆದರೆ ಜೈಲಿನ ಚೆಕ್ ಪೋಸ್ಟ್ ಬಳಿಯೇ ಜೈಲು ಸಿಬ್ಬಂದಿ ಆ ಮಹಿಳೆಯನ್ನು ತಡೆದಿದ್ದಾರೆ.
ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ಮಾಡಲು ಮಹಿಳೆಯೊಬ್ಬರು ಬಂದಿದ್ದರು. ಹಾಸನ ಜಿಲ್ಲೆಯ ಹೊಳೆನರಸೀಪುರದಿಂದ ಬಂದ ಮಹಿಳೆ, ಪ್ರಜ್ವಲ್ ರೇವಣ್ಣ ಭೇಟಿ ಮಾಡಬೇಕು ಅಂತ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು.
ಆದರೆ ಪ್ರಜ್ವಲ್ ರೇವಣ್ಣ ಭೇಟಿಗೆ ಆ ಮಹಿಳೆಗೆ ಜೈಲಿನ ಸಿಬ್ಬಂದಿ ನಿರಾಕರಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಬಳಿ ಇರುವ ಜೈಲು ಚೆಕ್ ಪೋಸ್ಟ್ ಬಳಿ ಆಕೆಯನ್ನು ತಡೆದ ಜೈಲ್ ಸಿಬ್ಬಂದಿ, ಪ್ರಜ್ವಲ್ ಭೇಟಿ ಮಾಡಲು ಅವಕಾಶ ನಿರಾಕರಿಸಿದ್ದಾರೆ. ಇನ್ನು ಪ್ರಜ್ವಲ್ ರೇವಣ್ಣ ಕುರಿತಂತೆ ಆ ಮಹಿಳೆ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ನಾನು ಕಷ್ಟದಲ್ಲಿ ಇದ್ದಾಗ ನನಗೆ ಸಹಾಯ ಮಾಡಿದ್ದಾರೆ. ಹೀಗಾಗಿ ಅವರನ್ನು ನೋಡಲು ಬಂದಿದ್ದೇನೆ ಅಂತ ಆ ಮಹಿಳೆ ಹೇಳಿದ್ದಾರೆ.
ಯಾರೂ ಮಾಡದ ತಪ್ಪನ್ನು ಪ್ರಜ್ವಲ್ ರೇವಣ್ಣ ಮಾಡಿಲ್ಲ ಅಂತ ಪ್ರಜ್ವಲ್ ರೇವಣ್ಣ ಪರ ಮಹಿಳೆ ಬ್ಯಾಟ್ ಬೀಸಿದ್ದಾರೆ. ಅದಕ್ಕೆ ಕಾನೂನು ಇದೆ, ಕ್ರಮ ಆಗುತ್ತದೆ ಅಂತ ಮಹಿಳೆ ಹೇಳಿದ್ದಾರೆ.ನನ್ನ ಗಂಡ ನಡು ರಸ್ತೆಯಲ್ಲಿ ನನ್ನನ್ನು ಕೊಲೆ ಮಾಡಲು ಬಂದಿದ್ದ. ಆಗ ನಾನು ರೇವಣ್ಣ ಮನೆಯವರ ಬಳಿ ಸಹಾಯ ಕೇಳಿದ್ದೆ. ಆಗ ನನಗೆ ಪ್ರಜ್ವಲ್ ರೇವಣ್ಣ ಅವರು ಸಹಾಯ ಮಾಡಿದ್ದರು. ಹೀಗಾಗಿ ನಾನು ಅವರನ್ನು ನೋಡಲು ಬಂದಿದ್ದೇನೆ ಅಂತ ಆ ಮಹಿಳೆ ಹೇಳಿದ್ದಾರೆ.
ಮತ್ತೊಂದೆಡೆ ತನ್ನ ಆಪ್ತ ಸೇರಿದಂತೆ ಇಬ್ಬರು ಯುವಕರ ಮೇಲೆ ಸಲಿಂಗ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊತ್ತ ಸೂರಜ್ ರೇವಣ್ಣ ಜಾಮೀನು ಅರ್ಜಿ ವಜಾಗೊಂಡಿದೆ. ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮೇಲೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮೊದಲ ಕೇಸ್ ದಾಖಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ