ಪ್ರಜ್ವಲ್‌ ಪ್ರಕರಣ : ವಿಡೀಯೋ ವೈರಲ್‌ ಮಾಡಿದ್ದು ಯಾರು ಗೊತ್ತಾ….?

ಹಾಸನ: 

      ಲೋಕಸಭೆ ಚುನಾವಣೆಯ ಎನ್ ಡಿಎ ಮೈತ್ರಿಕೂಟ ಅಭ್ಯರ್ಥಿ ಹಾಸನ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ದೌರ್ಜನ್ಯಗಳ ಪೆನ್ ಡ್ರೈವ್ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದುಮಾಡುತ್ತಿದೆ.

    ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಬೇಕೆಂದು ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳಿಂದ, ಮಹಿಳೆಯರಿಂದ ರಾಜ್ಯಾದ್ಯಂತ ಪ್ರತಿಭಟನೆಯಾಗುತ್ತಿದೆ. ಪ್ರಕರಣದ ತನಿಖೆಯನ್ನು ಈಗಾಗಲೇ ಎಸ್ ಐಟಿ ಆರಂಭಿಸಿದೆ. ಹಾಗಾದರೆ ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿರುವ ವಿಡಿಯೊ ಹೊಂದಿರುವ ಪೆನ್ ಡ್ರೈವ್ ಬಹಿರಂಗವಾಗಿದ್ದು ಹೇಗೆ, ಅದನ್ನು ಮೊದಲು ಲೀಕ್ ಮಾಡಿದವರು ಯಾರು ಎಂಬುದನ್ನು ಹೊಳೆ ನರಸೀಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ವಕೀಲ ದೇವರಾಜೇಗೌಡ ಬಹಿರಂಗಪಡಿಸಿದ್ದಾರೆ.

    ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ವಿಡಿಯೋ ವಿಚಾರ 2023 ರಲ್ಲೇ ಬಂದಿತ್ತು. ಆದರೆ, ಪ್ರಜ್ವಲ್ ರೇವಣ್ಣ ನ್ಯಾಯಾಲಯದಲ್ಲಿ ಸ್ಟೇ ಪಡೆದುಕೊಂಡಿದ್ದರು. ಈ ಹಿಂದೆ ಪ್ರಜ್ವಲ್‌ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ಮೇಲೂ ಸ್ಟೇ ಪಡೆದಿದ್ದರು. ಈ ವೇಳೆ ಕಾರ್ತಿಕ್ ನನ್ನ ಬಳಿಗೆ ಬಂದು ವಕಾಲತ್ತು ಹಾಕಿ ಎಂದಿದ್ದ, ಈ ವೇಳೆ ಪ್ರಜ್ವಲ್ ರೇವಣ್ಣನ ವಿಡಿಯೋಗಳನ್ನು ನೋಡಿದ್ದೆ ಎಂದು ಎಳೆಎಳೆಯಾಗಿ ಮಾಹಿತಿ ನೀಡಿದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕಾರ್ತಿಕ್‌ ಬಂದು ನನ್ನ ಭೇಟಿ ಮಾಡಿದ ಸಂದರ್ಭದಲ್ಲಿ ಹಲವಾರು ಅಶ್ಲೀಲ ವೀಡಿಯೋ ಇತ್ತು. ಅದನ್ನು ನಾನು ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಸೇರಿ ಕೆಲ ಕಾಂಗ್ರೆಸ್ ನಾಯಕರಿಗೆ ಕಳುಹಿಸಿದೆ ಎಂದಿದ್ದಾರೆ.

    ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರಿಗೆ ಪತ್ರ ಬರೆದು ಇ ಮೇಲ್ ಮಾಡಲಾಗಿತ್ತು. ಆದ್ರೆ ಇ ಮೇಲ್ ಡೆಲಿವರ್ ಆಗಿರಲಿಲ್ಲ. ನಂತರ ವಿಜೇಯೇಂದ್ರ ಅವರಿಗೂ ವಿಡಿಯೋ ಬಗ್ಗೆ ಪತ್ರ ಬರೆದು ಕಛೇರಿಗೆ ನೀಡಿದ್ದೆ. ಅವರು ಹೇಳಿದಂತೆ ಪತ್ರ ಅವರಿಗೂ ತಲುಪಿಲ್ಲ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap