ಶಿರಸಿ:
ಯೂಟ್ಯೂಬರ್ ಒಬ್ಬ ಹಿಂದೂಗಳ ವಿರುದ್ದ ಧ್ವನಿ ಎತ್ತುತ್ತಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಡಿಸಿ, ಎಸ್ಪಿಗಳು ಏನು ಮಾಡುತ್ತಿದ್ದಾರೆ. ಮುಂಡಗೋಡಿನ ರಿಜಿಸ್ಟಾರ್ ಅವರನ್ನು ಏಕೆ ಅಮಾನತು ಮಾಡಿಲ್ಲ. ಇದೆಲ್ಲದಕ್ಕೂ ಬಶೀರ್ ಕೃಪೆ ಇದೆ. ಲವ್ ಜಿಹಾದ್ ಗೆ ಏನೆಲ್ಲ ಬೇಕು ಅದು ನಡೆಯುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಲವ್ ಜಿಹಾದ್ ವಿರುದ್ಧ ಮತ್ತೆ ಗುಡುಗಿದ ಮುತಾಲಿಕ್, ಯೂಟ್ಯೂಬರ್ ಕ್ವಾಜಾ ಮದುವೆ ವಿರುದ್ಧ ಮಾತನಾಡಿದ ಮುತಾಲಿಕ್, ಕ್ವಾಜಾ ವಿರುದ್ಧ ಕ್ರಮಕ್ಕೆ ಪೊಲೀಸ್ ಇಲಾಖೆ ಹಿಂದೇಟು ಹಾಕಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.








