ಪ್ರಸವ ವೇದನೆಯಿಂದ ಬಳತಿದ್ದ ಹಸುವಿನ ಜೀವ ಉಳಿಸಿದ ವೈದ್ಯರು

ನಾಯಕನಹಟ್ಟಿ 

      ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಮುಚ್ಚುಗುಂಟೆ ಗ್ರಾಮದ ನಿವಾಸಿಯಾದ ಗಾದ್ರಿಪಾಪಯ್ಯನವರ ರಾಜೇಶ್ ಕುಟುಂಬಕ್ಕೆ ಸೇರಿದ ಗರ್ಭ ಧರಿಸಿದ ಹಸಿವಿನ ಹೊಟ್ಟೆಯಲ್ಲಿ ಹಸುಗೂಸಿನ ಕರು ಹೊಟ್ಟೆಯಲ್ಲಿ ಸತ್ತುಹೋಗಿತ್ತು, ಈ ಸುದ್ದಿಯನ್ನು ತಿಳಿದ ಚಿತ್ರದುರ್ಗದ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮುಚ್ಚುಕುಂಟೆ ಇಂದು ಗ್ರಾಮದಲ್ಲಿ ಪ್ರಸವ ವೇದನೆಯಿಂದ ಬಳಲುತ್ತಿದ್ದ ಅಮೃಮಹಲ್ ಹಸುವನ್ನು ಸಿಸೇರಿಯನ್ ಮಾಡಿ ವಿಕೃತ ರೂಪದಲ್ಲಿದ್ದ ಕರುವನ್ನು ಶಸ್ತ್ರ ಚಿಕಿತ್ಸಕರಾದ ಡಾ.ದರ್ಶನ್ ಮತ್ತು ಡಾ.ರಕ್ಷಿತ್ ತಂಡವು ಯಶಸ್ವಿಯಾಗಿ ತೆಗೆದು ಹಸುವಿನ ಜೀವ ರಕ್ಷಣೆ ಮಾಡಿದ್ದಾರೆ.

      ಇವರ ಕಾರ್ಯವು ಅತ್ಯಂತ ಶ್ಲಾಘನೀಯ *ವೈದ್ಯೋ ನಾರಾಯಣೋ ಹರಿ* ಎಂದರೆ ಈ ವೈದ್ಯರೇ ದೇವರು ಎಂದರೆ ತಪ್ಪಾಗಲಾರದು, ಗ್ರಾಮದ ಜನತೆಯಲ್ಲಿ ಮಂದಹಾಸ ಮೂಡಿಸಿದ್ದಾರೆ ಈ ಸಂದರ್ಭದಲ್ಲಿ ಡಾ.ಟಿ. ಕೃಷ್ಣಪ್ಪ, ನಿವೃತ್ತ ಜಂಟಿ ನಿರ್ದೇಶಕರು, ಪಶು ವೈದ್ಯಕೀಯ ಇಲಾಖೆ, ಬೆಂಗಳೂರು ಹಾಗೂ ರಾಮ ಜೋಗಿಹಳ್ಳಿಯ ಪಶು ವೈದ್ಯ ಇಲಾಖೆಯ ಇನ್ಸ್ಪೆಕ್ಟರ್ ಜಯನಾಯ್ಕ ಇನ್ನಿತರೆ ಗ್ರಾಮಸ್ತರು ಹಾಜರಿದ್ದರು.

Recent Articles

spot_img

Related Stories

Share via
Copy link