ನವದೆಹಲಿ:
ಪ್ರಸ್ತಾವಿತ ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆಯ ಬಗ್ಗೆ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಮಾಲೋಚನೆ ನಡೆಸಿ ಹೊಸ ಪ್ರಸಾರ ಸೇವೆಗಳ ಕರಡನ್ನು ತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಪ್ರಸಾರ ಸೇವೆಗಳ (ನಿಯಂತ್ರಣ) ಕರಡನ್ನು ಡಿಜಿಪಬ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದಂತಹ ಮಾಧ್ಯಮ ಸಂಸ್ಥೆಗಳು ಟೀಕಿಸಿದ್ದು ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಸಂಘಗಳನ್ನು ಈ ಕ್ರಮದಲ್ಲಿ ಸಮಾಲೋಚಿಸಲಿಲ್ಲ ಎಂದು ಆರೋಪಿಸಿತ್ತು. ಮಸೂದೆಯ ಕೆಲವು ನಿಬಂಧನೆಗಳು ಆನ್ಲೈನ್ ಕಂಟೆಂಟ್ ಕ್ರಿಯೇಟರ್ಗಳಲ್ಲಿ ಕಳವಳ ಹುಟ್ಟುಹಾಕಿತ್ತು. ತಮ್ಮನ್ನು ಒಟಿಟಿ ಅಥವಾ ಡಿಜಿಟಲ್ ಸುದ್ದಿ ಪ್ರಸಾರಕರೊಂದಿಗೆ ಸೇರಿಸಲು ಪ್ರಯತ್ನಿಸಿದ್ದಾರೆ ಎಂದು ಕಂಟೆಂಟ್ ಕ್ರಿಯೇಟರ್ಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಪರಿಷ್ಕೃತ ಕರಡು ಮಸೂದೆಯು ಇನ್ಸ್ಟಾಗ್ರಾಮ್ ಇನ್ಫ್ಲ್ಯುಯೆನ್ಸರ್ಗಳು ಮತ್ತು ಯೂಟ್ಯೂಬರ್ಗಳನ್ನು ಅವರ ಬಳಕೆದಾರರ ನೆಲೆಯನ್ನು ವ್ಯಾಖ್ಯಾನಿಸಲು ‘ಡಿಜಿಟಲ್ ಸುದ್ದಿ ಪ್ರಸಾರಕರು ಎಂದು ವರ್ಗೀಕರಿಸಲು ಪ್ರಯತ್ನಿಸುತ್ತದೆ. ಕಂಟೆಂಟ್ ಪರಿಶೀಲನೆಗಾಗಿ ಅವರು ಸರ್ಕಾರದೊಂದಿಗೆ ಪೂರ್ವ ನೋಂದಣಿ ಪಡೆಯಬೇಕಾಗುತ್ತದೆ ಎಂದಿತ್ತು. ಇದು ವಾಕ್ ಸ್ವಾತಂತ್ರ್ಯದ ಬಗ್ಗೆ ಕಳವಳ ಹುಟ್ಟುಹಾಕಿತು.
ಕರಡು ಮಸೂದೆಯನ್ನು 2023ರ ನವೆಂಬರ್ 11ರಂದು ಸಮಾಲೋಚನೆಗಾ ಸಾರ್ವಜನಿಕ ಡೊಮೈನ್ನಲ್ಲಿ ಪ್ರಕಟಿಸಲಾಗಿತ್ತು. ಇತ್ತೀಚೆಗೆ, ಕರಡಿನ ಪರಿಷ್ಕೃತ ಆವೃತ್ತಿಯನ್ನು ಕೆಲವು ಆಯ್ದ ಪಾಲುದಾರರಿಗೆ ‘ರಹಸ್ಯವಾಗಿ’ ನೀಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.