ಮುಂಬೈ ದೇವಾಲಯದಲ್ಲಿ ಕಾಳಿ ಮಾತೆ ವಿಗ್ರಹಕ್ಕೆ​ ಮೇರಿ ರೂಪ : ಅರ್ಚಕ ಬಂಧನ

ಮುಂಬೈ:

    ಮುಂಬೈನ ದೇವಸ್ಥಾನವೊಂದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯ ವಿಗ್ರಹಕ್ಕೆ ಮೇರಿ ಮಾತೆಯಂತೆ ಅಲಂಕರಿಸಿರುವ ಘಟನೆಯೊಂದು ಭಾರೀ ಸುದ್ದಿಯಾಗುತ್ತಿದೆ.ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಮಂದಿ ಟೀಕೆ ಹಾಗೂ ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದಾರೆ.ಈ ನಡುವೆ ವಿಡಿಯೋ ವೈರಲ್ ಬೆನ್ನಲ್ಲೇ ದೇವಾಲಯದ ಅರ್ಚಕನನ್ನು ಮುಂಬೈ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

   ಇನ್ನು ವಿಚಾರಣೆ ವೇಳೆ ಅರ್ಚಕ ಹೇಳಿಕೆ ನೀಡಿದ್ದು. ‘ಕನಸಿನಲ್ಲಿ ದೇವತೆ ಕಾಣಿಸಿಕೊಂಡಿದ್ದು ವಿಗ್ರಹಕ್ಕೆ ಆ ರೀತಿಯಲ್ಲಿ ಅಲಂಕರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ರೀತಿ ಅಲಂಕರಿಸಿದ್ದೇನೆ ಎಂದು ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.ವೈರಲ್ ಆಗಿರುವ ವೀಡಿಯೋದಲ್ಲಿ ವಿಗ್ರಹಕ್ಕೆ ಬಿಳಿ ಬಣ್ಣದ ನಿಲುವಂಗಿ, ದೊಡ್ಡ ಕಿರೀಟ ಹಾಕಿ ಅಲಂಕಾರ ಮಾಡಲಾಗಿರುವುದು, ಯೇಸುವನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸಲಾದ ಮಗುವಿನ ಪ್ರತಿಮೆಯನ್ನು ತನ್ನ ತೋಳುಗಳಲ್ಲಿ ಹಿಡಿದಿರುವುದು ಕಂಡು ಬಂದಿದೆ.

Recent Articles

spot_img

Related Stories

Share via
Copy link