ಚೆನ್ನೈ:
ತಮಿಳು ನಾಡಿನಲ್ಲಿ ಅತ್ಯಂತ ಹೆಸರು ವಾಸಿಯಾದ ಹಾಸ್ಯನಟ ಯೋಗಿ ಬಾಬು ತಮ್ಮ ವಿಭಿನ್ನ ಅಭಿನಯ ಶೈಲಿಯಿಂದಲೇ ಎಲ್ಲರ ಮನೆ ಮಾತಾಗಿದ್ದಾರೆ.ಎಲ್ಲ ಸೂಪರ್ಸ್ಟಾರ್ಗಳೊಂದಿಗೂ ನಟಿಸಿ ಸೈ ಎನಿಸಿಕೊಂಡಿರುವ ಯೋಗಿ ಬಾಬು, ರಜನಿಕಾಂತ್ ಜತೆ ಜೈಲರ್ ಸಿನಿಮಾದಲ್ಲಿ ನಟಿಸಿದ್ದಾರೆ.
ಏನಿದು ಯೋಗಿ ಬಾಬು ತಮಿಳಿನ ಹಾಸ್ಯದ ಸೂಪರ್ ಸ್ಟಾರ್ ಆಗಿರಬಹುದು ಆದರೆ ಏಕೆ ಇಷ್ಟೋಂದು ಪೀಟಿಕೆ ಹಾಕುತ್ತಿದ್ದಾರೆ ಎಂದುಕೊಂಡರೆ ಈ ಹಾಸ್ಯ ದಿಗ್ಗಜನಿಗೆ ಸಂಬಂಧಿಸಿದ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ .
தீண்டாமை ஒரு பாவச்செயல்.😷 pic.twitter.com/LYnz0e5sZE
— ரத்தினவேல் மரைக்காயர் (@Pothumda) August 6, 2023
ಯೋಗಿ ಬಾಬು ಅವರು ಮುರುಗನ್ ದೇವರ ದೊಡ್ಡ ಭಕ್ತ. ಆಗಾಗ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಕಳೆದ ತಿಂಗಳು ತಿರುವಳ್ಳೂರ್ ಜಿಲ್ಲೆಯಲ್ಲಿರುವ ಸಿರುವಪುರಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ವೈರಲ್ ಆಗಿರುವ ಇದಕ್ಕೆ ಸಂಬಂಧಿಸಿದ್ದಾಗಿದೆ.
ಪಂಚೆ ಮತ್ತು ಶರ್ಟ್ ಧರಿಸಿ, ಹೂವು ಮತ್ತು ನಿಂಬೆಹಣ್ಣಿನ ಹಾರ ಹಾಕಿಕೊಂಡಿರುವ ಯೋಗಿ ಬಾಬು ಮೊದಲು ಅಭಿಮಾನಿಯೊಬ್ಬರ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಇದಾದ ಬಳಿಕ ತಮ್ಮ ಎದುರಿಗೆ ಇರುವ ಪೂಜಾರಿಯೊಬ್ಬರ ಬಳಿ ತೆರಳಿ ಶೇಕ್ ಹ್ಯಾಂಡ್ ಮಾಡಲು ಕೈ ಮುಂದೆ ಚಾಚುತ್ತಾರೆ. ಆದರೆ, ಪೂಜಾರಿ ಶೇಕ್ ಹ್ಯಾಂಡ್ ಮಾಡದೇ ಅಲ್ಲಿಯೇ ನಿಂತು ಮಾಡಿಸಿ ಕಳುಹಿಸುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ