ಯುಪಿಎಸ್​ಸಿ  ನೂತನ ಅಧ್ಯಕ್ಷರಾಗಿ ಪ್ರೀತಿ ಸೂದನ್ ಆಯ್ಕೆ….!

ನವದೆಹಲಿ 

   ಯುಪಿಎಸ್​ಸಿ  ನೂತನ ಅಧ್ಯಕ್ಷರಾಗಿ ಪ್ರೀತಿ ಸೂದನ್ ಆಯ್ಕೆಯಾಗಿದ್ದು, ಆಗಸ್ಟ್ 1 ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 1983ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪ್ರೀತಿ ಸೂದನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ವಿವಾದದ ಸಂದರ್ಭದಲ್ಲಿ ಯುಪಿಎಸ್‌ಸಿ ಮಾಜಿ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ ನೀಡಿದ ನಂತರ ಈ ಹುದ್ದೆ ಖಾಲಿಯಾಗಿತ್ತು.

    ಪ್ರೀತಿ ಮಾಜಿ ಆರೋಗ್ಯ ಕಾರ್ಯದರ್ಶಿಯಾಗಿದ್ದರು. ಅವರು 2022 ರಿಂದ UPSC ಸದಸ್ಯರಾಗಿದ್ದಾರೆ. ಪೂಜಾ ಖೇಡ್ಕರ್ ವಿವಾದ ಬೆಳಕಿಗೆ ಬಂದ ನಂತರ, UPSC ಮಾಜಿ ಮುಖ್ಯಸ್ಥ ಮಹೇಶ್ ಸೋನಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು.

    ಪ್ರೀತಿ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ. ಅವರು ಆಹಾರ ಸಂಸ್ಕರಣೆ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಕ್ಷಣಾ ಸಚಿವಾಲಯದಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಏಪ್ರಿಲ್ 2025 ರವರೆಗೆ ಈ ಹುದ್ದೆಯಲ್ಲಿ ಇರುತ್ತಾರೆ.

   ಟ್ರೈನಿ ಐಎಎಸ್ ಪೂಜಾ ಖೇಡ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ನಡೆಯುತ್ತಿವೆ. ಅವರು ಸಲ್ಲಿಸಿರುವ ಎಲ್ಲಾ ದಾಖಲೆಗಳು ನಕಲಿ ಎಂಬುದು ತಿಳಿದುಬಂದಿದ್ದು ಅವರ ತರಬೇತಿಯನ್ನು ತಡೆಹಿಡಿಯಲಾಗಿದೆ. ಟ್ರೈನಿ ಐಎಎಸ್ ಪೂಜಾ ವಿರುದ್ಧ ಯುಪಿಎಸ್‌ಸಿ ಎಫ್‌ಐಆರ್ ಕೂಡ ದಾಖಲಿಸಿದೆ.

 

Recent Articles

spot_img

Related Stories

Share via
Copy link