ಶಿರಸಿ:
ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಷನ್ ಹಾಗೂ ಪಿ ಆ್ಯಂಡ್ ಜಿ ಮೀಡಿಯಾ ಕಮ್ಯೂನಿಕೇಶನ್ ಸಂಯುಕ್ತಾಶ್ರಯದಲ್ಲಿ ಕೊಡಲ್ಪಡುವ 2025 ನೇ ಸಾಲಿನ ಪ್ರೇಮ್‍ಜಿ ಅಚೀವರ್ಸ್ ಅವಾರ್ಡ್ ನ ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಕೃಷ್ಣಿ ಶಿರೂರ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 21ರಂದು ಸಂಜೆ 6ಗಂಟೆಗೆ ಹುಬ್ಬಳ್ಳಿಯ ನವೀನ್ ಪಂಚತಾರ ಹೋಟೆಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಜಿಲ್ಲೆಯವರಾದ ಕೃಷ್ಣಿ ಶಿರೂರ್ ಶಿರಸಿಯಲ್ಲಿ ಕೂಡ ಪ್ರಜಾವಾಣಿ ವರದಿಗಾರರಾಗಿ ಕಾರ್ಯ ಮಾಡಿದ್ದು, ಪ್ರಸ್ತುತ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕ ಕೃತಿ ರಚಿಸಿದ ಇವರು ಕ್ಯಾನ್ಸರ್ ಕುರಿತು ಮುದ್ರಾ ಜಾಗೃತಿ ಅಭಿಯಾನ ಕೂಡ ನಡೆಸುತ್ತಿದ್ದಾರೆ.ಇವರ ಅನೇಕ ಬರಹ, ವರದಿಗಳು ರಾಜ್ಯದ ಗಮನ ಸೆಳೆದಿವೆ ಎಂಬುದು ಉಲ್ಲೇಖನೀಯ.








