ನವದೆಹಲಿ:
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕೈಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿ, ಇತರ ಗಣ್ಯರ ಸಮ್ಮುಖದಲ್ಲಿ ಕರ್ನಾಟಕದ ಎಸ್ ಎಲ್ ಬೈರಪ್ಪ, ಸುಧಾಮೂರ್ತಿ ಹಾಗೂ ಇನ್ನೂ ಇತರಿರಿಗೆ ಪ್ರಶಸ್ತಿ ನೀಡಲಾಯಿತು.
ಸುಧಾಮೂರ್ತಿಯವರ ಪುತ್ರಿ ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಕೂಡ ಕಾರ್ಯಕ್ರಮಕ್ಕೆ ಬಂದು ಗಣ್ಯರ ಮಧ್ಯೆ ಕುಳಿತು ಅಮ್ಮ ರಾಷ್ಟ್ರಪತಿಗಳ ಕೈಯಿಂದ ಪ್ರಶಸ್ತಿ ಸ್ವೀಕರಿಸುವುದನ್ನು ಕಣ್ತುಂಬಿಕೊಂಡರು.
ಸುಧಾಮೂರ್ತಿಯವರ ಪತಿ ಎನ್ ಆರ್ ನಾರಾಯಣ ಮೂರ್ತಿ, ಪುತ್ರ ರೋಹನ್ ಮೂರ್ತಿ, ಸುಧಾಮೂರ್ತಿ ಯವರ ಸೋದರಿ ಡಾ ಸುನಂದಾ ಕುಲಕರ್ಣಿಯವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಸುಧಾ ಮೂರ್ತಿ, ಈ ಪ್ರಶಸ್ತಿಗೆ ನಾನು ಭಾರತದ ಜನತೆಗೆ ಋಣಿಯಾಗಿದ್ದೇನೆ. ಇಂದಿನ ನನ್ನ ಮನ್ನಣೆಯು ಯುವ ಪೀಳಿಗೆಯನ್ನು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಮಹಾನ್ ರಾಷ್ಟ್ರದ ನಿರಂತರ ಅಭಿವೃದ್ಧಿಗೆ ಇದು ಅಗತ್ಯವಿದೆ. ಕೆಲವರ ಉದಾರತೆಯು ಶತಕೋಟಿ ಜನತೆಗೆ ಭರವಸೆ ನೀಡಬಹುದು ಎಂದು ನಾನು ಯಾವಾಗಲೂ ಭಾವಿಸುತ್ತೇನೆ ಎಂದಿದ್ದಾರೆ ಮತ್ತು ನಾರಾಯಣ ಮೂರ್ತಿಯವರಿಗೆ 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಬಂದಿತ್ತು. .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ