ಸುರಿನೇಮ್ ದೇಶದ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಭಾರತದ ರಾಷ್ಟ್ರಪತಿ ..!

ನವದೆಹಲಿ: 

      ಸುರಿನೇಮ್ ದೇಶ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್’ ಅನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿ ಗೌರವಿಸಿದೆ. ಇದು ಮುರ್ಮು ಅವರು ರಾಷ್ಟ್ರಪತಿಗಳಾದ ಬಳಿಕದ ಮೊದಲ ವಿದೇಶ ಪ್ರವಾಸವಾಗಿದೆ. ಜೂನ್ 4ರಿಂದ ಮೂರು ದಿನಗಳ ಪ್ರವಾಸದಲ್ಲಿರುವ ಅವರಿಗೆ ಸುರಿನೇಮ್ನ ಅತ್ಯುನ್ನತ ಗೌರದ ಸಂದಿದೆ. ದಕ್ಷಿಣ ಅಮೆರಿಕದ ಚಿಕ್ಕ ರಾಷ್ಟ್ರವಾದ ಸುರಿನೇಮ್ಗೆ ಭೇಟಿ ನೀಡಿರುವ ಮುರ್ಮು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.

     ಇದೇ ವೇಳೆ, ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳೂ ನಡೆದು ಅಧ್ಯಕ್ಷರು ಸಹಿ ಹಾಕಿದರು. ಸುರಿನೇಮ್ ಅತ್ಯುನ್ನತ ಗೌರವವನ್ನು ಪಡೆದ ಚಿತ್ರಗಳನ್ನು ರಾಷ್ಟ್ರಪತಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಸುರಿನೇಮ್ನ ಅತ್ಯುನ್ನತ ಪ್ರಶಸ್ತಿಯಾದ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್ ಅನ್ನು ಸ್ವೀಕರಿಸಿರುವುದು ದೊಡ್ಡ ಗೌರವ ತಂದಿದೆ. ಈ ಮನ್ನಣೆಯು ನನಗೆ ಮಾತ್ರವಲ್ಲದೆ ನಾನು ಪ್ರತಿನಿಧಿಸುವ ಭಾರತದ 140 ಕೋಟಿ ಜನರಿಗೆ ಸಂದ ಗೌರವವಾಗಿದೆ. ನಾನು ಈ ಗೌರವವನ್ನು ಭಾರತೀಯ-ಸುರಿನೇಮ್ ರಾಷ್ಟ್ರಗಳ ಸಂಬಂಧಗಳಿಗೆ ಶ್ರಮಿಸುವ ವರ್ಗಕ್ಕೆ ಅರ್ಪಿಸುವೆ’ ಎಂದು ಬರೆದುಕೊಂಡಿದ್ದಾರೆ.

     ಸುರಿನೇಮ್ಗೆ ಭಾರತೀಯರ ಆಗಮನದ 150 ನೇ ವಾರ್ಷಿಕೋತ್ಸವದ ವೇಳೆ ಈ ಗೌರವ ಸ್ವೀಕರಿಸಿರುವುದು ವಿಶೇಷವಾಗಿದೆ. ಈ ಗೌರವವು ನಮ್ಮ ಎರಡೂ ದೇಶಗಳಲ್ಲಿನ ಮಹಿಳೆಯರ ಸಬಲೀಕರಣ ಮತ್ತು ಪ್ರೋತ್ಸಾಹದ ದಾರಿದೀಪವಾಗಿ ಕಾರ್ಯನಿರ್ವಹಿಸಿದರೆ ಇದಕ್ಕೆ ಇನ್ನಷ್ಟು ಅರ್ಥ ಬರಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.

     ವೈದ್ಯಕೀಯ ಉತ್ಪನ್ನ, ಉತ್ತಮ ಅಭ್ಯಾಸಗಳ ವಿನಿಮಯ ಮತ್ತು ಔಷಧಗಳು ಮತ್ತು ಔಷಧ ನಿಯಂತ್ರಕಗಳಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳ ಒಪ್ಪಂದಕ್ಕೆ ಉಭಯ ರಾಷ್ಟ್ರಗಳ ಮುಖ್ಯಸ್ಥರು ಸಹಿ ಹಾಕಿದರು. ಮೂರು ದಿನಗಳ ಪ್ರವಾಸದಲ್ಲಿರುವ ಭಾರತದ ರಾಷ್ಟ್ರಪತಿಗಳು ಇಂದು ಸುರಿನೇಮ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸುವರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap