ಬೆಂಗಳೂರು
ಗೌರಿ ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ ಲಾಟರಿ. ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ಸುಲಿಗೆಗೆ ಇಳಿಯುತ್ತಾರೆ. ರಜೆ ಎಂದು ಮನೆ ಕಡೆ ಹೊರಟವರ ಜೇಬಿಗೆ ಕನ್ನ ಹಾಕುತ್ತಾರೆ. ಹೀಗೆ ಅವಕಾಶ ಸಿಕ್ಕಗಾಲೆಲ್ಲ ದರ ಏರಿಸುವ ಖಾಸಗಿ ಬಸ್ ಮಾಲೀಕರು ವಿಘ್ನ ವಿನಾಯಕ ಗಣೇಶ ಹಬ್ಬಕ್ಕೆ ಎರಡ್ಮೂರು ದಿನಗಳ ರಜೆ ಇದೆ ಎಂದು ಮನೆ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಟಿಕೆಟ್ ದರ ಏರಿಕೆ ಶಾಕ್ ನೀಡಿದ್ದಾರೆ.
ಸೆಪ್ಟೆಂಬರ್ 6 ಶುಕ್ರವಾರ ಗೌರಿ ಹಬ್ಬ. 7 ರಂದು ಗಣೇಶನ ಹಬ್ಬ. ಭಾನುವಾರ ಹೇಗೂ ರಜೆ. ಹೀಗಾಗಿ ಐದರಂದು ಊರಿಗೆ ತೆರಳಲು ಜನರು ಪ್ಲಾನ್ ಮಾಡಿದ್ದಾರೆ. ಆದರೆ ಖಾಸಗಿ ಬಸ್ಗಳಲ್ಲಿ ದುಪ್ಪಟ್ಟು ದರ ಏರಿಕೆ ಆಗಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸೆಪ್ಟೆಂಬರ್ 3ರಂದು ಖಾಸಗಿ ಬಸ್ಗಳ ಟಿಕೆಟ್ ದರ ವಿವರ
- ಬೆಂಗಳೂರು – ಹಾವೇರಿ: 600 – 1200 ರೂ.
- ಬೆಂಗಳೂರು-ಗುಲ್ಬರ್ಗ : 600-1200 ರೂ.
- ಬೆಂಗಳೂರು-ಯಾದಗಿರಿ: 600-1400 ರೂ.
- ಬೆಂಗಳೂರು-ದಾವಣಗೆರೆ: 550-900 ರೂ.
- ಬೆಂಗಳೂರು-ಹಾಸನ: 475-600 ರೂ.
- ಬೆಂಗಳೂರು-ಧಾರವಾಡ: 500-1100 ರೂ.
- ಬೆಂಗಳೂರು-ಚಿಕ್ಕಮಗಳೂರು: 500-900 ರೂ.
ಸೆಪ್ಟೆಂಬರ್ 5ರಂದು ಖಾಸಗಿ ಬಸ್ ಟಿಕೆಟ್ ದರ
- ಬೆಂಗಳೂರು-ಹಾವೇರಿ: 1550-1600 ರೂ.
- ಬೆಂಗಳೂರು-ಗುಲ್ಬರ್ಗ: 1200-1800 ರೂ.
- ಬೆಂಗಳೂರು-ಯಾದಗಿರಿ: 1100-1750 ರೂ.
- ಬೆಂಗಳೂರು-ದಾವಣಗೆರೆ: 900-2000 ರೂ.
- ಬೆಂಗಳೂರು-ಹಾಸನ: 899-1800 ರೂ.
- ಬೆಂಗಳೂರು-ಧಾರವಾಡ: 1200-3000 ರೂ.
- ಬೆಂಗಳೂರು-ಚಿಕ್ಕಮಗಳೂರು: 900-1500 ರೂ.
ಗೌರಿ- ಗಣೇಶ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಕೆಎಸ್ಆರ್ಟಿಸಿ ಗುಡ್ ನ್ಯೂಸ್ ನೀಡಿದೆ. ಊರಿಗೆ ಹೋಗುವ ಪ್ರಯಾಣಿಕರಿಗಾಗಿ 1500 ಹೆಚ್ಚುವರಿ ಬಸ್ಗಳನ್ನು ನಿಯೋಜನೆ ಮಾಡಲಾಗಿದೆ. ಸೆ.5 ರಿಂದ ಸೆ.7 ರವರೆಗೆ ಬೆಂಗಳೂರಿನಿಂದ ಈ ಹೆಚ್ಚುವರಿ ಬಸ್ಗಳು ಹೊರಡಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ,ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ದಾರವಾಡ, ದಾವಣಗೆರೆ ತಿರುಪತಿ, ವಿಜಯವಾಡ, ಹೈದಾರಬಾದ್ಗೆ ವಿಶೇಷ ಕಾರ್ಯಚರಣೆ ಮಾಡಲಿವೆ.