ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೋಂಬತ್ತಿ ಬೆಳಕಲ್ಲಿ ಹೆರಿಗೆ!!

ತೋವಿನಕೆರೆ :

      ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆರಿಗೆ ವಾರ್ಡ್‍ನಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಮೋಂಬತ್ತಿ ಬೆಳಕಿನಲ್ಲಿ ಹೆರಿಗೆ ಮಾಡಿಸಿರುವ ನೋವಿನ ಘಟನೆ ಸೋಮವಾರ ರಾತ್ರಿ ನಡೆದಿದೆ.

     ಸಮೀಪದ ಕುರಂಕೋಟೆ ಪಂಚಾಯ್ತಿ ಗ್ರಾಮ ವ್ಯಾಪ್ತಿಯ ಬಂಡೇಹಳ್ಳಿ ಗೊಲ್ಲರಹಟ್ಟಿಯ ನಾಗರಾಜು ಪತ್ನಿ ಮಂಗಳಮ್ಮ ನವರ ಹೆರಿಗೆಗಾಗಿ ತೋವಿನಕೆರೆ ಆಸ್ಫತ್ರೆಗೆ ಕರೆದು ಕೊಂಡು ಬಂದಿದ್ದಾರೆ. ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಮಹಿಳೆ ಇದ್ದುದರಿಂದ ಸಿಬ್ಬಂದಿ ಹೆರಿಗೆಯನ್ನು ತೋವಿನಕೆರೆಯಲ್ಲಿ ಮಾಡಿಸಲು ಪ್ರಯತ್ನ ನಡೆಸಿದ್ದಾರೆ.
ಕೆಲವು ವರ್ಷದಿಂದ ಹೆರಿಗೆ ವಾರ್ಡ್ ಮಳೆ ನೀರಿನಿಂದ ಸೋರುತ್ತಿದ್ದರೂ ಜನ ಪ್ರತಿನಿಧಿಗಳು ಇದುವರೆಗೂ ಸರಿ ಪಡಿಸುವ ಗೋಜಿಗೆ ಹೋಗಿಲ್ಲ. ವಿದ್ಯುತ್ ಸ್ವಿಚ್ ಹಾಕಿದ್ದರೆ ಹೆರಿಗೆ ವಾರ್ಡ್‍ನ ಗೋಡೆಗಳು ಶಾಕ್ ಹೊಡೆಯುತ್ತವೆ ಎನ್ನುವ ಕಾರಣದಿಂದ ಸಂಪರ್ಕ ತೆಗೆಯಲಾಗಿದೆ. ಮಂಗಳಮ್ಮನ ಹೆರಿಗೆ ಮಾಡಲೇಬೇಕಾದ ತುರ್ತು ಪರಿಸ್ಥಿತಿ ಇದ್ದುದರಿಂದ ಮೋಂಬತ್ತಿಗಳನ್ನು ತರಿಸಿ ಸುತ್ತಲೂ ಹಚ್ಚಿಕೊಂಡು ಆಸ್ಪತ್ರೆ ಸಿಬ್ಬಂದಿ ಸೋಮವಾರ ರಾತ್ರಿ ಹೆರಿಗೆ ಮಾಡಿಸಿದ್ದಾರೆ.

     ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರವು ಸರ್ಕಾರ ನಿಗದಿ ಪಡಿಸಿರುವುದಕ್ಕಿಂತಲೂ ಹೆಚ್ಚು ಹೆರಿಗೆಗಳನ್ನು ಮಾಡಿಸಿ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಇಂತಹ ಕೇಂದ್ರದಲ್ಲಿ ವಿದ್ಯುತ್ ಇಲ್ಲದೆ ಮೇಣದ ಬತ್ತಿ ಬೆಳಕಲ್ಲಿ ಹೆರಿಗೆ ಮಾಡಿಸಿರುವುದು ಬಹಳ ನೋವಿನ ವಿಷಯ. ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

-ಪಿ.ಆರ್. ಸುಧಾಕರಲಾಲ್, ಮಾಜಿ ಶಾಸಕರು. ಕೊರಟಗೆರೆ.

      ಮೇಣದ ಬತ್ತಿ ಬೆಳಕಲ್ಲಿ ಹೆರಿಗೆ ಮಾಡಿಸುತ್ತಿದ್ದಾಗ ನರ್ಸ್‍ಗಳು ಬಹಳ ಆತಂಕದಲ್ಲಿದ್ದರು. ಕೊನೆಯ ಹಂತದಲ್ಲಿ ಸಮೀಪದ ಅಂಗಡಿಯವರಿಂದ ಟಾರ್ಚ್‍ಗಳನ್ನು ಸಹ ತಂದು ಕೊಡಲಾಯಿತು. ತೋವಿನಕೆರೆ ಸುತ್ತಮುತ್ತಲಿನ 40 ಹಳ್ಳಿಗಳ ಜನರು ಈ ಆಸ್ಪತ್ರೆಯನ್ನೆ ನಂಬಿಕೊಂಡಿದ್ದಾರೆ. ವರ್ಷವೊಂದಕ್ಕೆ ಇಲ್ಲಿ ನೂರಾರು ಹೆರಿಗೆಗಳಾಗುತ್ತವೆ. ಆದರೂ ಇಲ್ಲಿ ವಿದ್ಯುತ್ ಅನುಕೂಲವಿಲ್ಲದಿರುವುದು ವಿಪರ್ಯಾಸವೆ ಸರಿ.

-ನಾಗರಾಜು, ಬಾಣಂತಿ ಮಂಗಳಮ್ಮನವರ ಪತಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link