‘ವಂಶ ರಾಜಕಾರಣ’ಕ್ಕೆ ‘ಪ್ರಧಾನಿ ಮೋದಿ’ ಬ್ರೇಕ್: ‘ರಾಜ್ಯ ಕೇಸರಿಪಡೆ’ಯಲ್ಲಿ ಹೆಚ್ಚಿದ ಆತಂಕ.!

ಬೆಂಗಳೂರು:

 ರಾಷ್ಟ್ರೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದ್ರೇ.. ಪ್ರಧಾನಿ ನರೇಂದ್ರ ಮೋದಿ ) ಅವರು ಈ ಬಗ್ಗೆ ಹೇಳಿಕೆ ಬೆನ್ನಲ್ಲೆ ರಾಜ್ಯ ಕೇಸರಿಪಡೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪಕ್ಷದಲ್ಲಿ ವಂಶವಾದದಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟ ಸಂದೇಶ ರವಾನಿಸಿರುವ ಪ್ರಧಾನಿ ಮೋದಿ, ಸಂಸದೀಯ ಪಕ್ಷದ ಸಭೆಯಲ್ಲಿ ಕಠಿಣ ಸಂದೇಶ ರವಾನಿಸಿದ್ದಾರೆ. ಹೀಗಾಗಿ ರಾಜ್ಯ ಕೇಸರಿ ಪಡೆಯಲ್ಲಿ ಆತಂಕ ಶುರುವಾಗಿದೆ.

ಹೌದು.. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ನಡೆದಂತ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದಲ್ಲಿ ವಂಶವಾದದಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟ ಸಂದೇಶ ರವಾನಿಸಿರುವ ಕಾರಣ, ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಠಿಯಾಗಿದೆ. ಈ ಮೂಲಕ ಗುಜರಾತ್, ‌ಕರ್ನಾಟಕ ರಾಜ್ಯಗಳಲ್ಲಿ ಚುನಾವಣೆಗೆ ಎದುರು ನೋಡಿತ್ತಿರುವ ಹೊತ್ತಲ್ಲೇ ಪ್ರಾಮುಖ್ಯತೆ ಪಡೆದುಕೊಂಡಿದೆ.

https://prajapragathi.com/punits-birthday-celebrated-in-subramanyanagar-sweet-breakfast-delivery/

ಇದಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು, ಪಂಚರಾಜ್ಯ ಚುನಾವಣೆ ವೇಳೆ ವಂಶವಾದ ರಾಜಕಾರಣಕ್ಕೆ ಅವಕಾಶ ನೀಡಿಲ್ಲ. ಇದೀಗ ಮೋದಿ ಹೇಳಿಕೆ ಬೆನ್ನಲ್ಲೆ ರಾಜ್ಯ ಬಿಜೆಪಿ ನಾಯಕರಲ್ಲೂ ಆತಂಕ ಮನೆ ಮಾಡಿದೆ. ಅಲ್ಲದೇ ರಾಜ್ಯ ಬಿಜೆಪಿಯಲ್ಲಿ ಕುಟುಂಬದಿಂದ ಇಬ್ಬರು, ಮೂವರು ಟಿಕೆಟ್ ಬಯಸುವವರಿಗೆ ಟಿಕೆಟ್ ಕೈ ತಪ್ಪುವ ಆತಂಕ ಎದುರಾಗಿದೆ. ಜೊತೆಗೆ ತಮಗೆಲ್ಲಿ ಟಿಕೆಟ್ ತಪ್ಪಲಿದೆಯೋ ಎಂಬ ಭಯ ಕೂಡ ಶುರುವಾಗಿದೆ.

ಅದರಲ್ಲೂ ಯಡಿಯೂರಪ್ಪ, ಜಾರಕಿಹೊಳಿ, ಶೆಟ್ಟರ್, ರೆಡ್ಡಿ, ನಿರಾಣಿ, ಜೊಲ್ಲೆ, ಅಪ್ಪಚ್ಚು ರಂಜನ್, ರವಿ ಸುಬ್ರಹ್ಮಣ್ಯ ಕುಟುಂಬಗಳಲ್ಲಿ ಟಿಕೆಟ್ ತಪ್ಪುವ ಚಿಂತೆ ಶುರುವಾಗಿದೆ. 2023ರ ವಿಧಾನಸಭಾ ಚುನಾವಣೆಗೆ ಟಿಕೆಟ್ ತಪ್ಪಬಹುದೆಂಬ ಆತಂಕ ಕೂಡ ಕಾಡುತ್ತಿದೆ.

https://prajapragathi.com/puneet-raj-kumar-to-be-awarded-karnataka-ratna-award-cm-basavaraja-bommai/

ಹೀಗಿದೆ.. ರಾಜ್ಯ ಬಿಜೆಪಿ ಕುಟುಂಬ ರಾಜಕಾರಣ

ಯಡಿಯೂರಪ್ಪ ಕುಟುಂಬ;
ರಾಘವೇಂದ್ರ – ಸಂಸದ
ವಿಜಯೇಂದ್ರ – ಕ್ಷೇತ್ರದ ಹುಡುಕಾಟ

ಜಗದೀಶ್ ಶೆಟ್ಟರ್ – ಶಾಸಕ
ಪ್ರದೀಪ್ ಶೆಟ್ಟರ್- ಪರಿಷತ್ ಸದಸ್ಯ

ರಮೇಶ್ ಜಾರಕಿಹೊಳಿ- ಶಾಸಕ ಬಾಲಚಂದ್ರ ಜಾರಕಿಹೊಳಿ – ಶಾಸಕ

ಅಪ್ಪಚ್ಚು ರಂಜನ್ – ಶಾಸಕ
ಸೃಜಾ‌ಕುಶಾಲಪ್ಪ – ಪರಿಷತ್ ಸದಸ್ಯ

ರವಿ ಸುಬ್ರಹ್ಮಣ್ಯ – ಶಾಸಕ
ತೇಜಸ್ವಿ ಸೂರ್ಯ – ಸಂಸದ

ಶಶಿಕಲಾ ಜೊಲ್ಲೆ – ಸಚಿವೆ
ಅಣ್ಣಾ ಸಾಹೇಬ್ ಜೊಲ್ಲೆ – ಸಂಸದ

ಕರುಣಾಕರ್ ರೆಡ್ಡಿ – ಶಾಸಕ
ಸೋಮಶೇಕರ್ ರೆಡ್ಡಿ – ಶಾಸಕ

ಮುರುಗೇಶ್ ನಿರಾಣಿ – ಸಚಿವ
ಹನುಮಂತ ನಿರಾಣಿ – ಪರಿಷತ್ ಸದಸ್ಯ

     https://prajapragathi.com/medical-seat-scam-for-ineligible-students/

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link