ಪ್ರಧಾನಿ ಮೋದಿ ಶ್ರೀಗಳ ಹಾದಿಯಲ್ಲಿ ನಡೆದವರು: ಅಮಿತ್ ಷಾ

ತುಮಕೂರು:

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಜೀವನದಲ್ಲಿ ಮೂರು ಬಾರಿ ಸಿದ್ಧಗಂಗಾ ಮಠಕ್ಕೆ ಬಂದಿದ್ದೇನೆ, ಇಲ್ಲಿಗೆ ಬಂದಾಗಲೆಲ್ಲ ಉತ್ಸಾಹ ಹೆಚ್ಚಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.ದೇಶ ಸಂಸ್ಕೃತಿಯ ತವರೂರು, ಜ್ಯೋತಿರ್ಲಿಂಗಗಳು, ಪುರಾಣಗಳು ಇವೆ, ಪುಣ್ಯ ಸ್ಥಳಗಳು ಇವೆ ಆದರೆ ಶಿವಕುಮಾರ ಸ್ವಾಮೀಗಳು ತಮ್ಮ ಸೇವೆಯಿಂದ ಪುಣ್ಯಕ್ಷೇತ್ರವನ್ನು ಮಾಡಿದರು ಎಂದು ಹೇಳಿದರು.

ಅಟಲ್ ಜೀ ಇಲ್ಲಿಗೆ ಬಂದಾಗ ಉತ್ತರದಲ್ಲಿ ಗಂಗಾ ದಕ್ಷಿಣದಲ್ಲಿ ಸಿದ್ಧಗಂಗಾ ಎಂದಿದ್ದರು, ಗಂಗಾದಲ್ಲಿ ಮುಳುಗಿದರೆ ಪಾಪ ಹೋಗುತ್ತದೆ, ಸಿದ್ಧಗಂಗೆಗೆ ಬಂದರೆ ಜನ್ಮಜನ್ಮಾಂತರದ ಪುಣ್ಯ ಜಾಗೃತವಾಗುತ್ತದೆ ಅದಕ್ಕಾಗಿಯೇ ಅಟಲ್ ಜೀ ಸಿದ್ಧಗಂಗೆ ಪ್ರಾಶಸ್ತ್ಯ ನೀಡಿದ್ದರು, ಇಲ್ಲಿ ಅಂತಹ ಶಕ್ತಿ ಇದೆ, ಶಿವಕುಮಾರ ಸ್ವಾಮೀಜಿ ಅವರ ಕರ್ಮಸ್ಥಳ ಇದು ಎಂದರು.

ಶ್ರೀ ಗಳ ಚರಿತ್ರೆ ಯನ್ನು ಪಠ್ಯ ದಲ್ಲಿ ಅಳವಡಿಸಬೇಕೆಂದು ಸಿಎಂ ರಲ್ಲಿ ಮನವಿ ಮಾಡಿದ ಮಾಜಿ ಸಿಎಂ ಬಿಎಸ್ ವೈ

ಆಧುನಿಕ ಭಾರತದ ಬಸವಣ್ಣ. ಸಿದ್ಧ ಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಅವರು ಹಾಕಿಕೊಟ್ಟ ಅನ್ನ, ಶಿಕ್ಷಣ, ಆಶ್ರಯದ ಮೂರು ತತ್ವಗಳಡಿಯಲ್ಲೇ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು ಉತ್ತರದಲ್ಲಿ ಗಂಗೆಯಲ್ಲಿ ಮಿಂದು ಪಾಪ ಕಳೆದುಕೊಂಡರೆ ದಕ್ಷಿಣ ದಲ್ಲಿ ಸಿದ್ಧಗಂಗೆಗೆ ಬಂದರೆ ಪುಣ್ಯ ಕಾರ್ಯ ಜಾಗೃತ ಗೊಳ್ಳುತ್ತದೆ ಎಂದು ಹೇಳಿ ತಾವಿಲ್ಲಿಗೆ ಮೂರು ಬಾರಿ ಬಂದಾಗಲೂ ಒಳ್ಳೆಯ ಸಂಸ್ಕಾರಯುತ ವಿಚಾರ ಗಳನ್ನೆ ಕೊಂಡೊಯ್ದಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ನುಡಿದರು.

ಡಾ.ಶಿವಕುಮಾರಸ್ವಾಮೀಜಿಗಳ ಚೈತನ್ಯದ ಆತ್ಮ ಎಲ್ಲಿರುತ್ತದೆ ಅಲ್ಲಿ ಅಭಿವೃದ್ಧಿಯಾಗುತ್ತದೆ, 80 ವರ್ಷಗಳ ಕಾಲ ಮಠಾಧೀಶರಾಗಿ ಸಮಾಜಕ್ಕೆ ನೀಡಿರುವ ತತ್ವಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link