ಸಾರ್ವಜನಿಕರ ಒಕ್ಕಣಿ ಕಣ ಖಾಸಗಿಯವನ ಪಾಲು

ಕೊಡಿಗೇನಹಳ್ಳಿ:

      ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಸರ್ಕಾರಿ ಜಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾರ್ವಜನಿಕರ ಕಣಗಳನ್ನು ಮಾಡಿದ್ದು ಸಾರ್ವಜನಿಕ ಒಕ್ಕಣಿ ಕಣ ಖಾಸಗಿಯವರ ಪಾಲಾಗಿದೆ ಎಂದು ರೈತರು ಅಗ್ರಹಿಸಿದರು.

    ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ 183 ರಲ್ಲಿ 10.13 ಗುಂಟೆಯಲ್ಲಿ 30 ಗುಂಟೆ ಖರಾಬಿನಲ್ಲಿ 2019 ರಲ್ಲಿ ಗ್ರಾಮ ಪಂಚಾಯಿತಿ ರಾಮಕೃಷ್ಣರೆಡ್ಡಿ ಜಮೀನಿನ ಪಕ್ಕದಲ್ಲಿ ಸರ್ಕಾರಿ ಜಮೀನಿನಲ್ಲಿ ಸಾರ್ವಜಿಕ ಒಕ್ಕಣಿ ಕಣವನ್ನು ಎಂ.ಜಿ.ಎನ್.ಆರ್.ಇ.ಜಿ ಯೋಜನೆಯಡಿ ಕಣ ನಿರ್ಮಾಣ ಮಾಡಿದ್ದು ಇದು ಸಾರ್ವಜನಿಕರು ಬಳಸುತ್ತಿದ್ದರು.

    ಆದರೆ ಏಕಾ ಏಕಿ ಜಮಿನಿನ ಮಾಲಿಕರಾದ ಸಿದ್ದಮ್ಮ ಮತ್ತು ಅವರ ಮಗ ಅಶ್ವತ್ಥರೆಡ್ಡಿ ಸುಮಾರು 15 ಎಕರೆ ಭೂಮಿ ಇದ್ದು ಸಾರ್ಕಾರಿ ಸೌಲಭ್ಯಗಳಪಡೆದಿದು ಕಣವನ್ನು ನುಂಗಳು ಪ್ರಯತ್ತಿಸುಸಲು ಕಣದಲ್ಲಿ ಹುಲ್ಲು ಬಣವೆಯನ್ನು ಹಾಕಿ ದಾರಿ ಬಿಡದೆ ತೋದರೆಮಾಡುತ್ತಿದ್ದಾರೆ ಎಂದು ಗೌರೆಡಿ ಪಾಳ್ಯಾದ ಗ್ರಾಮಸ್ಥರ ಅರೋಪಿಸಿದರು.

     ಸ್ಥಳಕ್ಕೆ ಬಂದ ಪಿಡಿಓ ಸತ್ಯನಾರಾಯಣ, ಕಾರ್ಯದರ್ಶಿ ಗೋಪಾಲ್ ಹಾಗೂ ಗ್ರಾ.ಪಂ ಸದಸ್ಯರ ಮೇಲೆ ಮಾಲಿಕರು ಮುಗಿಬಿದ್ದರು ತಕ್ಷಣ ಮಧ್ಯಪ್ರವೇಶಮಾಡಿದ ಮಾ.ಜಿ ಗ್ರಾ.ಪಂ ಅಧ್ಯಕ್ಷ ಮುಕ್ತಿಯಾರ್ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ಸರ್ಕಾರ ಸರ್ಕಾರಿ ಜಾಗದಲ್ಲಿ ಹಾಗೂ ಖರಾಬ್ ಸ್ಥಳದಲ್ಲಿ ಕಣಗಳನ್ನು ನಿರ್ಮಾಣ ಮಾಡಿದ್ದು ಇವುಗಳನ್ನು ಸಾರ್ವಜನಿಕರ ಸದ್ಬಳಕೆಮಾತ್ರ ಸೀಮಿತ ಎಂದು ಮಾಲಿಕರಿಗೆ ಮನವರಿಕೆಮಾಡಿದರು.

     ಗ್ರಾ.ಪಂ ಸದಸ್ಯ ಕೆ.ಎಂ. ರಾಜೇಶ್ ಹಾಗೂ ರೈತರು ಸಹಬಾಳ್ವೆಯಿಂದ ಇರಬೇಕು ಸಾರ್ವಜನಿಕರ ಉಪಯೋಗಕ್ಕೆ ನಿಮಾರ್ಣ ಮಾಡಿರುವ ಕಣ ಸರ್ವಜನಿಕರದ್ದಾಗಿರುತ್ತದೆ ತಕ್ಷಣ ಸುತ್ತಮುತ್ತಲಿನ ರೈತರಿಗೆ ಖರಾಬಿನಲ್ಲಿ ಇರುವ ದಾರಿಯನ್ನು ಯತಾ ಒತ್ತಾಗಿ ಬಿಟ್ಟು ಕಣವನ್ನು ಸಂರಖ್ಷಣೆ ಮಾಡಬೇಕು ಯಾವುದೇ ರೀತಿ ಕಣಕ್ಕೆ ಹಾನಿ ಆದಲ್ಲಿ ತಾವೇ ಹೊಣೆಗಾರರಾಗಬೇಕಾಗುತ್ತಿದೆ ಎಂದು ಮಾಲಿಕರಿಗೆ ತಿಳಿಸಿದರು.

    ಮಾಜಿ ಗ್ರಾ.ಪಂ ಸದಸ್ಯ ಮೈಲಾರಪ್ಪ ಸಾರ್ವಜನಿಕ ಕಣಗಳು ಸರ್ಕಾರಿ ಆಸ್ತಿಯಾಗಿದ್ದು ಇವುಗಳನ್ನು ಒತ್ತುವರಿ ಮಾಡುವುದಾಗಲಿ ಸಾರ್ವಜನಿಕರಿಗೆ ತೋದರೆ ಮಾಡವುದಾಗಳಿ ಮಾಡುವ ಹಾಗಿಲ್ಲ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link