ರಾಯ್‌ ಬರೇಲಿ : ಗೆಲುವು ನಮ್ಮದೆ : ಪ್ರಿಯಾಂಕ ಗಾಂಧಿ…..!

ರಾಯ್‌ಬರೇಲಿ: 

    ರಾಯ್‌ಬರೇಲಿ ಜನರೊಂದಿಗಿನ ತಮ್ಮ ಪಕ್ಷದ 100 ವರ್ಷಗಳ ಹಳೆಯ ಸಂಬಂಧವು ಹೊಸ ಯುಗವನ್ನು ಪ್ರವೇಶಿಸಿದೆ. ಕ್ಷೇತ್ರದ ಜನರು ಮತ್ತೊಮ್ಮೆ ಕಾಂಗ್ರೆಸ್ ನಾಯಕತ್ವಕ್ಕೆ ಮಣೆ ಹಾಕಲಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕುಟುಂಬದ ಭದ್ರಕೋಟೆಯಾಗಿದ್ದ ರಾಯ್ ಬರೇಲಿಯಲ್ಲಿ ತಮ್ಮ ಸೋದರ ರಾಹುಲ್ ಗಾಂಧಿಯವರ ಪ್ರಚಾರಕ್ಕೆ ಪುಷ್ಟಿ ನೀಡಲು ಕ್ಷೇತ್ರಕ್ಕೆ ಆಗಮಿಸುತ್ತಿರುವ ಪ್ರಿಯಾಂಕಾ ಗಾಂಧಿ, ರಾಯ್ ಬರೇಲಿಯ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನರ ಉತ್ಸಾಹವನ್ನು ಕಂಡು ಖುಷಿಯಾಗುತ್ತಿದೆ ಎಂದರು.

    ರಾಯ್ ಬರೇಲಿಯ ಜನರೊಂದಿಗೆ 100 ವರ್ಷಗಳ ಸೇವೆಯ ಕಾಂಗ್ರೆಸ್ ಸಂಬಂಧವು ಹೊಸ ಹಂತವನ್ನು ಈಗ ಪ್ರವೇಶಿಸಿದೆ. ರಾಯ್ ಬರೇಲಿ ಕುಟುಂಬವು ಮತ್ತೊಮ್ಮೆ ಕಾಂಗ್ರೆಸ್ ನಾಯಕತ್ವವನ್ನು ಸ್ವೀಕರಿಸಲು ಸಜ್ಜಾಗಿದೆ. ಇಂದು, ನಾನು ರಾಯ್ ಬರೇಲಿಯ ಬಚ್ರವಾನ್‌ನ ವಿವಿಧ ಪ್ರದೇಶಗಳಲ್ಲಿ ಬೀದಿ ಸಭೆಗಳ ಮೂಲಕ ನನ್ನ ಕುಟುಂಬ ಸದಸ್ಯರನ್ನು ಭೇಟಿ ಮಾಡುತ್ತೇನೆ ಎಂದು ಟ್ವೀಟ್ ಮೂಲಕ ಬರೆದುಕೊಂಡಿದ್ದಾರೆ.

   ಚುನಾವಣಾ ಪ್ರಚಾರದ ಭಾಗವಾಗಿ, ಪ್ರಿಯಾಂಕಾ ಗಾಂಧಿ ಅವರು ತುಲ್ವಾಸಾ, ಮಹಾರಾಜ್‌ಗಂಜ್, ಹಾಲೋರ್, ಭವಾನಿಗಢ, ಗೂಢಾ, ತಿಲೆಂಡಾ, ಇಂಚೌಲಿ ಮತ್ತು ಸುದೌಲಿ –ಇವೆಲ್ಲವೂ ರಾಯ್ ಬರೇಲಿಯ ಬಚ್ರವಾನ್ ವಿಧಾನಸಭಾ ಕ್ಷೇತ್ರದ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

   2019ರಲ್ಲಿ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಕ್ಷೇತ್ರದಿಂದ ಗೆದ್ದಿದ್ದರು. ಬಿಜೆಪಿ ಈ ಬಾರಿ ಸಚಿವ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿದೆ.

Recent Articles

spot_img

Related Stories

Share via
Copy link