ಚಿತ್ರದುರ್ಗ:
ಕಾಂಗ್ರೆಸ್ ಬೃಹತ್ ಸಮಾವೇಶದ ವೇದಿಕೆ ಮೇಲೆಯೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಜಿ ಸಚಿವ ಹೆಚ್ ಆಂಜನೇಯ ಅವರ ಮೇಲೆ ರೇಗಿದ ಘಟನೆ ನಡೆದಿದೆ.
ವೇದಿಕೆ ಮೇಲೆ ಪ್ರಿಯಾಂಕಾ ವಾದ್ರಾರ ಬಲಭಾಗದಲ್ಲಿ ನಿಂತಿದ್ದ ಯುವತಿಯೋರ್ವಳನ್ನು ದೂರಕ್ಕೆ ಹೋಗುವಂತೆ ಆಂಜನೇಯ ಆಕೆಯನ್ನು ಹಿಂದೆ ತಳ್ಳಲು ಪ್ರಯತ್ನಿಸುತ್ತಾರೆ. ಈ ವೇಳೆ ಕೋಪಗೊಂಡ ಪ್ರಿಯಾಂಕಾ ವಾದ್ರಾ ಯುವತಿಯನ್ನು ಯಾಕೆ ದೂರಕ್ಕೆ ತಳ್ಳುತ್ತೀರಾ ಎಂದು ಆಂಜನೇಯ ಕಡೆ ಕ್ಷೀಣವಾಗಿ ನೋಡಿ ಯುವತಿಯನ್ನು ತನ್ನ ಪಕ್ಕಕ್ಕೆ ಎಳೆದುಕೊಳ್ಳುತ್ತಾರೆ.
ವೇದಿಕೆ ಮೇಲೆ ಪ್ರಿಯಾಂಕಾ ವಾದ್ರಾರನ್ನು ಸನ್ಮಾನಿಸುವ ಜವಾಬ್ದಾರಿ ಪ್ರಾಯಶಃ ಆಂಜನೇಯ ಅವರಿಗೆ ನೀಡಲಾಗಿತ್ತು. ಅತಿ ಉತ್ಸಹದಿಂದ ಸನ್ಮಾನಿಸುವ ಕೆಲಸಕ್ಕೆ ಆಂಜನೇಯ ಮುಂದಾದರು. ಆಂಜನೇಯ ಪ್ರಿಯಾಂಕಾಗೆ ಶಾಲು ಹೊದಿಸುತ್ತಾರೆ. ನಂತರ ಪೇಟ ತೊಡಿಸಲು ಹೋದಾಗ ಪ್ರಿಯಾಂಕಾ ವಾದ್ರಾ ಬೇಡ ಅನ್ನುತ್ತಾರೆ, ಅದರೂ ಆಂಜನೇಯ ಬಲವಂತಂದದಿಂದ ತೊಡಿಸಲು ಮುಂದಾಗುತ್ತಾರೆ. ಆಗ ಪ್ರಿಯಾಂಕಾ ಗದುರಿದ ಘಟನೆ ನಡೆಯಿತು.