ಇಡಿ ಚಾರ್ಜ್‌ ಶೀಟ್‌ ನಲ್ಲಿ ಪ್ರಿಯಾಂಕ ವಾದ್ರಾ ಹೆಸರು …..!

ನವದೆಹಲಿ:

     ಇದೇ ಮೊದಲ ಬಾರಿ ಭೂಮಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರು ಉಲ್ಲೇಖಿಸಿದೆ.

    2006ರಲ್ಲಿ ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್‌ಎಲ್ ಪಹ್ವಾ ಅವರಿಂದ ಹರಿಯಾಣದ ಫರಿದಾಬಾದ್‌ನಲ್ಲಿ ಐದು ಎಕರೆ ಕೃಷಿ ಭೂಮಿ ಖರೀದಿಸಿ, ಅದೇ ಭೂಮಿಯನ್ನು ಫೆಬ್ರವರಿ, 2010 ರಲ್ಲಿ ಅವರಿಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ ಶೀಟ್ ನಲ್ಲಿ ಇಡಿ, ಪ್ರಿಯಾಂಕಾ ಗಾಂಧಿಯ ಹೆಸರು ಉಲ್ಲೇಖಿಸಿದೆ.

    ಇಡಿ ಪ್ರಕಾರ, ಫರಿದಾಬಾದ್‌ನ ಅಮಿಪುರ್ ಗ್ರಾಮದಲ್ಲಿ ಪಹ್ವಾ ಅವರಿಂದ ಭೂಮಿಯನ್ನು ಖರೀದಿಸಲಾಗಿದೆ. ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರು 2005-2006 ರಿಂದ ಅಮಿಪುರ್ ಗ್ರಾಮದಲ್ಲಿ 40.08 ಎಕರೆಯ ಮೂರು ತುಂಡು ಭೂಮಿಯನ್ನು ಖರೀದಿಸಿ ಅದನ್ನು ಡಿಸೆಂಬರ್, 2010 ರಲ್ಲಿ ಅವರಿಗೇ ಮಾರಾಟ ಮಾಡಿದ್ದಾರೆ.  ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಪಹ್ವಾ ಅವರು ಎನ್‌ಆರ್‌ಐ ಉದ್ಯಮಿ ಸಿಸಿ ಥಂಪಿಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ.

    ಈ ದೊಡ್ಡ ಪ್ರಕರಣವು ಪರಾರಿಯಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಯನ್ನು ಒಳಗೊಂಡಿದ್ದು, ಮನಿ ಲಾಂಡರಿಂಗ್, ವಿದೇಶಿ ವಿನಿಮಯ ಮತ್ತು ಕಪ್ಪು ಹಣದ ಕಾನೂನುಗಳ ಉಲ್ಲಂಘನೆ ಮತ್ತು ಅಧಿಕೃತ ರಹಸ್ಯ ಕಾಯಿದೆ ಅಡಿ ತನಿಖೆ ನಡೆಯುತ್ತಿದೆ.

   ಸಂಜಯ್ ಭಂಡಾರಿ 2016 ರಲ್ಲಿ ಭಾರತದಿಂದ ಯುಕೆಗೆ ಪಲಾಯನ ಮಾಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನ್ನ ಹಿಂದಿನ ಆರೋಪಪಟ್ಟಿಯಲ್ಲಿ ರಾಬರ್ಟ್ ವಾದ್ರಾ ಅವರನ್ನು ಥಂಪಿಯ ಆಪ್ತ ಸಹಾಯಕ ಎಂದು ಹೆಸರಿಸಿದೆ.

   ಹೊಸ ಆರೋಪಪಟ್ಟಿಯಲ್ಲಿ, ಪಹ್ವಾ ಅವರು ಭೂ ಸ್ವಾಧೀನದ ಉದ್ದೇಶಕ್ಕಾಗಿ ಹಣವನ್ನು ಪಡೆಯುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. “ರಾಬರ್ಟ್ ವಾದ್ರಾ ಅವರು ಪಹ್ವಾಗೆ ಸಂಪೂರ್ಣ ಮಾರಾಟದ ಹಣವನ್ನು ಪಾವತಿಸದಿರುವುದು ಗಮನಕ್ಕೆ ಬಂದಿದೆ” ಎಂದು ಇಡಿ ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap