ಪತ್ರಕರ್ತರು ವೃತ್ತಿಧರ್ಮ ಮತ್ತಷ್ಟು ಗಟ್ಟಿಗೊಳಿಸಿ : ಸಿಎಂ

ಬೆಂಗಳೂರು

     ಪತ್ರಿಕೋದ್ಯಮ ಬಹಳ ಹಳೆಯ ವೃತ್ತಿ. ವಿಶ್ವದ ನಾಗರಿಕತೆಯ ಬೆಳವಣಿಗೆಯಲ್ಲಿ ಹಾಗೂ ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ಬಹಳ ದೊಡ್ಡ ಪಾತ್ರವಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಎಲ್ಲಾ ಪತ್ರಕರ್ತರು ವೃತ್ತಿಧರ್ಮವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಪ್ರತಿಪಾದಿಸಿದರು.

    ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ನಾಲ್ಕು ವರ್ಷಗಳ ಟಿಯೇಸ್ಸಾರ್ ಸ್ಮಾರಕ, ಮೊಹರೆ ಹನುಮಂತರಾಯ, ಅಭಿವೃದ್ಧಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ನಾಲ್ಕು ವರ್ಷಗಳ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿ 175 ಮಂದಿ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ರಾಜ್ಯದ ಪ್ರಗತಿಗೆ ಮಾಧ್ಯಮ ಕ್ಷೇತ್ರ ಪೂರಕವಾಗಿರಬೇಕೆ ಹೊರತು ಬಾಧಕವಾಗಬಾರದು.

    ಪತ್ರಕರ್ತರು ಸಮಾಜದ ಕಾವಲು ನಾಯಿ [ವಾಚ್ ಡಾಗ್] ಅಷ್ಟೇ ಅಲ್ಲದೇ ರಾತ್ರಿ ಕಾವಲು ನಾಯಿಯಾಗಿಯೂ [ನೈಟ್ ವಾಚ] ಕೆಲಸ ಮಾಡಿದ್ದಾರೆ. ಪ್ರಶಸ್ತಿ ಸಿಗುವಂತಹದ್ದು ಇನ್ನಷ್ಟು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಲಿ ಅಂತ ಎನ್ನುವುದು ನನ್ನ ಭಾವನೆ. ನೀವು ಒಳ್ಳೆಯ ಕೆಲಸ ಮಾಡಿದ್ದಕ್ಕೆ ಗುರುತಿಸಿರುತ್ತಾರೆ ಎಂದರು.

    ಮಾಧ್ಯಮ ಅಕಾಡೆಮಿ ಪತ್ರಿಕೋದ್ಯಮದಲ್ಲಿ ಮತ್ತಷ್ಟು ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕು. ಅಕಾಡೆಮಿ ಕೇವಲ ಪ್ರಶಸ್ತಿ ನೀಡುವ ಸಂಸ್ಥೆಯಾಗಬಾರದು. ಸಂಶೋಧನೆ, ಪ್ರಕರಣಗಳ ಅಧ್ಯಯನ, ಹೊಸಬರಿಗೆ ತರಬೇತಿ, ಅವಕಾಶ ಕಲ್ಪಿಸಬೇಕು. ಜಗತ್ತಿನ ಎಲ್ಲಾ ಸುದ್ದಿಗಳನ್ನು ಒಂದೆಡೆ ಒದಗಿಸುವ ಕೇಂದ್ರವಾಗಿಯೂ ಕೆಲಸ ಮಾಡಬೇಕು. ಉದಾರೀಕರಣ, ಉದಾರೀಕರಣದ ನಂತರ ಜಗತ್ತಿನ ಪರಿಣಾಮಗಳು ಭಾರತ ಮತ್ತು ಕರ್ನಾಟಕದ ಮೇಲಾಗುತ್ತವೆ. ಇದರ ಪರಿಣಾಮ ಪ್ರತಿಯೊಬ್ಬರ ಬದುಕಿನಲ್ಲಾಗುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮ ಅಕಾಡೆಮಿ ಕೆಲಸ ಮಾಡಬೇಕು. ಜಿಲ್ಲಾ, ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಹೆಚ್ಚು ಪ್ರೋತ್ಸಾಹ ಮತ್ತು ಬೆಂಬಲ ನೀಡಬೇಕು ಎಂದು ಬಸವರಾಜ ಬೊಮ್ಮಾಯಿ ಕರೆ ನೀಡಿದರು.

    ಪ್ರಜಾಪ್ರಭುತ್ವ ಇರಬೇಕಾಗಿರುವುದು ನ್ಯಾಯಾಂಗ, ಶಾಸಕಾಂಗ ಮತ್ತು ಪತ್ರಿಕೋದ್ಯಮದಲ್ಲಿ. ಕಾಲ ಕಾಲಕ್ಕೆ ಪರಿಣಾಮಕಾರಿ ಕಾನೂನು ಮಾಡಿ ಅದಕ್ಕೆ ತಕ್ಕ ಹಾಗೆ ನ್ಯಾಯಾಂಗ ಕಾರ್ಯವನ್ನು ಮಾಡಿದೆ. ಸ್ವಾಯತ್ತತೆಯಿಂ ಕೆಲಸ ಮಾಡಿದ್ದು ಪತ್ರಿಕೋದ್ಯಮ. ಇಲ್ಲಿ ಪ್ರಶಸ್ತಿ ಪಡೆದ ಬಹುತೇಕರು ಮೂವತ್ತು ವರ್ಷದಿಂದ ಪರಿಚಯ. ಅವರು ಎಷ್ಟೊಂದು ಕಷ್ಟ ಪಟ್ಟು ಸುದ್ದಿ ಸಂಗ್ರಹಿಸುತ್ತಿದ್ದರು ಎನ್ನುವುದು ನನಗೆ ಅರಿವಿದೆ. ಧಾರವಾಡ, ರಾಯಚೂರು, ಮೈಸೂರಿನಲ್ಲಿ ಕೆಲಸ ಮಾಡುವ ಪತ್ರಕರ್ತರು ಎಷ್ಟು ಕೆಲಸ ಮಾಡುತ್ತಾರೆ ಎನ್ನುವುದು ನನಗೆ ಗೊತ್ತು. ಎಂದು ಸಿಎಂ ನುಡಿದರು.

    ಕಂದಾಯ ಸಚಿವ ಆರ್.ಅಶೋಕ್, ಸಂಸದ ವಿಜಯ ಸಂಕೇಶ್ವರ್ , ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ,ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್, ಮುಖ್ಯಮಂತ್ರಿಗಳ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ: ಪಿ.ಎಸ್.ಹರ್ಷ, ಜಂಟಿ ನಿರ್ದೇಶಕ ಡಿ.ಪಿ.ಮುರಳೀಧರ,  ಅಕಾಡೆಮಿ ಪ್ರಭಾರ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸೇರಿ ಅಕಾಡೆಮಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ತುಮಕೂರಿನ ಹಿರಿಯ ಪತ್ರಕರ್ತರಾದ ಉಗಮ ಶ್ರೀನಿವಾಸ್ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಪತ್ರಕರ್ತ ಎನ್.ಎ.ಮಹೇಶ್ ಅಕಾಡೆಮಿ ವಿಶೇಷ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap