ಶಾಸಕ ಮುನಿರತ್ನ ವಿರುದ್ಧ ಅ.1 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ …!

ಬೆಂಗಳೂರು :

   ಶಾಸಕ ಮುನಿರತ್ನ ನಾಯ್ಡು ರವರ ಶಾಸಕ ಸ್ಥಾನ ರದ್ದುಗೊಳಿಸಲು ಒತ್ತಾಯಿಸಿ, ಒಂದು ಲಕ್ಷಕ್ಕೂ ಅಧಿಕಜನ ಸೇರುತ್ತಿರುವ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ನಡೆಸುತ್ತಿರುವ ಪ್ರತಿಭಟನೆ ಕುರಿತು ಒಕ್ಕಲಿಗ ಮತ್ತು ದಲಿತ ಸಂಘಟನೆಗಳು ಜಂಟಿ ಸುದ್ದಿಗೋಷ್ಠಿ

   ಮುನಿರತ್ನನನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ಅಕ್ರಮವಾಗಿ ಗಳಿಸಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕು. ಮುನಿರತ್ನನಿಗೆ ರಾಜಕೀಯ ಬಹಿಷ್ಕಾರ ಹಾಕಬೇಕು. ಆರೋಪಿ ಮುನಿರತ್ನ ಪ್ರಕರಣ ಸಂಬಂಧ ರಚಿಸಿರುವ ವಿಶೇಷ ತನಿಖಾ ತಂಡ ( ಎಸ್‌ಐಟಿ ) ತನಿಖೆಯನ್ನು ನಿಗಧಿತ ಕಾಲಮಿತಿಯಲ್ಲಿ ಮುಗಿಸಲು ಸೂಚಿಸಬೇಕು ಎಂದು ಮಾವಳ್ಳಿ ಶಂಕರ್ ತಿಳಿಸಿದರು .

   ಭಾರತ ದೇಶಕ್ಕೆ ಜಾತಿ ವ್ಯವಸ್ಥೆ ಎಂಬುದು ಶತ ಶತಮಾನಗಳಿಂದ ಕಾಡುತ್ತಿರುವ ಭೂತವಾಗಿದೆ. ಮನುವಾದಿಗಳು ಕುತಂತದಿಂದ ಸಹಸಂದು ವರ್ಷಗಳಿಂದ ಮನುಷ್ಯರ ನಡುವೆ ಮೇಲು ಕೀಳು ಎಂಬ ಅಮಾನವೀಯ ಸಾಮಾಜಿಕ ಸ್ವರಗಳನ್ನು ನಿರ್ಮಿಸಿ 9000ಕ್ಕೂ ಅಧಿಕ ಜಾತಿಗಳನ್ನಾಗಿ ವಿಭಜಿಸಿ ಈ ಸಮಾಜವನ್ನು ಎಂದೆಂದಿಗೂ ಒಂದಾಗದಂತೆ ಬಿದಗೊಳಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಸರಿಪಡಿಸುವಲ್ಲಿ ಭಗವಾನ್ ಬುದ್ಧ, ವಿಶ್ವಗುರು ಬಸವಣ್ಣ, ಕನಕದಾಸ, ನಾರಯಣಗುರು, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಪುಲೆ, ತಂದೆ ಪೆರಿಯಾರ್,ವಿಶ್ವಜ್ಞಾನಿ ಬೋಧಿಸತ್ವ ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್, ಭತ್ರಪತಿ ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಷ್ಟ್ರಕವಿ ಕುವೆಂಪುರವರಂತಹ ಮಹಾನಿಯರು ಬದುಕಗಳನ್ನೇ ಮೀಸಲಿಟ್ಟು ಶ್ರಮಿಸಿದ್ದಾರೆ. ಇವುಗಳ ಒಟ್ಟಾರೆ ಪ್ರಯತ್ನದ ಫಲವಾಗಿ ಇಂಡಿಯಾದಂತ ದೇಶದಲ್ಲಿ 4500 ಸಾವಿರ ವರ್ಷಗಳಿಗೂ ಹಿಂದಿನ ಜಾತಿ ವ್ಯವಸ್ಥೆಗೆ ಹಂತ ಹಂತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. 2000ಕ್ಕೂ ಅಧಿಕ ಜಾತಿ, 700ಕ್ಕೂ ಅಧಿಕ ಭಾಷೆ ಮತ್ತು ಉಪಭಾಷೆ ಹಾಗೂ ಸಾವಿರಾರು ಸಂಸ್ಕೃತಿ ಮತ್ತು ಉಪ ಸಂಸ್ಕೃತಿಗಳನ್ನು ಒಳಗೊಂಡ ಅತ್ಯುನ್ನತ ಮಾನವೀಯ ಸಂವೇದನಶೀಲ ಸಂವಿಧಾನವನ್ನು ಬಾಬಾಸಾಹೇಬರು ಭಾರತ ದೇಶದ ಜನತೆಗೆ ಅರ್ಪಿಸಿದ್ದಾರೆ. ಮೇಲೆ ಹೇಳಲಾದ ಮಹಾನೀಯರ ಕನಸಿನ ಭಾರತ ಇನ್ನಾದರೂ ಮುನಿರತ್ನ ನಾಯ್ಡು ನಂತಹ ನೀಚೆ ಹೊಲಸು ಮನಸ್ಸುಗಳ ಮೂಲಕ ಕಷ್ಟಸಾಧ್ಯವಾಗುತ್ತಿದೆ.

   13/09/2024ರಂದು ಸಾಮಾಜಿಕ ಜಾಲತಾಣಗಳಲ್ಲಿ ಆಂಧ್ರದ ಚಿತ್ತೂರಿನಿಂದ ವಲಸೆ ಬಂದಿರುವ ಕೊಳಕು ಶಾಸಕ ಮುನಿರತ್ನ ಮಾತನಾಡಿರುವ ಆಡಿಯೋ ಬಹಿರಂಗಗೊಂಡಿತು. ಈ ಧ್ವನಿಮುದ್ರಣದಲ್ಲಿ ಮಹಿಳೆಯರು ಒಳಗೊಂಡಂತೆ ಪರಿಶಿಷ್ಟ ಮತ್ತು ಒಕ್ಕಲಿಗ ಸಮುದಾಯಗಳ ಬಗ್ಗೆ ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ಅಶ್ಲೀಲ ಮತ್ತು ಅಸಭ್ಯವಾಗಿ ಬೈದಿರುವುದು ರಾಜ್ಯದ 7ಕೋಟಿ ಪ್ರಜ್ಞಾವಂತ ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತಂದಿದೆ.

   ಇತ್ತೀಚಿನ ದಿನಮಾನಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದ್ದರೂ, ಜಾತಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಭವಿಷ್ಯ ಭಾರತದ ಆತಂಕವನ್ನು ಹೆಚ್ಚಿಸುತ್ತಿದೆ. ಸಂವಿಧಾನದ ಅಡಿಯಲ್ಲಿ ಎಲ್ಲಾ ಸಮುದಾಯಗಳ ಮತಗಳನ್ನು ಗಳಿಸಿ ಸರ್ವ ಸಮುದಾಯಗಳ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಆಹಂಕಾರಿ ಶಾಸಕ ಮುನಿರತ್ನನ ನಡೆಯನ್ನು ರಾಜ್ಯದ ಜನತೆ ಒಕ್ಕೊರಲಿನಿಂದ ಖಂಡಿಸಬೇಕಿದೆ. ಇದು ಕೇವಲ ಕೆಲ ಸಮುದಾಯಗಳನ್ನು ಗುರಿಯಾಗಿಸಿರುವುದು ಮಾತ್ರವಲ್ಲ ಆಡಿಯೋ ಪ್ರಕರಣ ಹೊರಬೀಳುತ್ತಿದ್ದಂತೆ ಅತ್ಯಾಚಾರ, ಹನಿ ಟ್ರಾಪ್, ಹೆಚ್ ಐವಿ ಸೋಂಕಿತರ ಮೂಲಕ ರಾಜಕೀಯ ವಿರೋಧಿಗಳನ್ನು ಹಣೆಯಲು ಜೈವಿಕ ಯುದ್ಧ ( Blo war ) ನಂತಹ ನೀಚ ಅಸ್ತ್ರಗಳನ್ನು ಪ್ರಯೋಗ ಮಾಡಲು ಮುಂದಾಗಿದ್ದ ಆರೋಪಗಳ ಅಡಿಯಲ್ಲಿ ಮತ್ತೆ ಬಂಧನಕ್ಕೆ ಒಳಗಾಗಿದ್ದಾನೆ.

    ಇನ್ನೂ ಇವನ ನೀಚೆ ಕೃತ್ಯಗಳು ನೂರಾರು ಸಂಖ್ಯೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಬೆಳಕಿಗೆ ಬರಲಿವೆ. ಅತ್ಯಂತ ಕೆಟ್ಟ ವ್ಯಕ್ತಿತ್ವ ಮತ್ತು ಚಂತ್ರೆಯುಳ್ಳ ನೀಚ ರಾಜಕಾರಣೆಯಿಂದ ಪ್ರಜಾಪ್ರಭುತ್ವದ ಕಗ್ಗೋಲೆಯಾಗುತ್ತಿದೆ. ಇದರಿಂದಾಗಿ ಅಕ್ಟೋಬರ್ 1ರ ಮಂಗಳವಾರದಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿಗೆ ಕರೆ ನೀಡಲಾಗಿದೆ. ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ತನಕ ಸಾಗುವ ಈ ಬೃಹತ್ ರ್ಯಾಲಿಯಲ್ಲಿ ಲಕ್ಷಾಂತರ ಸಂವಿಧಾನ ಪರ ಮನಸ್ಸುಗಳು ಭಾಗವಹಿಸಿ ರ್ಯಾಲಿ ಯಶಸ್ವಿಗೊಳಿಸಲು ಒಕ್ಕೂಟದ ಮನವಿ

   ಸುದ್ಧಿಗೋಷ್ಠಿಯಲ್ಲಿ ಬಹುಜನ ಚಿಂತಕ ಬಿ.ಗೋಪಾಲ್ , ದಲಿತ ಮುಖಂಡರಾದ ಮಾವಳ್ಳಿ ಶಂಕರ್ , ಹೆಣ್ಣೂರು ಶ್ರೀನಿವಾಸ್, ಮೋಹನ್ ರಾಜ್, ಛಲವಾದಿ ಕುಮಾರ್ ಮತ್ತು ಒಕ್ಕಲಿಗ ಪ್ರತಿನಿಧಿಯಾಗಿ ಜನಪ್ರಿಯ ನಟ ಶ್ರೀನಗರ ಕಿಟ್ಟಿ ಸೇರಿದಂತೆ ಉಪಸ್ಥಿತರು.

Recent Articles

spot_img

Related Stories

Share via
Copy link
Powered by Social Snap