ಬೆಂಗಳೂರು :
ಕರ್ನಾಟಕ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ, ಮಹಿಳಾ ಒಕ್ಕೂಟಗಳಲ್ಲಿ ಮತ್ತು ಸರಕಾರದ ವಿವಿದ ಇಲಾಖೆಗಳ ಯೋಜನೆ ಜಾರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರು(MBK), ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು (LCRP) ಹಾಗು ವಿವಿಧ ಹೆಸರಿನ ಸಖಿ ಕಾರ್ಯಕಾರ್ತರು ರಾಜ್ಯದಲ್ಲಿ ಸುಮಾರು 60,000 ನೌಕರರು ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಿದ್ದೇವೆ. ಇದಕ್ಕಾಗಿ ನಮಗೆ ಯಾವುದೇ ವೇತನ ನೀಡಲಾಗುತ್ತಿಲ್ಲ. ಬದಲಿಗೆ ಮಾಸಿಕ ಕೇವಲ 5,000 ಹಾಗು 3,000 ಮತ್ತು 3,000 ರೂ ಗೌರವಧನಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವುದು ತಮಗೆ ತಿಳಿದ ವಿಚಾರವಾಗಿದೆ.
ಈ ಸೇವೆಯಲ್ಲಿ ಬಹುತೇಕ ದಿನವಿಡೀ ತೊಡಗಿದ ನೌಕರರಾದ ನಾವು ಬಹುತೇಕ ಒಂಟಿ ಮಹಿಳೆಯರು. ವಿಧವಾ ಮಹಿಳೆಯರು, ವಿಕಲ ಚೇತನ ಮತ್ತು ಮರ್ಬಲ ಸಮುದಾಯಕ್ಕೆ ಸೇರಿದವರಾಗಿದ್ದೇವೆ ಮತ್ತು ನಮ್ಮ ದುರ್ಬಲ ಕುಟುಂಬದ ನಿರ್ವಹಣೆ ಹೊತ್ತವರಾಗಿದ್ದೇವೆ.
ವಿಶ್ವ ಕಾರ್ಮಿಕ ಸಮ್ಮೇಳನವು ಕನಿಷ್ಠ ವೇತನ 36,000 ಪಡೆಯದೆ ಕುಟುಂಬವೊಂದರ ಕನಿಷ್ಠ ನಿರ್ವಹಣೆ ಆಸಾಧ್ಯವೆಂದಿರುವಾಗ ವೇತನವಿಲ್ಲದೆ. ಗೌರವಧನವೆಂಬ ಆಣಕದಡಿ ಬಿಟ್ಟಿ 18260 ಶೋಷಣೆಗೊಳಗಾಗಿದ್ದೇವೆ. ನಮಗೆ ಯಾವುದೇ ಸೇವಾ ನಿಯಮಾವಳಿ ಇರದೇ ಇರುವುದರಿಂದ ಮತ್ತು ಯಾವುದೆ ಇತರೆ ಆದಾಯಗಳಿಲ್ಲದೆ ಇರುವುದರಿಂದ, ಗೌರವಧನ ನಂಬಿ ಬದುಕುವ ನಾವು ನಿರಂತರ ಕಿರುಕುಳದ ಸಂಕಷ್ಟವನ್ನೆದುರಿಸುತ್ತಿದ್ದೇವೆ.
ನಾವುಗಳು, ಮಹಿಳಾ ಒಕ್ಕೂಟದವರೆಂದು ಸರಕಾರ ಮತ್ತು ಮಹಿಳಾ ಒಕ್ಕೂಟಗಳು ನಮಗೆ ಇವರು ಸಂಬಂದವಿಲ್ಲವೆಂದು ಹೇಳುತ್ತಾ ನಾವು ಯಾರಿಗೂ ಸೇರದವರಾಗಿದ್ದೇವೆ. ಸರಕಾರ ಹಾಗು ಒಕ್ಕೂಟಗಳ ಈ ನಡೆಗಳು ಬೇಸರ ಮೂಡಿಸಿವೆ.
ಸ್ವ ಸಹಾಯ ಸಂಘಗಳ ಬಹುತೇಕರು ಹಲವು ಸ್ವ ಸಹಾಯ ಸಂಘಗಳಲ್ಲು ಸದಸ್ಯರು ಆಗಿದ್ದು ಆದಾಗಲೆ ಧರ್ಮಸ್ಥಳದ ಮಂಜುನಾಥ ಸಂಸ್ಥೆ ಮತ್ತಿತರೆ ಎನ್ ಜಿ ಓ ಗಳವರು, ಲೂಕೋಸ್ ಮಾಡಿರುವುದರಿಂದ ನಮಗೆ ಲೂಕೋಸ್ ಮಾಡಲಾಗಲಿ ಮತ್ತು ಹೆಚ್ಚುವರಿ ಸ್ವ ಸಹಾಯ ಗುಂಪು ರಚಿಸಲಾಗಲಿ ಅವಕಾಶಗಳಿಲ್ಲವಾಗಿವೆ.
ಹೀಗಾಗಿ, ಹೆಚ್ಚುವರಿ ಗುಂಪು ರಚನೆಗೆ ಹೆಚ್ಚುವರಿ ಗೌರವ ಧನ ಮತ್ತು ಲೂಕೋಸ್ ಗಾಗಿ ನಿಗದಿತ ಹಣವೂ ದೊರೆಯುತ್ತಿಲ್ಲ ಎಂದು ಸರ್ಕಾರದ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
