ಹುಳಿಯಾರು:
ಕಳೆದ ಎರಡ್ಮೂರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಹುಳಿಯಾರು ಒಣಕಾಲುವೆ ಸೇತುವೆ ಹಾಗೂ ರಸ್ತೆ ಡಾಂಬರೀಕರಣವನ್ನು ಶೀಘ್ರದಲ್ಲಿ ಪೂರೈಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹುಳಿಯಾರಿನ ಕರವೇಯಿಂದ ಬುಧವಾರ ಪ್ರತಿಭಟನೆ ಮಾಡಲಾಯಿತು.
ಕರವೇ ಅಧ್ಯಕ್ಷ ಬೇಕರಿ ಪ್ರಕಾಶ್ ಅವರು ಮಾತನಾಡಿ ಒಣಕಾಲುವೆ ಬಳಿ ಹೊಸ ರಸ್ತೆ ನಿರ್ಮಾಣಕ್ಕಾಗಿ ಹಳೆಯ ರಸ್ತೆಯನ್ನು ಕಿತ್ತು ಎರಡು ವರ್ಷಗಳು ಕಳೆದಿವೆ. ಆದರೂ ಸೇತುವೆ ನಿರ್ಮಿಸಿ ರಸ್ತೆ ಡಾಂಬರೀಕರಣ ಮಾಡದೆ ನಿರ್ಲಕ್ಷಿö್ಯಸಿರುವ ಕಾರಣ ಮಳೆಗಾಲದಲ್ಲಿ ಕೆಸರುಗದ್ದೆಯಾಗಿ, ಬೇಸಿಗೆಯಲ್ಲಿ ಧೂಳುನ ರಸ್ತೆಯಾಗಿ ಮಾರ್ಪಟ್ಟು ಸಂಚಾರಕ್ಕೆ ಕಿರಿಕಿರಿಯಾಗಿದೆ. ಒಟ್ಟಾರೆ ಹೆದ್ದಾರಿ ಪ್ರಾಧಿಕಾರಕ್ಕೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಇನ್ನು ಜನಪ್ರತಿನಿಧಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದರಿಂದ ಕರವೇ ಪ್ರತಿಭಟನೆಯ ಹಾದಿ ತುಳಿದಿದ್ದು ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿನಿಮಾ ಸಹನಟ ಗೌಡಿ ಅವರು ಮಾತನಾಡಿ ಹೊಸದುರ್ಗ, ತಿಪಟೂರು, ಅರಸೀಕೆರೆ, ಹಾಸನ, ಭಾಗಗಳಿಗೆ ಹುಳಿಯಾರು ಮಾರ್ಗವಾಗಿ ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ವೇಗವಾಗಿ ಬರುವ ಭಾರವಾದ ಲಾರಿ, ಟಿಪ್ಪರ್, ಬಸ್ ಸೇರಿದಂತೆ ಸಾವಿರಾರು ಕಾರುಗಳು ಚಲಿಸುವುದರಿಂದ ರಸ್ತೆಯಲ್ಲಿ ದೂಳು ಎದ್ದು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ನಿವಾಸಿಗಳು ಹಾಗೂ ಅಕ್ಕಪಕ್ಕದ ವ್ಯಾಪಾರಸ್ಥರಿಗೆ ಸಂಕಟ ಅನುಭವಿಸುವಂತೆ ಆಗಿದೆ.
ದ್ವಿಚಕ್ರ ವಾಹನಗಳ ಸವಾರರಿಗೆ ಕಣ್ಣಿನ ತುಂಬಾ ಧೂಳು ತುಂಬಿಕೊಂಡು ಮುಂದೆ ಬರುವ ವಾಹನ ನೋಡಲಾರದ ಹಾಗೂ ಲಾರಿ ಸೇರಿದಂತೆ ಭಾರಿ ವಾಹನಗಳು ಬಂದಾಗ ಕಲ್ಲು ಸಿಡಿದು ಗಾಯವಾಗುವ ನಿದರ್ಶನಗಳೂ ಸಾಕಷ್ಟಿವೆ. ಒಟ್ಟಾರೆ ಇಲ್ಲಿ ಓಡಾಡುವವರಿಗೆ ನರಕಯಾತನೆ ಅನುಭವಕ್ಕೆ ಬರುತ್ತದೆ ಎಂದು ದೂರಿದರು.
ಕರವೇಯ ಮೆಡಿಕಲ್ ಚನ್ನಬಸವಯ್ಯ ಅವರು ಮಾತನಾಡಿ ಮಂಗಳೂರು ವಿಶಾಖಪಟ್ಟಣ ರಾಷ್ಟ್ರೀಯ ಹೆದ್ದಾರಿ 234 ರ ಹುಳಿಯಾರು ಭಾಗದ ವಿಸ್ತರಣೆಯ ಕಾಮಗಾರಿಯು ಒಣಕಾಳುವೆ ಬಳಿ ಸ್ಥಗಿತಗೊಂಡಿದೆ. ಪರಿಣಾಮ ಏಳುತ್ತಿರುವ ಧೂಳಿನಿಂದ ಹುಳಿಯಾರು ಪಟ್ಟಣಕ್ಕೆ ಬರುವ ಪ್ರತಿಯೊಬ್ಬರಿಗೂ ಧೂಳಿನ ಮಜ್ಜನ ನಿಶ್ವಿತವಾಗಿದೆ. ಜೊತೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ. ಪರಿಣಾಮ ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಇಷ್ಟಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಅದೇಕೆ ನಿರ್ಲಕ್ಷö್ಯವಹಿಸಿದ್ದಾರೋ ತಿಳಿಯದಾಗಿದೆ ಎಂದು ಅಸಮಧಾನ ವ್ಯಕ್ತಡಿಸಿದರು.ಕಾಮನಬಿಲ್ಲು ಪೌಂಡೇಷನ್ ಅಧ್ಯಕ್ಷ ಚನ್ನಚನ್ನಕೇಶವ ಅವರು ಮಾತನಾಡಿ ಮೊದಮೊದಲು ದೂಳು ಏಳಬಾರದೆಂದು ರಸ್ತೆಗೆ ಟ್ಯಾಂಕರ್ ಮೂಲಕ ನೀರನ್ನು ಹಾಕುತ್ತಿದ್ದgರಾದರೂ ಈಗ ¸ನೀರು ಸಹ ಹಾಕದೆ ಸಂಪೂರ್ಣ ನಿರ್ಲಕ್ಷಿಸಿದ್ದಾರೆ.
ಪರಿಣಾಮ ರಸ್ತೆಯಲ್ಲಿ ಏಳುವ ಧೂಳಿನಿಂದ ಜನರಲ್ಲಿ ಗಂಟಲು ನೋವು, ಉಸಿರಾಟದ ತೊಂದರೆ, ಕಣ್ಣು ನೋವು, ಅಸ್ತಮಾ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಸೃಷ್ಠಿಯಾಗುವ ಆತಂಕ ಎದುರಾಗಿದೆ. ಅಲ್ಲದೆ ರಸ್ತೆ ಬದಿಯ ವ್ಯಾಪಾರಿಗಳು ಕಂಗಾಲಾಗಿದ್ದು, ಗೂಡಂಗಡಿಗಳು, ಸಣ್ಣ ಹೋಟೆಲ್ ವ್ಯಾಪಾರಸ್ಥರು, ಪಾನಿ ಪೂರಿ, ಎಗ್ ರೈಸ್, ಜ್ಯೂಸ್, ಕಲ್ಲಂಗಡಿ ಸೇರಿದಂತೆ ಅನೇಕ ವ್ಯಾಪಾರಿಗಳು ವ್ಯಾಪಾರ ಮಾಡಲಾಗದೆ ನಷ್ಟ ಅನುಭವಿಸುವಂತಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ