ಸನ್ನತಿ ಪಂಚಶೀಲ ಪಾದಯಾತ್ರೆ ಸಂಘಟನಾ ರಾಜ್ಯಸಮಿತಿಕರ್ನಾಟಕ ಯಿಂದ ಪ್ರತಿಭಟನೆ

ಬೆಂಗಳೂರು:

   ಸನ್ನತಿ ಪಂಚಶೀಲ ಪಾದಯಾತ್ರೆ ಮುಖಾಂತರ ಸನ್ನತಿ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕರ್ನಾಟಕರಾಜ್ಯದ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಲ್ಲಿಸಿದ್ದ ಮನವಿಗೆ ಸ್ಪಂದಿಸದ ಸರ್ಕಾರದ ವಿಳಂಬ ನಡೆಯನ್ನು ಖಂಡಿಸಿ ಬೇಡಿಕೆಗಳನ್ನು ಪುರಸ್ಕರಿಸಲು ಒತ್ತಾಯಿಸಿ 2ನೇ ಹಂತದ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹ ಮೂಲಕ ಸರ್ಕಾರಕ್ಕೆ ಸಲ್ಲಿಸುವುದರ ಮೂಲಕ ಪ್ರತಿಭಟನೆ

ಬೇಡಿಕೆಗಳು;

1. ಕೂಡಲೇ ಸನ್ನತಿ ಅಭಿವೃದ್ಧಿ ಮಂಡಳಿಯನ್ನು ಕಾನೂನು ಪ್ರಕಾರ ಪೂರ್ಣ ಪ್ರಮಾಣದಲ್ಲಿ ರಚಿಸಿ (ಕಾಯ್ದೆ ರಚನೆ ಮತ್ತು ಉಭಯ ಸದನಗಳಲ್ಲಿ ಅಂಗೀಕಾರ, ಗೆಜೆಟ್ ನೋಟಿಫೀಕೇಶನ್ ಮತ್ತು ಸರ್ಕಾರದ ನಾಮನಿರ್ದೇಶಿತ ಸದಸ್ಯರ ನೇಮಕಾತಿ ಮತ್ತು ಇತರೆ ಅಸ್ತಿತ್ವಕ್ಕೆ ತರಬೇಕು.)

2 . ಈಗಾಗಲೇ ಪೂರ್ಣಗೊಂಡಿರುವ ಸನ್ನತಿ ಮ್ಯೂಸಿಯಂ ಮತ್ತು ಇನ್ನಿತರ ಕಟ್ಟಡಗಳನ್ನು ಸ್ವಾಧೀನಕ್ಕೆ ಪಡೆದು ಮ್ಯೂಸಿಯಂ ಪ್ರಾರಂಭಿಸಬೇಕು. ಮತ್ತು ಎಲ್ಲಾ ಕಟ್ಟಡಗಳಿಗೆ ಅಗತ್ಯರಿಪೇರಿ ಮತ್ತು ಮೂಲಭೂತ ಸೌಕರ್ಯಗಳ ಒದಗಿಸಲು ಕ್ರಮಜರುಗಿಸಬೇಕು.

3 . ತೆಲಂಗಾಣದ ಬುದ್ಧವನದ ಮಾದರಿಯಲ್ಲಿ ಕನಿಷ್ಠ 200 ಎಕರೆ ಪ್ರದೇಶದಲ್ಲಿ ಬೌದ್ಧಥೀಮ್ ಪಾರ್ಕಯೋಜನೆ ಮತ್ತು ಅಂತರಾಷ್ಟ್ರೀಯ ಮಟ್ಟದ ಧ್ಯಾನಕೇಂದ್ರ ಹಾಗೂ ಸಾಮ್ರಾಟ್ ಅಶೋಕ ಸಂಶೋಧನೆಕೇಂದ್ರ ನಿರ್ಮಾಣ ಮಾಡಬೇಕು.

4 .ಈ ಯೋಜನೆಯ ತುರ್ತು ಅನುಷ್ಠಾನಕ್ಕೆ ಕೂಡಲೇ ಅಗತ್ಯ ಪೂರ್ವಭಾವಿ ಅನುದಾನ ನೀಡಬೇಕು. ಮತ್ತು 2025-26 ನೇ ಸಾಲಿನ ಬಜೆಟ್‌ನಲ್ಲಿ ಕಡ್ಡಾಯವಾಗಿ ರೂ.500 ಕೋಟಿ ಅನುದಾನ ಒದಗಿಸಬೇಕು.

15 ಬೌದ್ಧಐತಿಹಾಸಿಕ ಕ್ಷೇತ್ರ ಸನ್ನತಿಯಲ್ಲಿ ಇರುವ ಸ್ತೂಪದ ಪಕ್ಕದಲ್ಲಿಯೇ ಹೊಸದಾಗಿ ಬೌದ್ಧ ಸ್ತೂಪವನ್ನು ಪುನರ್ ನಿರ್ಮಾಣ ಮಾಡಬೇಕು.ಮತ್ತು ಕನಾಟಕ ಸರಕಾರ ಪ್ರತಿ ವರ್ಷ ಫೆಬ್ರುವರಿ 12 ರಂದು ಸಾಮ್ರಾಟ್ ಅಶೋಕ ಸನ್ನತಿಉತ್ಸವವನ್ನು ಸರಕಾರದ ವತಿಯಿಂದ ಆಚರಣೆ ಮಾಡಬೇಕು.

5. ಪ್ರತಿ ವರ್ಷ ಬುದ್ಧರ ಜಯಂತಿಗೆ ಸರ್ಕಾರದಿಂದ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು

ಪ್ರತಿಭಟನೆಯಲ್ಲಿ ಪೂಜ್ಯ ಬಂತೆಜಿ ಬೋದಿದತ್ತ , ಪೂಜ್ಯ ಬಂತೆಜಿ ವರಜೋತಿ , ಪೂಜ್ಯ ಬಂತೆಜಿ ಬು, ಸಂಚಲಕಾರದ ಅಂಬರೀಶ್ ಡಿ.ಎಂ, ರಾಹುಲ್ ಹುಲಿಮನೆ, ಹೆಬ್ಬಾಳ ವೆಂಕಟೇಶ್, ಶಿವಾನಂದ ಶಿಂಧೆ, ಚೂಡಾಮಣಿ ಸೇರಿದಂತೆ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link