ಫ್ರೀಡಂ ಪಾರ್ಕ್ ನಲ್ಲಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು :

   ದೆಹಲಿ ಹೋರಾಟದ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಉಪವಾಸ ಸತ್ಯಾಗ್ರಹ ಬೆಂಬಲಿಸಿ. ಇಂದಿನಿಂದ ಉಪವಾಸ ಸತ್ಯಾಗ್ರಹ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆರಂಭಿಸಲಾಗಿದೆ. ರೈತರ ಕಷ್ಟ ನೀಗಿಸಿ ಅನ್ನದ ಋಣ ತೀರಿಸಿ ಎಂದು ಘೋಷಣೆ ಹಾಕುತ್ತ ಉಪವಾಸ ಆರಂಭಿಸಿದರು ಒಂದೊಂದು ಜಿಲ್ಲೆಯ ರೈತರು ಪ್ರತಿನಿತ್ಯ ಸರದಿ ಉಪವಾಸ ನಡೆಸುತ್ತಾರೆ. ನಾಳೆ ಗುಲ್ಬರ್ಗ 8ರಂದು ಮೈಸೂರು ಜಿಲ್ಲೆ 9ರಂದು ಧಾರವಾಡ 10ರಂದು ಹಾಸನ ಜಿಲ್ಲೆ 11ರಂದು ಗದಗ್ ಜಿಲ್ಲೆ 12ರಂದು ಚಾಮರಾಜನಗರ ಜಿಲ್ಲೆ,13ರಂದು ಉತ್ತರ ಕನ್ನಡ ಜಿಲ್ಲೆ ಹಳಿಯಾಳ. 14ರಂದು ಬೆಳಗಾವಿ. 15ರಂದು ದಾವಣಗೆರೆ ಜಿಲ್ಲೆಗಳ ರೈತರಿಂದ ಸರದಿ ಉಪವಾಸ ಬೆಳಿಗ್ಗೆಯಿಂದ ಸಂಜೆ 5:00 ತನಕ ಮುಂದುವರೆಯುತ್ತದೆ

   ನವೆಂಬರ್ 26ರಿಂದ ದೇಶದ ರೈತರ ಹಿತಕ್ಕಾಗಿ ಉಪವಾಸ ನಡೆಸುತ್ತಿರುವುದು 11 ದಿನಕ್ಕೆ. ಕಾಲಿಟ್ಟಿದೆ ಪರಿಸ್ಥಿತಿ ಗಂಭೀರವಾಗಿದೆ. ದಲೈವಾಲರ ಉಪವಾಸ ಬೆಂಬಲಿಸಿ ಕರ್ನಾಟಕದ ರೈತ ಸಂಘಟನೆಗಳು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಿರಂತರ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ ಕೇಂದ್ರ ಸರ್ಕಾರ ಚಳುವಳಿ ನಿರತ ಮುಖಂಡರ ಜೊತೆ ಕೂಡಲೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ರೈತರನ್ನು ಉಳಿಸಬೇಕು ಎಂದು ಒತ್ತಾಯಿಸಿದರು

    ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು, ಡಾ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು,ರೈತರ ಸಾಲ ಸಂಪೂರ್ಣ ಮನ್ನಾ ಆಗಭೇಕು.,60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ.,ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿಯಾಗಬೇಕು ಎಂದು ದೆಹಲಿ ಗಡಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ.,ಹೋರಾಟ ಮಾಡುತ್ತಿದ್ದ,ರೈತ ಮುಖಂಡರನ್ನು ದೇಶದ್ರೋಹಿಗಳು.

    ಕಳ್ಳ ಕಾಕರು ರೀತಿಯಲ್ಲಿ ಮಧ್ಯರಾತ್ರಿ ಬಂಧಿಸಿ ದೇಶದ ರೈತರಿಗೆ ಅಪಮಾನ ಮಾಡಿದ್ದಾರೆ. ನೂರಾರು ರೈತರು ಕನೋರಿ ಬಾರ್ಡರ್ನಲ್ಲಿ ಉಪವಾಸ ಕುಳಿತಿದ್ದಾರೆ ಈ ಸತ್ಯಾಗ್ರಹ 11ನೇ ದಿನಕ್ಕೆ ಮುಂದುವರೆದಿದೆ.

   ಸರ್ಕಾರ ರೈತರ ಹಕ್ಕನ್ನ ದಮನ ಮಾಡಲು ಯತ್ನಿಸುತ್ತಿದೆ. ಸರ್ಕಾರದ ವರ್ತನೆಯನ್ನು ಖಂಡಿಸುತ್ತೆನೆ ಎಂದು ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ಸಂಘಟನೆಯ ದಕ್ಷಿಣ ಭಾರತ ಸಂಚಾಲಕ.ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು

   ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ರೈತ ಚಳುವಳಿಯ ಬಗ್ಗೆ ವರದಿ ನೀಡಲು ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ನವಾಬಸಿಂಗ್ ಅಧ್ಯಕ್ಷತೆಯಲ್ಲಿ ಪರಿಣಿತರ ಒಳಗೊಂಡಂತೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು ಈ ಸಮಿತಿ ನವೆಂಬರ್ 22 ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಆರಂಭಿಕ ವರದಿಯನ್ನು ನೀಡಿದೆ. ರೈತರ ಆತ್ಮಹತ್ಯೆ ಆಗುತ್ತಿರುವುದು ಸರಿಯಾದ ಮಾರುಕಟ್ಟೆ ಇಲ್ಲದೆ ಇರುವುದು.

   ಉತ್ಪಾದನೆ ವೆಚ್ಚಕ್ಕೆ ಬೆಂಬಲ ಬೆಲೆ ಕಡಿಮೆ ಇರುವುದು ಗಂಭೀರವಾಗಿದೆ ಆದ್ದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಆದ್ದರಿಂದ ಎಂ ಎಸ್ ಪಿ ಖಾತ್ರಿ ಕಾನೂನು ಜಾರಿ ಮಾಡಲು ಕೇಂದ್ರಸರ್ಕಾರ ಕ್ರಮ ಕೈಗೊಳ್ಳಬೇಕೆಂದು ವರದಿ ನೀಡಿದೆ ಈ ವರದಿ ನೀಡಿದ ಎರಡು ಮೂರು ದಿನದಲ್ಲಿ ಕೇಂದ್ರ ಸರ್ಕಾರ ರೈತ ಚಳುವಳಿಯನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ. ಸಂವಿಧಾನ ದಿನ ಆಚರಣೆ ಮಾಡುವ ಸರ್ಕಾರಕ್ಕೆ ಹಕ್ಕುಗಳಿಗಾಗಿ ಹೋರಾಟ ಮಾಡುವ ರೈತ ಮುಖಂಡರನ್ನು ಬಂಧನ ಮಾಡಿ ಬಿಡುಗಡೆ ಮಾಡಿರುವುದು ಖಂಡನೀಯ. ಕೂಡಲೇ ಕೇಂದ್ರ ಸರ್ಕಾರ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸುತೆವೆ ಸರದಿ ಉಪವಾಸ ಸತ್ಯಾಗ್ರಹ ಪ್ರತಿನಿತ್ಯ 10 ಗಂಟೆಯಿಂದ 5 ಗಂಟೆ ತನಕ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಿಮ್ಮ ಸಂಸದರನ್ನ ಪ್ರಶ್ನೆ ಮಾಡಿ ಎಂದು ಕರೆ ನಿಡಿದ್ದರು

   ಕೇಂದ್ರ ಬಜೆಟ್ ನಲ್ಲಿ ರೈತರ ಸಾಲವನ್ನ 16% ಏರಿಕೆ ಮಾಡಿದ್ದೇವೆ ಎಂದು ಹಣಕಾಸು ಸಚಿವರು ನಿರ್ಮಲ ಸೀತಾರಾಮ್ ಬಜೆಟ್ ಘೋಷಣೆ ಮಾಡಿದರು. ಆದರೆ ಈಗ ನಬಾರ್ಡ್ ಮೂಲಕ ಸಹಕಾರ ಸಂಘಗಳಲ್ಲಿ ರೈತರಿಗೆ ಕೊಡುತ್ತಿದ್ದ ಬಡ್ಡಿ ರಹಿತ ಸಾಲ ಕಡಿವಾಣ ಹಾಕಲು ಶೇಕಡ 50ರಷ್ಟು ಅನುದಾನ ಕಡಿತ ಮಾಡಿದ್ದಾರೆ ಇದು ರೈತರಿಗೆ ಸಹಕಾರ ಸಂಘಗಳಲ್ಲಿ ನೀಡುತ್ತಿದ್ದ ಬಡ್ಡಿ ರಹಿತ ಕೃಷಿ ಸಾಲ ತಪ್ಪಿಸುವ. ಹುನ್ನಾರವಾಗಿ ರಾಜ್ಯದ ರೈತರಿಗೆ ಮರ್ಮಗಾತವಾಗಿದೆ. ರಾಜ್ಯದ ಸಂಸದರು ರೈತರ ಪರ ಕಾಳಜಿ ಇದ್ದರೆ ಕೇಂದ್ರ ಸರ್ಕಾರ ಕಡಿತ ಮಾಡಿರುವ 50 ರಷ್ಟು ರಾಜ್ಯದ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಭೇಕು

   ಉಪವಾಸ ಸತ್ಯಾಗ್ರಹದಲ್ಲಿ ಬಸವರಾಜ್ ಪಾಟೀಲ್ ತುಮಕೂರು ಶಿವಕುಮಾರ್ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, , ರಮೇಶ್ ಹೂಗಾರ್, ರಾಜುಗುಂದಗಿ. ರೇವಣ್ಣ, ಮಾರ್ಬಳ್ಳಿ ನೀಲಕಂಠಪ್ಪ, ವರಕೊಡು ನಾಗೇಶ್, ಸೂರಿ, ಹೆಗ್ಗೂರು ರಂಗರಾಜು, ಶೇಖರಪ್ಪ, ಗಿರೀಶ, ಕಮಲಮ್ಮ, ಅಂಬಳೆ ಮಂಜುನಾಥ್, ಸತೀಶ್, ಪ್ರಕಾಶ್, ವಕೀಲ ಅಮರೇಶ್ ಇನ್ನು ಮುಕತಾದವರು ಇದ್ದರು.

Recent Articles

spot_img

Related Stories

Share via
Copy link