ಬೆಂಗಳೂರು :
ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ( ಸಿಐಟಿಯು ಸಂಯೋಜಿತ ) ದ ವತಿಯಿಂದ ರಾಜ್ಯ ಅಧ್ಯಕ್ಷರಾದ ಎಂ. ಬಿ ನಾಡಗೌಡ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ರಾಮಕೃಷ್ಣ ರವರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ನೌಕರರಿಗೆ 31,000 ವೇತನ ನಿಗತಿಯಾಗಬೇಕು, ಮಧ್ಯಂತರ ಪರಿಹಾರವಾಗಿ ತಿಂಗಳಿಗೆ 3000 ಹೆಚ್ಚುವರಿ ನೀಡಬೇಕು,
ಅನ್ಯ ಇಲಾಖೆಯ ಸಿಬ್ಬಂದಿಗಳನ್ನು ಗ್ರಾಮ ಪಂಚಾಯಿತಿ ನೌಕರರಾಗಿ ಪರಿಗಣಿಸಬಾರದು ಸೇರಿದಂತೆ ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗಳ ಮನೆ ಚಲೋ ಹೋರಾಟ ಕಾರ್ಯಕ್ರಮವನ್ನು ಪ್ರಾರಂಭ ಮಾಡುತ್ತೇವ ಎಂದು ಬೆಂಗಳೂರಿನ ಪ್ರತಿಭಟನೆಯಲ್ಲಿ ಸುಮಾರು 3500-4000 ಗ್ರಾಮ ಪಂಚಾಯಿತಿ ನೌಕರರುಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಬೆಂಗಳೂರು ಉತ್ತರ ಲೋಕಸಭಾ ಅಭ್ಯರ್ಥಿ ಪರಸಪ್ಪ ಭೀಮಪ್ಪ ಗಜರಿ ವರು ಬೆಂಬಲ ನೀಡಿದರು ಇವರು ಕರ್ನಾಟಕ ರಾಜ್ಯ ಉಪಾಧ್ಯಕ್ಷರು ರಾಣಿ ಚೆನ್ನಮ್ಮ ಪಾರ್ಟಿ ಊರು ಮಾಲಗಿತ್ತಿ ತಾಲೂಕು ಕುಷ್ಟಗಿ ಜಿಲ್ಲಾ ಕೊಪ್ಪಳದವರು
