ಯಾದಗಿರಿ:
ಪಿಎಸ್ಐ ಪರಶುರಾಮ ನಿಗೂಢ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ರಾಜ್ಯಾದ್ಯಾಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಿಎಸ್ಐ ಪರಶುರಾಮ ಸಾವಿನ ಪ್ರಕರಣವು ಅನುಮಾನಾಸ್ಪಾದಕ ಸಾವು ಎಂದು ಕೇಸ್ ದಾಖಲಾಗಿತ್ತು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹಾಗೂ ಆತನ ಪುತ್ರ ಪಂಪನಗೌಡ ಮೇಲೆ ಪ್ರಕರಣ ದಾಖಲಾಗಿತ್ತು.
ಈಗ ಪಿಎಸ್ಐ ಪರಶುರಾಮ ಸಾವಿಗೆ ಹೃದಯಘಾತ ಕಾರಣ ಎಂದು ಮರಣೋತ್ತರ ಪರೀಕ್ಷೆಯ ( ಪೋಷ್ಟ ಮಾರ್ಟಂಮ) ವರದಿಯಲ್ಲಿ ಬಯಲಾಗಿದೆ. ಪಿಎಸ್ಐ ಪರಶುರಾಮ ಮೃತದೇಹದ ವಿವಿದ ಅಂಗಾಂಗಗಳನ್ನು FSL ಕಳುಹಿಸಲಾಗಿತ್ತು, ಪರಶುರಾಮ ಸಾವು ಆತ್ಮಹತ್ಯೆ ಅಲ್ಲ, ಹೃದಯಾಘಾತ ಎಂದು ದೃಢಪಡಿಸಿದ ಮರಣೋತ್ತರ ವರದಿಯ ಪರೀಕ್ಷೆಯಲ್ಲಿ ಸ್ಪಷ್ಟವಾಗಿದೆ, ಈಗಾಗಲೇ ತನಿಖೆ ನಡೆಸುತ್ತಿರುವ ಸಿಐಡಿ ಮರಣೋತ್ತರ ಪರೀಕ್ಷೆಯ ವರದಿಯನ್ನ ಪಡೆದಿದೆ, ಇದರಿಂದ ಅನುಮಾನಸ್ಪಾದ ಸಾವು ಎಂಬ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.