ನಾಯಕನಹಟ್ಟಿ :
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಕೆರೆ ಮುಂದಲಹಟ್ಟಿ ಗ್ರಾಮದ ಕಾಟಮಲಿಂಗಯ್ಯ, ಹಾಗೂ ವರವು ಗ್ರಾಮದ ಶಾಂತಮ್ಮ ಕಳೆದ 8 ವರ್ಷಗಳ ಹಿಂದೆ ಮದುವೆ ಆಗಿದ್ರು. ಅವರಿಗೆ ಎರಡು ಹೆಣ್ಣುಮಕ್ಕಳು ಇದ್ದಾರೆ. ಆದ್ರೆ ತನ್ನ ಪತ್ನಿ ಪದೇ ಪದೇ ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾಳೆ ಅಂತಾ ಪತಿ ಕಾಟಮಲಿಂಗಪ್ಪ ಪತ್ನಿ ಶಾಂತಮ್ಮ ವಿರುದ್ಧ ಸಿಟ್ಟಾಗಿದ್ದ. ಎರಡು ಮಕ್ಕಳು ಹೆಣ್ಣಾದ ಬಳಿಕ ಮತ್ತೆ ಗರ್ಭಿಣಿಯಾದ ಶಾಂತಮ್ಮಳನ್ನು ಆಂಧ್ರಪ್ರದೇಶದ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಮಗು ಹೆಣ್ಣೋ-ಗಂಡೋ ಅಂತಾ ಪರೀಕ್ಷೆ ಮಾಡಿಸಿದ್ದ. ಮಗು ಹೆಣ್ಣು ಅಂತಾ ತಿಳಿದು ಒಂದಲ್ಲ, ಎರಡಲ್ಲ, ಮೂರು ಮೂರು ಬಾರಿ ಅಬಾರ್ಶನ್ ಮಾಡಿಸಿದ್ದ ಆರೋಪ ಇದೆ.
ಹೀಗೆ ಪತ್ನಿ ಹೆಣ್ಣು ಮಗುವಿಗೆ ಜನ್ಮ ಕೊಡ್ತಾಇದ್ದಾಳೆ ಅಂತಾ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಎನ್.ದೇವರಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ವರವು ಗ್ರಾಮದ ಸದಸ್ಯ ಬೇರೆ. ಇಷ್ಟು ಜವಾಬ್ದಾರಿಯುವ ಸ್ಥಾನದಲ್ಲಿದ್ದು ಹೀಗೆ ಮಾಡಬಹುದಿತ್ತಾ…? ತನ್ನ ಹೆಂಡ್ತಿಗೆ ಹೆಣ್ಣು ಮಕ್ಕಳೇ ಜನಿಸುತ್ತಿದ್ದ ಹಿನ್ನೆಲೆ ಕಾಟಮಲಿಂಗಪ್ಪ ಕಳೆದ 9 ತಿಂಗಳ ಹಿಂದೆ, ಗೌರಮ್ಮ ಎಂಬ ಯುವತಿಯನ್ನು ಎರಡನೇ ಮದುವೆ ಆಗಿದ್ದಾನೆ.
ಅನ್ನೋ ಆರೋಪ ಇದೆ. 9 ತಿಂಗಳಿಂದ ಪತ್ನಿ ಶಾಂತಮ್ಮ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಮನೆಮಾಡಿಕೊಂಡು ಒಂಟಿಯಾಗಿದ್ಲು.ಟೇಲರಿಂಗ್ ಮಾಡ್ಕೊಂಡು ಜೀವನ ನಡಸ್ತಿದ್ಲು.
ಇದನ್ನು ಸಹಿಸದ ಪತಿ ಕಾಟಮಲಿಂಗಪ್ಪ ಶಾಂತಮ್ಮಳನ್ನು ಊರು ಬಿಡಿಸಬೇಕು ಅಂತಾ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾನೆ. ಇನ್ನು ಸತ್ತೇ ಹೋದ್ಲು ಅಂತಾ ತಿಳಿದು ಬಿಟ್ಟು ಹೋಗಿದ್ದ ಶಾಂತಮ್ಮಳನ್ನು ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ರು
