ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ತುಮಕೂರಿನ ವಿದ್ಯಾನಿಧಿಯ ಜ್ಞಾನವಿ ವಾಣಿಜ್ಯದಲ್ಲಿ ರಾಜ್ಯಕ್ಕೆ ಟಾಪರ್

ತುಮಕೂರು :

     ದ್ವಿತೀಯ ಪಿಯುಸಿ ಫಲಿತಂಶ ಪ್ರಕಟಗೊಂಡಿದ್ದು ರಾಜ್ಯದ್ಯಂತ 81.15 % ಫಲಿತಾಂಶ ದಾಖಲಾಗಿದೆ .ಫಲಿತಾಂಶದಲ್ಲಿ ದ.ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದು ಗದಗ ಕಡೆ ಸ್ಥಾನದಲ್ಲಿದೆ.ಪರೀಕ್ಷೆ ಬರೆದ 6,81,079 ವಿದ್ಯಾರ್ಥಿಗಳ ಪೈಕಿ 552690 ವಿದ್ಯರ್ಥಿಗಳು ಉತೀರ್ಣರಾಗಿದ್ದು ,ಬಾಲಕರಿಗಿಂತ(‌ ಶೇ.76.98%) ಬಾಲಕೀಯರೆ(ಶೇ.84.87%) ಮೇಲುಗೈ ಸಾಧಿಸಿದ್ದಾರೆ. 

     20ನೇ ಸ್ಥಾನದಲ್ಲಿರುವ  ತುಮಕೂರು 81.03% ಫಲಿತಾಂಶದೊಂದಿಗೆ ಕಳೆದ ಬಾರಿಗಿಂತ ಶೇಕಡ 7%ಗಿಂತ ಅಧಿಕ ಫಲಿತಾಂಶ ದಾಖಲಿಸಿದೆ .ತುಮಕೂರು ವಿದ್ಯಾನಿಧಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ʻಜ್ಞಾನವಿ ಎಂʻ (597) ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌ ಆಗಿದ್ದಾರೆ.ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿನಿಯನ್ನು ವಿದ್ಯಾವಾಹಿನಿ ಸಮೂಹ ಸಂಸ್ಥೆ ಕಾರ್ಯದರ್ಶಿ ಎನ್‌ ಬಿ ಪ್ರದೀಪ್‌ ಕುಮಾರ್‌ ಅಭಿನಂದಿಸಿದ್ದಾರೆ.   

ಕಲಾ ವಿಭಾಗ: 181891 ವಿದ್ಯಾರ್ಥಿ ಗಳ ಪೈಕಿ 128448 ವಿದ್ಯಾರ್ಥಿಗಳು (ಶೇ68.36)ಉತೀರ್ಣರಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ 215357 ವಿದ್ಯರ್ಥಿಗಳ ಪೈಕಿ174315(ಶೇ.80.94) ತೇರ್ಗಡೆಯಾಗಿದ್ದಾರೆ.ವಿಜ್ಞಾನ ವಿಭಾಗದಲ್ಲಿ 277831 ವಿದ್ಯಾರ್ಥಿಗಳ ಪೈಕಿ 249927(ಶೇ.89.96) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ರಾಜ್ಯದ 35 ಕಾಲೇಜುಗಳು ಶೂನ್ಯ ಫಲಿತಾಂಸ ದಾಖಲಿಸಿವೆ . 

ಟಾಪರ್ಸ್‌ ಯಾರು ….?

ಕಲಾವಿಭಾಗ : ಮೂವರು ಟಾಪರ್ಸ್:1)‌ ಮೇಧಾ ಡಿ =->596 ,2)ವೇದಾಂತ್‌ ನವಿ=>596,3)ಕವಿತಾ ಬಿ ವಿ=>596

ವಾಣಿಜ್ಯ ವಿಭಾಗ : ಜ್ಞಾನವಿ ಎಂ =>597

ವಿಜ್ಞಾನ ವಿಭಾಗ :15 ಜನ ಟಾಪರ್ಸ್‌ : (ನೂತನ್‌ ಆರ್‌ ಗೌಡ ,ಸಮ್ಯಕ್‌ ಆರ್‌ ಪ್ರಭು,ಅಮೋದ್‌ ನಾಯಕ್‌, ಸಾಥ್ವಿಕ್‌ ಕೆ ವೈ,ಜಿ ಶಾರದಾ , ಪ್ರಭಾವ್‌ ಪಿ,ಪ್ರಿಯಾ ಹಾಸಿನಿ,ಅಪೂರ್ವ ಎನ್‌,ಪ್ರೀತಂ ರಾವಲಪ್ಪ ಪನಾಸುಧಾಕರ್‌ ,ಚಿನ್ಮಯ ಪ್ರವೀಣ್‌ , ಎಸ್‌ ಬಿ ಸಮರ್ಥ್‌,ಅನಂತ್‌ ರಾಘವ್‌ ಪೈ,ಪ್ರವೀಣ್‌ ಸಿದ್ದಪ್ಪ )=>595

ವೆಬ್ ಸೈಟ್ ನಲ್ಲಿ ರಿಸಲ್ಟ್ ಚೆಕ್ ಮಾಡುವುದು ಹೇಗೆ?

 ಹಂತ 1: ನೀವು karresults.nic.in ಅಥವಾ pue.kar.nic ಅಂತಾ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಪಿಯುಸಿಯ ಸಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3: ಲಾಗಿನ್ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಯಾವ ವಿಭಾಗವೆಂದು ಕ್ಲಿಕ್ ಮಾಡ್ಬೇಕು (ವಿಜ್ಞಾನ, ವಾಣಿಜ್ಯ ಮತ್ತು ಕಲೆ ಆಯ್ಕೆ ಮಾಡಿಕೊಳ್ಳಿ)

ಹಂತ 4: ಕ್ಲಿಕ್ ಮಾಡಿದಾಗ ನಿಮಗೆ ಫಲಿತಾಂಶವು ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಹಂತ 5: ಈಗ ನೀವು ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

 

Recent Articles

spot_img

Related Stories

Share via
Copy link
Powered by Social Snap