ಬೆಂಗಳೂರು
ಆಟವಾಡುತ್ತಿದ್ದ ಪ್ರಥಮ ಪಿಯು ವಿದ್ಯಾರ್ಥಿನಿ ಹೃದಯಾಘಾತದಿಂದ ಶಾಲಾ ಆವರಣದಲ್ಲೆ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಂಗಳೂರು ವ್ಯಾಪ್ತಿಯಲ್ಲಿ ವರದಿಯಾಗಿದೆ .
ಇತ್ತೀಚಿನ ದಿನಗಳಲ್ಲಿ ಎಷ್ಟೇ ಚಟುವಟಿಕೆ ಕೂಡಿದ್ದರು ಹೃದಯಾಘಾತ ಸರ್ವೇಸಾಮನ್ಯವಾಗಿದೆ ಅದರಲ್ಲೂ ಹದಿಹರೆಯ ಯುವಕ-ಯುವತಿಯರಲ್ಲಿ ಇದು ಹೆಚ್ಚಾಗುತ್ತಿದೆ. ಈ ದುರ್ದೈವಿಯದ್ದೂ ಅದೇ ಕತೆ ಇನ್ನೂ ಚಿಕ್ಕ ವಯಸ್ಸು. ಅತ್ತಿಬೆಲೆ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ಗೆಳತಿಯರ ಜೊತೆ ಕಬಡ್ಡಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ .