ಬೆಂಗಳೂರು:
ಬೆಂಗಳೂರು, ಏಪ್ರಿಲ್ 7 ಕರ್ನಾಟಕದಲ್ಲಿ ದ್ವಿತೀಯ ವರ್ಷದ ಪದವಿ ಪೂರ್ವ(ಪಿಯುಸಿ) ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಅನ್ನು ಪರಿಷ್ಕರಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಗುರುವಾರ ಅಂತಿಮ ಪಟ್ಟಿ ಪ್ರಕಟಿಸಿದೆ.ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ಏಪ್ರಿಲ್ 22ರಿಂದ ಆರಂಭವಾಗಲಿದ್ದು, ಮೇ 18ರವರೆಗೂ ನಡೆಯಲಿದೆ.
ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರು ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಿರುವ ಈ ವೇಳಾಪಟ್ಟಿಯನ್ನು ನೋಡಬಹುದಾಗಿದೆ. ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ದಿನಾಂಕ ಪರಿಷ್ಕರಣೆ ಆಗಿರುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ವಸತಿ ರಹಿತ ಬಡವರಿಗೆ ಸಿಹಿಸುದ್ದಿ : ಆವಾಸ್ ಯೋಜನೆಯಡಿ 2 ಕೋಟಿ ಮನೆ ನಿರ್ಮಾಣ
ಜೆಇಇ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿರುವ ಹಿನ್ನೆಲೆ ಈ ಮೊದಲು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು. ಇದರ ಬೆನ್ನಲ್ಲೇ ಕೆಲವು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆ ಎರಡನೇ ಬಾರಿಗೆ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.
ದ್ವಿತೀಯ ಪಿಯು ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ:
ಏಪ್ರಿಲ್ 22, 2022: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏಪ್ರಿಲ್ 23, 2022: ಗಣಿತ, ಶಿಕ್ಷಣ ಶಾಸ್ತ್ರ,
ಏಪ್ರಿಲ್ 25, 2022: ಅರ್ಥಶಾಸ್ತ್ರ
ಏಪ್ರಿಲ್ 26, 2022: ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ರಸಾಯನಶಾಸ್ತ್ರ, ಮೂಲ ಗಣಿತ,
ಏಪ್ರಿಲ್ 27, 2022: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್,
ಏಪ್ರಿಲ್ 28, 2022: ಕನ್ನಡ, ಅರೇಬಿಕ್
ಮೇ 04, 2022: ಭೂಗೋಳಶಾಸ್ತ್ರ, ಜೀವಶಾಸ್ತ್ರ,
ಮೇ 05, 2022: ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್
ಮೇ 06, 2022: ಇಂಗ್ಲೀಷ್
ಮೇ 10, 2022: ಇತಿಹಾಸ, ಭೌತಶಾಸ್ತ್ರ
ಮೇ 14, 2022: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮೇ 17, 2022: ಐಚ್ಛಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮೇ 18, 2022: ಹಿಂದಿ
ರಾಜ್ಯದಲ್ಲಿ ಮತ್ತೊಂದು ಧರ್ಮ ಸಂಘರ್ಷ : ಹಿಂದೂಗಳ ತೀರ್ಥಯಾತ್ರೆಗೆ ಮುಸ್ಲಿಮರ ಬಸ್ ಗಳು ಬೇಡ ಅಭಿಯಾನ ಶುರು!
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ