ಹೈದರಾಬಾದ್:
ಅತ್ಯಂತ ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಐದು ಪುನುಗು ಬೆಕ್ಕಿನ ಮರಿಗಳನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ತೆಲಂಗಾಣದ ಅಮರಾಬಾದ್ ಅರಣ್ಯದ ದೋಮಲಪೆಂಟಾ ಶ್ರೇಣಿಯ ಬಳಿ ಏಷಿಯನ್ ಪ್ರಬೇಧದ ಪುನುಗು ಬೆಕ್ಕೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಪುನುಗು ಬೆಕ್ಕಿಗೆ ಐದು ಪುಟ್ಟ ಪುಟ್ಟ ಮರಿಗಳಿದ್ದವು. ತಾಯಿಯ ಸಾವಿನಿಂದ ಕಂಗಾಲಾಗಿದ್ದ ಪುನುಗು ಬೆಕ್ಕಿನ ಮರಿಗಳು ತಾಯಿಯ ಮೃತದೇಹದ ಮುಂದೆ ಓಡಾಡುತ್ತ ಅಲೆಯುತ್ತಿದ್ದವು.
ಇದನ್ನು ಕಂಡ ಅರಣ್ಯ ಇಲಾಖೆಯ ಸಿಬ್ಬಂದಿ ಎಲ್ಲ ಐದು ಮರಿಗಳನ್ನು ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ಗೆ ವರ್ಗಾಯಿಸಲಾಗಿದ್ದಾರೆ. ಈ ಕೇಂದ್ರದಲ್ಲಿ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಸಾಕಷ್ಟು ಆರೈಕೆಯನ್ನು ನೀಡಬಹುದಾಗಿದೆ.
ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ವಾಸಿಸುವ ಏಷ್ಯನ್ ಪಾಮ್ ಸಿವೆಟ್ ಅಥವಾ ಈ ಜಾತಿಯ ಪುನುಗು ಬೆಕ್ಕನ್ನು ಉಷ್ಣವಲಯದ ಕಾಡುಗಳು ಮತ್ತು ಮಳೆಕಾಡುಗಳಲ್ಲಿ ಕಾಣಬಹುದು. ಪುನುಗು ಬೆಕ್ಕುಗಳು ಸಾಮಾನ್ಯವಾಗಿ ಬೆಕ್ಕಿನ ಗಾತ್ರ 43 ಸೆಂ.ಮೀ ಮತ್ತು 71 ಸೆಂ.ಮೀ ಉದ್ದ ಮತ್ತು 1.4 ಕೆಜಿಯಿಂದ 4.5 ಕೆಜಿ ತೂಕವನ್ನು ಹೊಂದಿರುತ್ತದೆ. ನೋಡಲು ಪಕ್ಕಾ ಬೆಕ್ಕಿನಂತೆ ಕಾಣುತ್ತವೆ. ಅಲ್ಲದೇ ಪುನುಗು ಬೆಕ್ಕುಗಳು 20 ವರ್ಷಗಳವರೆಗೆ ಬದುಕಬಲ್ಲವು.