ಪುಷ್ಪ ರಾಜ್‌ ಸ್ಟೈಲ್‌ ನಲ್ಲಿ ಪುಷ್ಪ 2 ಅಪ್ಡೇಟ್‌ ನೀಡಿದ ರಷ್ಮಿಕ ಮಂದ‍ಣ್ಣ

ತೆಲಂಗಾಣ  :

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಪುಷ್ಪರಾಜ್ ಸ್ಟೈಲಿನಲ್ಲಿ ‘ಪುಷ್ಪ 2’ ಸಿನಿಮಾದ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಿದ್ದು, ಆ ಸ್ಪೆಷಲ್ ರಿಲೀಸ್ ಯಾವಾಗ ಎಂದು ರಶ್ಮಿಕಾ ಮಾಹಿತಿ ನೀಡಿದ್ದಾರೆ. 

   ಇದೇ ಮೇ 29ರಂದು ಬೆಳಿಗ್ಗೆ 11:07 ಕಪಲ್ ಸಾಂಗ್ ರಿಲೀಸ್ ಮಾಡುವುದಾಗಿ ನಟಿ ಅಪ್‌ಡೇಟ್ ನೀಡಿದ್ದಾರೆ. ಈ ಬಾರಿ ಭರ್ಜರಿಯಾಗಿ ಪುಷ್ಟರಾಜ್ ಜೊತೆ ಶ್ರೀವಲ್ಲಿ ಹೆಜ್ಜೆ ಹಾಕಲಿದ್ದಾರೆ

   ಪುಷ್ಪ ಪಾರ್ಟ್ ಒಂದರಲ್ಲಿ ಒಂದಕ್ಕಿಂತ ಒಂದು ಸಾಂಗ್ ಅದ್ಭುತವಾಗಿ ಮೂಡಿ ಬಂದಿತ್ತು. ಆ ಹಾಡುಗಳು ಯೂಟ್ಯೂಬ್‌ನಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿತ್ತು. ಹಾಗಾಗಿ ಇದರ ಸೀಕ್ವೆಲ್‌ನಲ್ಲಿ ಆ್ಯಕ್ಷನ್ ಸೀನ್‌ಗಳಿಗೆ ಮಹತ್ವ ಕೊಡುವ ಹಾಗೇ ಹಾಡಿಗಳಿಗೂ ಪ್ರಾಮುಖ್ಯತೆ ನೀಡಿದೆ ಚಿತ್ರತಂಡ. ಹಾಗಾದ್ರೆ ಆ ಕಲರ್‌ಫುಲ್ ಕಪಲ್ ಸಾಂಗ್ ಹೇಗಿರಲಿದೆ ಎಂಬುದನ್ನು ಮೇ 29ರವರೆಗೆ ಕಾದುನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap