ಒಟಿಟಿ ದುನಿಯಾಗೆ ‘ಪುಷ್ಪರಾಜ್’ ಎಂಟ್ರಿ

            ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಥಿಯೇಟರ್ ಬ್ಯುಸಿನೆಸ್ ನಲ್ಲಿ‌ ಕಮಾಲ್ ಮಾಡಿದೆ‌.

 ಅದರಲ್ಲೂ ಅಲ್ಲುಅರ್ಜುನ್ ಪುಷ್ಪ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

   ರಿಲೀಸ್ ಆಗಿ ವಾರಗಳಾದ್ರು ಪುಷ್ಪ ಚಿತ್ರ ಹಿರಿತೆರೆಯಲ್ಲಿ ತನ್ನ ಕಮಾಲ್ ಮುಂದುವರೆಸಿದೆ. ಚಿತ್ರದ ಕ್ರೇಜ಼್ ಹೀಗಿರುವಾಗಲೇ, ಚಿತ್ರತಂಡ ಪುಷ್ಪ ಚಿತ್ರವನ್ನ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ರಿಲೀಸ್ ಮಾಡಲು ತೀರ್ಮಾನಿಸಿದ್ದಾರೆ.

ಟಾಲಿವುಡ್ ಮಾಧ್ಯಮಗಳ ಮಾಹಿತಿ ಪ್ರಕಾರ ಇದೇ ವಾರದಲ್ಲಿ ಪುಷ್ಪ ಒಟಿಟಿ ದುನಿಯಾಗೆ ಎಂಟ್ರಿಯಾಗಲಿದ್ದಾನೆ. ಜನವರಿ 7ನೇ ತಾರೀಖಿನಂದು ಸಿನಿಮಾವನ್ನ ಅಮೆಜ಼ಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಮಾಡಲಾಗತ್ತೆ ಎಂದು ವರದಿಯಾಗಿದೆ.

ವಿವಿಧ ಭಾಷೆಗಳಲ್ಲಿ ತಯಾರಾಗಿರೊ ಪುಷ್ಪ ಚಿತ್ರ ಡಿಸೆಂಬರ್ 17ರಂದು ಗ್ರ್ಯಾಂಡ್ ರಿಲೀಸ್ ಪಡೆಕೊಂಡಿತ್ತು. ಈಗಾಗ್ಲೇ ರಿಲೀಸ್ ಆಗಿರುವ ಎಲ್ಲಾ ಕಡೆ ಅದ್ಭುತ ಕಲೆಕ್ಷನ್ ಮಾಡಿರುವ ಚಿತ್ರ ಭರ್ಜರಿ ಗಳಿಕೆ ಕಂಡಿದೆ.

ಆದರೆ ಆಶ್ಚರ್ಯಕರವಾಗಿ ಪುಷ್ಪ ಹಿಂದಿ ವರ್ಷನ್ ಗೆ ಭರ್ಜರಿ ರೆಸ್ಪಾನ್ಸ್ ದೊರಕಿದೆ. ರಿಲೀಸ್ ಆದ ಮೊದಲ ಭಾನುವಾರ ಪುಷ್ಪದ ಹಿಂದಿ ವರ್ಷನ್ 3.33ಕೋಟಿ ಕಲೆಕ್ಷನ್ ಗಳಿಸಿಕೊಂಡಿತ್ತು.

ಆದರೆ ಕಳೆದ ಭಾನುವಾರ ಅಂದರೆ ಮೂರನೇ ವೀಕೆಂಡ್ ನಲ್ಲಿ ಅದೇ ಹಿಂದಿ ವರ್ಷನ್ 6.25 ಕೋಟಿ ಬಾಚಿಕೊಂಡಿದೆ ಎಂದು ವರದಿಯಾಗಿದೆ. ಈ ಮೂಲಕ ನಾರ್ಥ್ ಮಂದಿಯ ಹೃದಯದಲ್ಲಿ ಅಲ್ಲು ಅರ್ಜುನ್ ಗಿರುವ ಅಭಿಮಾನ ಮತ್ತೆ ಸಾಬೀತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap