ಸಿನಿ ಅಪ್‌ ಡೇಟ್‌ : 400ರ ಗಡಿ ದಾಟಿದ ಪುಟ್ಟಕನ ಮಕ್ಕಳು ದಾರಾವಾಹಿ….!

ತುಮಕೂರು:

     ಜೀ ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಪುಟ್ಟಕ್ಕನ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಅವರು ನಟಿಸಿದ್ದು, ಪಾತ್ರಕ್ಕೆ ಜೀವ ತುಂಬಿದ ಅವರು ಕನ್ನಡಿಗರ ಮನೆಮಾತಾಗಿದ್ದಾರೆ. ಜೊತೆಗೆ ಈ ಅದ್ಭುತವಾದ ಧಾರವಾಹಿ ವೀಕ್ಷಕರ ಮೆಚ್ಚಿನ ಕಥೆ ಎಂದು ಕರೆಸಿಕೊಂಡಿದೆ.

   ಗಂಡ ಬಿಟ್ಟು ಹೋದರೂ ಪುಟ್ಟಕ್ಕ ತನ್ನ ಮೂರು ಹೆಣ್ಣು ಮಕ್ಕಳನ್ನು ಕೊರತೆ ಬಾರದಂತೆ ಸಾಕುತ್ತಿದ್ದಾಳೆ. ಆಕೆ ಆಮ ಮಕ್ಕಳ ಏಳು ಬೀಳುಗಳಿಗೆ ಹೆಗಲಾಗಿ ನಿಂತು ಇಬ್ಬರು ಮಕ್ಕಳನ್ನು ಚೆನ್ನಾಗಿ ಒದಿಸುತ್ತಾಳೆ. ಹಾಗೆಐೇ ತ್ಯಾಗಮಯಿಯಾದ ತನ್ನ ತಾಯಿಗೆ ಸಹಾಯ ಮಾಡಲು ಮೊದಲ ಮಗಳು ಸಹನಾ ತನ್ನ ಆಸೆಗಳನ್ನೇ ಬದಿಗೊತ್ತಿದ್ದಾಳೆ.

    ಧಾರಾವಾಹಿಯಲ್ಲಿ ರಾಜೇಶ್ವರಿ ಈಕೆ ವಿಲನ್‌ ಇವಳ ಕಾಟದಿಂದ ಹೊರಗೆಬರಲು ಪುಟ್ಟಕ್ಕ ಹರಸಾಹಸ ಪಡುತ್ತಿದ್ದಾಳೆ. ಇದೀಕ ಪುಟ್ಟಕ್ಕ ತನ್ನ ಮೊದಲ ಮಗಳು ಸಹನಾ ಮದುವೆಯನ್ನು ಮುರುಳಿ ಮೇಷ್ಟ್ರು ಜೊತೆ ಆಗಿದೆ. ಆಧರೆ ಸ್ನೇಹಾ ಕಂಠಿ ಮದುವೆ ಮಾತ್ರ ನಡೆಯುತ್ತಾ ಎಂಬುವುದು ಎಲ್ಲರ ಪ್ರಶ್ನೆ. ಆದರೆ ಸದ್ಯಕ್ಕೆ ಧಾವಾವಾಹಿಯಲ್ಲಿ ಬಿಗ್‌ ಟ್ವಿಸ್ಟ್‌ ಇರಲಿದೆ. ಸ್ನೇಹಾ ಜೀವನದಲ್ಲಿ ಭುನ್‌ ಬಂದರೆ ಕಂಠಿ ಜೀವನದಲ್ಲಿ ರಾಧ ಎಂಟ್ರಿ ಆಗಿದ್ದಾರೆ.

    ಪುಟ್ಟಕ್ಕನ ಮಕ್ಕಳು ಧಾರಾವಾಹಿ ದಿನಕ್ಕೊಂದು ತಿರುವಿನಿಂದ ಕುತೂಹಲ ಮೂಡಿಸುತ್ತಾ ಬಂದಿದೆ. ಸದ್ಯಕ್ಕೆ 400 ಸಂಚಿಕೆಗಳ ಸಂಭ್ರಮದಲ್ಲಿರುವ ಧಾರಾವಾಹಿ ತಂಡದಿಂದ ಅಭಿಮಾನಿಗಳು ಇನ್ನು ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. ಕಂಠಿ ಬಂಗಾರಮ್ಮನ ಮಗ ಎಂದು ಸ್ನೇಹಾಗೆ ತಿಳಿದಾಗ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ, ಅವರ ರಿಯಾಕ್ಷನ್‌ ಹೇಗಿರುತ್ತೆ ಅನ್ನೊದೆ ಕುತೂಹಲಕಾರಿಯಾದ ವಿಷಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link