ಗುಬ್ಬಿ : ಬಣಗುಡುತ್ತಿರುವ ಲೋಕಪಯೋಗಿ ಕಚೇರಿ.

ಗುಬ್ಬಿ:

    ಗುಬ್ಬಿಯ ಲೋಕಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಕಚೇರಿಯಲ್ಲಿ ಯಾವುದೇ ಅಧಿಕಾರಿಗಳು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೆ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ಪರದಾಡುವಂತಾಗಿದ್ದು ಈ ಸಂಬಂಧ ಕಚೇರಿಯಲ್ಲಿ ವಿಚಾರಿಸಿದರೆ ಅಧಿಕಾರಿಗಳನ್ನು ಚುನಾವಣೆಗೆ ನಿಯೋಜಿಸಲಾಗಿದ್ದು ಅವರು ಇಲ್ಲಿಗೆ ಬರುವ ಅವಶ್ಯಕತೆ ಇರುವುದಿಲ್ಲ ಎನ್ನುತ್ತಾರೆ.

    ಇಲ್ಲಿ ಸಹಾಯ ಕಾರ್ಯ ನಿರ್ವಾಹಕ ಅಭಿಯಂತರರನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆಯನ್ನು ಸೂಚನಾ ಫಲಕದ ಮೇಲೆ ಅಳವಡಿಸುವುದು ಕಾನೂನಿನಲ್ಲಿ ಅವಕಾಶವಿದ್ದರು ಯಾವುದೇ ದೂರವಾಣಿ ಸಂಖ್ಯೆಯೇ ಇಲ್ಲಿ ಇರುವುದಿಲ್ಲ ಹಾಗೂ ಇಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಮಹಿಳಾ ನೌಕರರಿಗೆ ಯಾವುದೇ ಮಾಹಿತಿ ಇಲ್ಲ

    ಗುಬ್ಬಿ ತಾಲ್ಲೂಕು ತೀವ್ರ ಬರಗಾಲದಿಂದ ಇರುವಾಗ ತಮ್ಮ ಕರ್ತವ್ಯಕ್ಕೆ ಇಲಾಖಾ ಅಧಿಕಾರಿಗಳು ಹಾಜರಾಗದೆ ಚುನಾವಣೆ ನೆಪಒಡ್ಡಿದರೆ ಹೇಗೆ ಎಂದು ಸಾರ್ವಜನಿಕರು ದೂರುತ್ತಿದ್ದು ಈ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap