ಚಿಕ್ಕನಾಯಕನಹಳ್ಳಿ:
ಕುಡಿತದ ಬಾಳು ನರಕದ ಗೋಳು : ಮೃತ್ಯುಂಜಯ ಶ್ರೀ
ನಿಮ್ಮಗಳ ಕುಟುಂಬವು ಸುಖಿ ಕುಟುಂಬವಾಗಿರಬೇಕು ಎಂದರೆ ಮಧ್ಯಪಾನ ಮಾಡಬೇಡಿ, ನೀವು ಮದ್ಯ ವ್ಯಸನಿಗಳಾದರೆ ನಿತ್ಯದ ಬದುಕಿನಲ್ಲಿ ನರಳುವ ಜೊತೆಗೆ ಕುಡಿತದ ಬಾಳು ನರಕದ ಗೋಳಾಗುತ್ತದೆ ಎಂದು ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹೊರವಲಯದ ದಬ್ಬೆಘಟ್ಟ ಗ್ರಾಮದ ಮರುಳ ಸಿದ್ಧೇಶ್ವರ ಪ್ರಾರ್ಥನ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ನಡೆದ ಏಳು ದಿನಗಳ 1492 ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಮದ್ಯ ವ್ಯಸನಿಗಳು ಮುಖ್ಯ ವಾಹಿನಿಗೆ :
ಸರ್ಕಾರ ಮಾಡಬೇಕಾದ ಎಷ್ಟೊ ಕೆಲಸಗಳನ್ನು ಡಾ.ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಾಡುತ್ತಿದೆ, ಕುಡಿತದ ದಾಸರಾಗಿರುವವರು ಸಾಮಾಜಿಕ, ಆರ್ಥಿಕ, ಸಾಂಸಾರಿಕ ಸ್ಥಾನಮಾನ ಕಳೆದುಕೊಂಡಿರುತ್ತಾರೆ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರಲು ಮದ್ಯವರ್ಜನ ಶಿಬಿರಗಳಲ್ಲಿ ನಡೆಯುವ ದೇವರಪೂಜೆ, ನಾಮಸ್ಮರಣೆ, ಯೋಗಾಭ್ಯಾಸ ಸಹಕಾರಿಯಾಗುತ್ತದೆ ಎಂದು ಶ್ರೀಗಳು ನುಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಎಲ್.ಬಿ.ಪ್ರೇಮಾನಂದ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಉಪಾಧ್ಯಕ್ಷ ಚಂದ್ರಶೇಖರ್, ಕೃಷ್ಣೆಗೌಡ, ಜನಜಾಗೃತಿ ಅಧಿಕಾರಿ ಗಣೇಶ್ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಿಗೆ ಆಪ್ತ ಅಮಾಲೋಚನೆ :
ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ದಿನೇಶ್ ಮಾತನಾಡಿ, ಸಮಾಜದಲ್ಲಿನ ಪಿಡುಗು ನಿರ್ಮೂಲನೆಗೆ ಖಾವಂದರು ಶ್ರಮಿಸುತ್ತಿದ್ದಾರೆ. ಒಂದು ವಾರ ನಡೆದ ಶಿಬಿರದಲ್ಲಿ 47 ಮಂದಿ ಭಾಗವಹಿಸಿದ್ದರು. ಯೋಗ, ಪ್ರಾರ್ಥನೆ, ಭಜನೆ ನಡೆಸಿ ಶಿಬಿರಾರ್ಥಿಗಳ ಆತ್ಮಾವಲೋಕಕ್ಕಾಗಿ ಕೌನ್ಸಿಲಿಂಗ್ ಶಿಬಿರದ ಮೂಲಕ ಕುಡಿತ ಬಿಟ್ಟು ಹೊಸ ಜೀವನ ಸಮಿತಿ ಸದಸ್ಯರ ಅನಿಸಿಕೆ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು. ಈ ವೇಳೆ ಶಿಬಿರಾರ್ಥಿಗಳಿಗೆ ನಡೆಸಿದ ಆಟೋಟ ಸ್ಪರ್ಧೆಯಲ್ಲಿ ಜಯ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು ಎಂದರು.
ಗ್ರಾಮೀಣ ನಗರದಲ್ಲಿನ ಅಶಕ್ತರು, ಬಡವರು, ರೈತರು, ಕಾರ್ಮಿಕರು, ಮಹಿಳೆಯರು, ನಿರುದ್ಯೋಗಿಗಳ ಆರ್ಥಿಕ ಮಟ್ಟ ಸುಧಾರಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಎರಡನೆ ಮಿನಿ ಸರ್ಕಾರದಂತೆ ಕಾರ್ಯ ನಿರ್ವಹಿಸುತ್ತಿದೆ.
-ಶ್ರೀ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿಗಳು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








