ಇಂದು ಆರ್​ಸಿಬಿ- ಕೆಕೆಆರ್ ಪಂದ್ಯ; ಫಾಫ್ ಬಳಗದಲ್ಲಿ ಮಹತ್ತರ ಬದಲಾವಣೆ?

IPL 2022:

ಇಂದು ಅಂದರೆ ಮಾರ್ಚ್​ 30ರ ಬುಧವಾರದಂದು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ.

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಸಂಪೂರ್ಣ ವಿಭಿನ್ನ ಆರಂಭ ಪಡೆದಿದ್ದು, ಇಂದಿನ ಪಂದ್ಯ ಕುತೂಹಲ ಮೂಡಿಸಿದೆ. ಕೋಲ್ಕತ್ತಾ ತಂಡವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಿರಾಯಾಸವಾಗಿ ಮೊದಲ ಪಂದ್ಯದಲ್ಲಿ ಸೋಲಿಸಿತ್ತು.

 5ನೇ ದಿನ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ RRR

ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯದಲ್ಲಿ 205 ರನ್ ಗಳಿಸಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಎರಡೂ ತಂಡಗಳು ಮುಖಾಮುಖಿಯಾಗುವಾಗ ಆಡುವ ಬಳಗದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದೇ ಎಂಬುದು ಪ್ರಶ್ನೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲ ಪಂದ್ಯದಲ್ಲಿ ಆಲ್​ರೌಂಡ್ ಪ್ರದರ್ಶನ ನೀಡಿದ್ದು, ಅದೇ ತಂಡವನ್ನು ಇಳಿಸುವ ಸಾಧ್ಯತೆ ಇದೆ. ಆರ್​ಸಿಬಿ ತಂಡದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದೇ? 

ಆರ್​ಸಿಬಿ ಬಳಗದಲ್ಲಿ ಆಕಾಶ್ ದೀಪ್ ಮೊದಲ ಪಂದ್ಯದಲ್ಲಿ ಸ್ಥಾನ ಪಡೆದಿದ್ದರು. ಇಂದಿನ ಪಂದ್ಯದಲ್ಲಿ ಅವರ ಸ್ಥಾನದಲ್ಲಿ ಸಿದ್ಧಾರ್ಥ್ ಕೌಲ್ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಉಳಿದಂತೆ ಆರ್​ಸಿಬಿ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಮೊದಲ ಪಂದ್ಯದಲ್ಲಿ ಫಾಫ್ ಕಪ್ತಾನನ ಆಟವಾಡಿದ್ದರು. ವಿರಾಟ್ ಕೊಹ್ಲಿ ಕೂಡ ಫಾರ್ಮ್​ಗೆ ಮರಳಿದ್ದು, ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಮೊದಲು ರಾಹುಲ್ ಗಾಂಧಿ, ನಂತರ ಅಮಿತ್ ಶಾ ಸಿದ್ದಗಂಗಾ ಮಠಕ್ಕೆ ಭೇಟಿ

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟಿಂಗ್​ನಲ್ಲಿ ಮತ್ತೆರಡು ಅಂಶಗಳನ್ನು ಗುರುತಿಸಬಹುದು. ಓಪನಿಂಗ್ ಬ್ಯಾಟರ್ ಅನೂಜ್ ರಾವತ್ ಉತ್ತಮ ಕೊಡುಗೆ ನೀಡುವ ಸಾಮರ್ಥ್ಯ ತೋರಿಸಿದ್ದು, ಈ ಪಂದ್ಯಾವಳಿಯಲ್ಲಿ ಅನೂಜ್ ಹಾಗೂ ಫಾಫ್ ಜೋಡಿಯೇ ಇನ್ನುಮುಂದೆ ಕಣಕ್ಕಿಳಿಯಬಹುದು. ಜತೆಗೆ ದಿನೇಶ್ ಕಾರ್ತಿಕ್ ಫಾರ್ಮ್ ಆರ್​ಸಿಬಿಗೆ ಇದ್ದ ಫಿನಿಶಿಂಗ್ ಚಿಂತೆಗಳನ್ನು ದೂರ ಮಾಡಿದೆ. ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಕಾರ್ತಿಕ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ದರು. ಅವರಿಂದ ಇಂಥದ್ದೇ ಆಟದ ನಿರೀಕ್ಷೆಯಲ್ಲಿ ತಂಡವಿದೆ.

ಆರ್​ಸಿಬಿಗೆ ಬೌಲಿಂಗ್ ವಿಭಾಗ ಮತ್ತೆ ಚಿಂತಿಸುವಂತೆ ಮಾಡಿದೆ. ಕಾರಣ, ಹಿಂದಿನ ಪಂದ್ಯದಲ್ಲಿ 200ಕ್ಕೂ ಅಧಿಕ ಮೊತ್ತವನ್ನು ಡಿಫೆಂಡ್ ಮಾಡಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಒಂದು ಓವರ್ ಇರುವಂತೆಯೇ ಪಂಜಾಬ್ ಗುರಿ ಮುಟ್ಟಿತ್ತು. ಫೀಲ್ಡಿಂಗ್​ನಲ್ಲಿಯೂ ಆರ್​ಸಿಬಿ ತಪ್ಪು ಮಾಡಿತ್ತು. ಈ ಪಂದ್ಯದಲ್ಲಿ ಅದನ್ನೆಲ್ಲಾ ಸುಧಾರಿಸುವ ವಿಶ್ವಾಸದಲ್ಲಿ ತಂಡವಿದೆ. ಸ್ಪಿನ್ ದಾಳಿಯ ನೇತೃತ್ವ ವಹಿಸಿರುವ ವನಿಂದು ಹಸರಂಗ ಇನ್ನಷ್ಟು ಮಿಂಚಬೇಕಿದೆ. ಕಳೆದ ಪಂದ್ಯದಲ್ಲಿ ಶಹಬಾಜ್ ಅಹ್ಮದ್​ಗೆ ಕೇವಲ ಒಂದು ಓವರ್ ಬೌಲಿಂಗ್ ನೀಡಲಾಗಿತ್ತು. ಈ ಪಂದ್ಯದಲ್ಲಿ ನಾಯಕ ಫಾಫ್ ಈ ಬಗ್ಗೆ ಮತ್ತಷ್ಟು ಗಮನ ಹರಿಸಬಹುದು. ಸಿರಾಜ್ ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದರು. ಈ ಪಂದ್ಯದಲ್ಲಿ ಹರ್ಷಲ್- ಸಿರಾಜ್ ಮತ್ತೆ ಮೋಡಿ ಮಾಡುವ ನಿರೀಕ್ಷೆಯನ್ನು ತಂಡ ಹೊಂದಿದೆ.

ಆರ್‌ಸಿಬಿ ತಂಡದಲ್ಲಿ ಈ 3 ಬದಲಾವಣೆಗಳನ್ನು ಮಾಡಿಕೊಳ್ಳದಿದ್ದರೆ ಮತ್ತೆ ಸೋಲು ಖಚಿತ!

ಆರ್​ಸಿಬಿ ಸಂಭಾವ್ಯ ತಂಡ:

RCB: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫೇನ್ ರುದರ್ಫೋರ್ಡ್, ದಿನೇಶ್ ಕಾರ್ತಿಕ್ (WK), ಡೇವಿಡ್ ವಿಲ್ಲಿ , ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್/ ಸಿದ್ಧಾರ್ಥ್ ಕೌಲ್

ಕೆಕೆಆರ್​​ ಆಡುವ ಬಳಗ ಹೇಗಿರಬಹುದು?

ಇತ್ತ ಕೆಕೆಆರ್​ ಆರ್​ಸಿಬಿ ವಿರುದ್ಧ ಉತ್ತಮ ದಾಖಲೆ ಹೊಂದಿದೆ. ಆರ್​ಸಿಬಿ ಮೇಲಿನ ಹಿಂದಿನ 3 ಪಂದ್ಯಗಳಲ್ಲಿ ಕೆಕೆಆರ್ 2ರಲ್ಲಿ ಜಯದಾಖಲಿಸಿದೆ. ಸುನಿಲ್ ನರೇನ್, ಆಂಡ್ರೆ ರಸೆಲ್ ಆರ್​ಸಿಬಿ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದು, ಇಂದಿನ ಪಂದ್ಯದಲ್ಲೂ ಕೆಕೆಆರ್ ಅಭಿಮಾನಿಗಳು ಅವರಿಂದ ಇಂತಹದ್ದೇ ಪ್ರದರ್ಶನ ನಿರೀಕ್ಷಿಸುತ್ತಿದ್ದಾರೆ. ಶ್ರೇಯಸ್ ಬಳಗದಲ್ಲಿ ಸ್ಪಿನ್ ವಿಭಾಗ ಬಲಿಷ್ಠವಾಗಿದ್ದು, ಉಮೇಶ್ ಯಾದವ್ ವೇಗದ ಬೌಲಿಂಗ್ ನೇತೃತ್ವ ವಹಿಸಿದ್ದಾರೆ.

ಕೆಕೆಆರ್​ ಸಂಭಾವ್ಯ ತಂಡ:

ಕೆಕೆಆರ್: ಶ್ರೇಯಸ್ ಅಯ್ಯರ್ (ಸಿ), ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಆಂಡ್ರೆ ರಸೆಲ್, ಸ್ಯಾಮ್ ಬಿಲ್ಲಿಂಗ್ಸ್, ಶೆಲ್ಡನ್ ಜಾಕ್ಸನ್ (ವಿಕೆ), ಸುನಿಲ್ ನರೈನ್, ಉಮೇಶ್ ಯಾದವ್, ಶಿವಂ ಮಾವಿ, ವರುಣ್ ಚಕ್ರವರ್ತಿ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap