ತುಮಕೂರು:
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರು ಮಾಜಿ ಶಾಸಕರಾದ ಆರ್. ನಾರಾಯಣ್ ನಿಧನರಾಗಿದ್ದಾರೆ.ಕೆಂಗಲ್ ಹನುಮಂತಯ್ಯ ಅವರ ಅನುಯಾಯಿಯಾಗಿ ರಾಜಕಾರಣ ಪ್ರವೇಶಿಸಿದ್ದ ಆರ್ ನಾರಾಯಣ್ ಅವರು ಎಸ್. ಎಂ. ಕೃಷ್ಣ ಅವರ ಅವಧಿಯಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ರಾಗಿಯೂ ಕಾರ್ಯನಿರ್ವಹಿಸಿದ್ದರು.
ಅವಿವಾಹಿತ ರಾಗಿದ್ದ ನಾರಾಯಣ್ ಅವರು ನಗರದ ಸಿಎಸ್ ಐ ಬಡಾವಣೆ ಯಲ್ಲಿ ವಾಸವಿದ್ದ ರು. ಆಸ್ಪತ್ರೆ ಯಿಂದ ಇಂದು ಮಧ್ಯಾಹ್ನ 12.30ಕ್ಕೆ ಪಾರ್ಥೀವ ಶರೀರವನ್ನು ತುಮಕೂರಿನ ನಿವಾಸಕ್ಕೆ ತರುತ್ತಿದ್ದು ಸಾರ್ವಜನಿಕ ದರ್ಶನಕ್ಕೆಇರಿಸಲಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರ ಶೇಖರ್ ಗೌಡ ತಿಳಿಸಿದ್ದಾರೆ. ನಾರಾಯಣ್ ಅವರ ಒಡನಾಡಿಗಳಾಗಿದ್ದ ಸಿರಾ ಶಾಸಕ ಟಿ. ಬಿ. ಜಯಚಂದ್ರ, ಸಚಿವರಾದ ಡಾ. ಜಿ. ಪರಮೇಶ್ವರ, ಕೆ. ಎನ್. ರಾಜಣ್ಣ, ಮಾಜಿಸಂಸದ ಜಿ. ಎಸ್. ಬಸವರಾಜ್,ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಸಂಸದರಾದ ಮುದ್ದಹನಮೇಗೌಡ ,ಮಾಜಿ ಶಾಸಕರಾದ ರಫೀಕ್ ಅಹಮದ್ , ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳಿಧರ ಹಾಲಪ್ಪ , ಪ್ರಜಾಪ್ರಗತಿ ಸಂಪಾದಕ ಎಸ್. ನಾಗಣ್ಣ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.