ದರ್ಶನ್‌ ಭೇಟಿ ಮಾಡಿದ ರಚಿತ ರಾಮ್‌ ಹೇಳಿದ್ದೇನು ಗೊತ್ತಾ…?

ಬೆಂಗಳೂರು:

    ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ ಅವರನ್ನು ನಟಿ ರಚಿತಾ ರಾಮ್‌ ಅವರು ಗುರುವಾರ ಭೇಟಿಯಾಗಿ ಚರ್ಚಿಸಿದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರಾಗೃಹಕ್ಕೆ ತೆರಳಿದ ಅವರು ದರ್ಶನ್‌ ಅವರೊಂದಿಗೆ ಅರ್ಧ ತಾಸು ಚರ್ಚೆ ನಡೆಸಿ ವಾಪಸ್ ಬಂದರು.

   ನಂತರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ರಚಿತಾ ರಾಮ್‌, ‘ದರ್ಶನ್‌ ಅವರು ಆರೋಗ್ಯವಾಗಿದ್ದಾರೆ. ಅವರು ಚಿತ್ರರಂಗದ ರಾಜನಿದ್ದಂತೆ. ಅದೇ ಸ್ಥಾನದಲ್ಲಿ ಅವರನ್ನು ನೋಡುತ್ತೇನೆ’ ಎಂದು ಹೇಳಿ ಭಾವುಕರಾದರು.

   ನಾನು ಅವರ ಬ್ಯಾನರ್ ನಿಂದಲೇ ಚಿತ್ರರಂಗ ಪ್ರವೇಶಿಸಿದವಳು. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು, ದರ್ಶನ್​ ಸರ್​. ಇವತ್ತು ಚಿತ್ರರಂಗದಲ್ಲಿ ನಾನೇನು ಹೆಸರು ಮಾಡಿದ್ದರೆ ಅದಕ್ಕೆ ದರ್ಶನ್​ ಸರ್​ ಕಾರಣ. ಅವತ್ತು ದರ್ಶನ್​ ಸರ್​ ಏನಾದ್ರು ನೋ ಅಂದಿದ್ದರೆ ಬಿಂದ್ಯಾ ರಾಮ್​ ರಚಿತಾ ರಾಮ್​ ಆಗುತ್ತಿರಲು ಸಾಧ್ಯವಿರಲಿಲ್ಲ. ಅವರ ಒಂದು ಋಣ ನನ್ನ ಇಡೀ ಕುಟುಂಬದ ಮೇಲಿದೆ. ಜೈಲಿನಲ್ಲಿ ಅವರೇ ನನಗೆ ಧೈರ್ಯ ತುಂಬಿದರು. ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿ ಸಿಗಲಿ ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link