ನಡಾಲ್‌ರ ಫ್ರೆಂಚ್ ಓಪನ್ ಫೈನಲ್ ನಲ್ಲಿ ಬಳಸಿದ RACKET 1.34 ಕೋಟಿ ರೂ.ಗೆ ಹರಾಜು….!

ಪ್ಯಾರಿಸ್‌: 

    ಕಳೆದ ವರ್ಷ ಟೆನಿಸ್‌ಗೆ ವಿದಾಯ ಹೇಳಿದ್ದ ದಿಗ್ಗಜ, 22 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ರಾಫೆಲ್ ನಡಾಲ್  ಅವರ ಐತಿಹಾಸಿಕ 2017ರ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಟೆನಿಸ್ ರ್ಯಾಕೆಟ್  ದಾಖಲೆಯ 1,57,333 ಡಾಲರ್‌ಗೆ   ಹರಾಜಾಗಿದೆ. ನಡಾಲ್ 2017ರ ಫೈನಲ್‌ನಲ್ಲಿ ಈ ಬಬೋಲಟ್ ರ್ಯಾಕೆಟ್‌ನಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಅವರು ಸ್ವಿಟ್ಸರ್‌ಲ್ಯಾಂಡ್‌ನ ಸ್ಟ್ಯಾನ್ ವಾವ್ರಿಂಕರನ್ನು ನೇರ ಸೆಟ್‌ಗಳಿಂದ ಸೋಲಿಸಿದ್ದರು.

   ಈ ರ್ಯಾಕೆಟನ್ನು ನಡಾಲ್ 2017ರ ಋತುವಿನುದ್ದಕ್ಕೂ ಬಳಸಿದ್ದರು. ಅಲ್ಲದೆ, 2017ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಅವರು ಒಂದೇ ಒಂದು ಸೆಟ್ಟನ್ನು ಕಳೆದುಕೊಂಡಿರಲಿಲ್ಲ. ಹೀಗಾಗಿ ಅದಕ್ಕೆ ಐತಿಹಾಸಿಕ ಮಹತ್ವ ಪ್ರಾಪ್ತವಾಗಿದೆ.

   2022ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಬಳಸಿದ್ದ ರ್ಯಾಕೆಟ್ 1.19 ಕೋಟಿ ರೂ.ಗೆ ಹರಾಜಾಗಿತ್ತು. 2017ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ ನಡಾಲ್ ತನ್ನ ಎದುರಾಳಿ ವಾವ್ರಿಂಕರನ್ನು 6-2, 6-3, 6-1 ಸೆಟ್‌ಗಳಿಂದ ಸೋಲಿಸಿದ್ದರು. ಅದು ಅವರ 10ನೇ ಫ್ರೆಂಚ್ ಓಪನ್ ಪ್ರಶಸ್ತಿಯಾಗಿತ್ತು.

ನಡಾಲ್ ಗೆದ್ದ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳು

ಫ್ರೆಂಚ್‌ ಓಪನ್: 14 (2005, 06, 07, 08, 2010, 2011, 2012, 2013, 2014, 2017,2018, 2019, 2020,2022) ಅಮೆರಿಕ ಓಪನ್ 4 (2010, 2013, 2017, 2109) ಆಸ್ಟ್ರೇಲಿಯಾ ಓಪನ್: 2 (2010, 2013, 1017, 2022 ವಿಂಬಲ್ಡನ್ 2 (2008, 2010) ಒಟ್ಟು ಎಟಿಪಿ ಪ್ರಶಸ್ತಿಗಳು: 92 (ಇವುಗಳಲ್ಲಿ 36 ಮಾಸ್ಟರ್ಸ್‌ ಪ್ರಶಸ್ತಿ ಸೇರಿವೆ) ಒಲಿಂಪಿಕ್ಸ್‌: 2008 (ಬೀಜಿಂಗ್): ಸಿಂಗಲ್ಸ್ ಪ್ರಶಸ್ತಿ 2016 (ರಿಯೊ) ಡಬಲ್ಸ್ ಪ್ರಶಸ್ತಿ (ಮಾರ್ಕ್ ಲೋಪೆಝ್ ಜೊತೆಗಾರ). ಆವೆ ಅಂಕಣದಲ್ಲಿ ಅವರು ಸತತವಾಗಿ 81 ಪಂದ್ಯಗಳನ್ನು ಗೆದ್ದಿರುವುದು ಮುಕ್ತ (ಓಪನ್‌) ಯುಗದಲ್ಲಿ ದಾಖಲೆ

Recent Articles

spot_img

Related Stories

Share via
Copy link