ಬೆಂಗಳೂರು :
ಬೆಂಗಳೂರಿನಲ್ಲಿ ಗೈನಕಾಲಾಜಿ ಎಂಡೋಸ್ಕೋಪಿಯಲ್ಲಿ “ಇತ್ತೀಚಿನ ಅವಿಷ್ಕಾರಗಳು” ಎಂಬ ವಿಷಯದ ಬಗ್ಗೆ ವಾರ್ಷಿಕ ಸಮ್ಮೇಳನ ಮತ್ತು ಕಾರ್ಯಾಗಾರವನ್ನು ಬೆಂಗಳೂರಿನ ಹೋಟೆಲ್ ಐ.ಟಿಸಿ ಗಾರ್ಡೇನಿಯಾದಲ್ಲಿ ಸೆಪ್ಟೆಂಬರ್ 29 ಮತ್ತು 21 ಅಂದು ಏರ್ಪಡಿಸಿದೆ. ಅಜ್ಜಿಯಸ್. ಹಾಸ್ಪಿಟಲ್, ಬೆಂಗಳೂರು ಇದರ ನಿರ್ದೇಶಕರಾದ ಡಾ.ಬಿ.ರಮೇಶ್‌ರವರು ಈ ಸಮ್ಮೇಳನದ ವ್ಯವಸ್ಥಾಪಕ ಅಧ್ಯಕ್ಷರಾಗಿರುವರು.
ರೇಜ್ ಇದು ಒಂದು ಬಹು ಹಳೆಯ ಸ್ತ್ರೀರೋಗ ತಜ್ಞರ ಎಂಡೋಸ್ಕೋಪಿ ಸೊಸೈಟಿ ಇದು 1948ರಲ್ಲಿ ಸ್ಥಾಪನೆಯಾಗಿದ್ದು ಅಂದಿನಿಂದ ಸ್ತ್ರೀರೋಗ ತಜ್ಞರ ಭಾರತದಲ್ಲಿ ಲ್ಯಾಪರೋಸ್ಕೋಪಿಯ ಪ್ರವರ್ಧನೆಗೆ ಶ್ರಮಿಸುತ್ತಿದ್ದಾರೆ. ಈ ಕಾರ್ಯಕ್ಕೆ ಲ್ಯಾಪರೋಸ್ಕೋಪಿಸ್ಟರುಗಳೂ ಸಹ ನೆರವಾಗಿದ್ದಾರೆ. “ಸುರಕ್ಷಿತ ಎಂಡೋಸ್ಕೋಪಿಯು” ರೇಜಸ್‌ನ ಧೈಯವಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ನುರಿತ ತಂಡದ ಕಾರ್ಯದ ಮುಖೇನ ಲ್ಯಾಪರೋಸ್ಕೋಪಿಯನ್ನು ಸುರಕ್ಷಿತ ಕ್ರಮವನ್ನಾಗಿಸುವ ಉದ್ದೇಶ ಈ ರೇಜ್ ಸಮ್ಮೇಳನದ ಮುಖ್ಯ ಅಂಶವಾಗಿದೆ.
ಲ್ಯಾಪರೋಸ್ಕೋಪಿಯನ್ನು ಜಾರಿಗೆ ತರಬೇಕಾದರೆ ಅದಕ್ಕೆ ನಿರಂತರ ತರಬೇತಿ, ಸಮರ್ಪಣೆ, ಬದ್ಧತೆ ಹಾಗು ತದೇಕವಾದ ಪ್ರಾಕ್ಟಿಸ್ ಅಗತ್ಯವಾಗಿರುತ್ತದೆ. ಉತ್ತಮ ಶಸ್ತ್ರಚಿಕಿತ್ಸೆ ನಡೆಸಲು, ಅದರ ಒಳ್ಳೆಯ ಫಲಿತಾಂಶ ಪಡೆಯಲು ಸಮರ್ಪಣಾ ಮನೋಭಾವನೆಯ ತಂಡ ಕೂಡ ಅಗತ್ಯವಾಗಿ ಇರಬೇಕಾಗುತ್ತದೆ. ಇಂತಹ ತಂಡದಲ್ಲಿ ಅರಿವಳಿಕೆ ತಜ್ಞರು, ಶಸ್ತ್ರಚಿಕಿತ್ಸಕರು, ಸಹಾಯಕರು ಹಾಗು ತರಬೇತಿ ಹೊಂದಿದ ನರ್ಸ್‌ಗಳು ಇರಬೇಕಾಗುತ್ತದೆ. ಶಸ್ತ್ರಚಿಕಿತ್ಸೆಗೆ ಬಳಸುವ ಉಪಕರಣಗಳು ಮತ್ತು ಅಳವಡಿಸಿಕೊಳ್ಳುವ ತಂತ್ರಜ್ಞಾನವೂ ಸಹ ಇಲ್ಲಿ ಪ್ರಮುಖವಾಗಿರುತ್ತದೆ.
ಗೈನೆಕ್ ಎಂಡೋಸ್ಕೋಪಿಯ ತಜ್ಞರಾದ ಡಾ.ಬಿ.ರಮೇಶ್ರವರು ಲ್ಯಾಪರೋಸ್ಕೋಪಿ ಪ್ರವರ್ಧನೆ ಮಾಡಲು ರೇಜ್ ವಾರ್ಷಿಕ ಸಮ್ಮೇಳನ ಏರ್ಪಡಿಸುತ್ತಿರುವರು. ಸೆಪ್ಟೆಂಬರ್ 20 ಮತ್ತು 21 ರಂದು ಈ ಕುರಿತ ಕಾರ್ಯಾಗಾರ ನಡೆಯುತ್ತಿದೆ. ಭಾರತದಾದ್ಯಂತದಿಂದ ಬರುವ ನುರಿತ ಗೈನೆಕ್ ಲ್ಯಾಪರೋಸ್ಕೋಪಿಸ್ಟರುಗಳು ಒಂದೇ ಸ್ಥಳದಲ್ಲಿ ಶಸ್ತ್ರಚಿಕಿತ್ಸೆ ನಡೆಸುವರು. 3ಡಿ ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆ ಸುಲಭ ಮತ್ತು ಸುರಕ್ಷಿತ ವಿಧಾನವೆಂದರೆ ತಪ್ಪಾಗಲಾರದು.
ವಿಶೇಷವಾಗಿ ಈ 25ನೇ ವರ್ಷದ RAGE – 2025 ರ ವಾರ್ಷಿಕ ಸಮ್ಮೇಳನದಲ್ಲಿ ಗರ್ಭಕೋಶದ ತೊಂದರೆಗಳಾದಂತಹ ಸೈಬ್ರಾಯಿಡ್ ಗದ್ದೆಗಳು, ಕ್ಯಾನ್ಸರ್, ಗರ್ಭಕೋಶದ ಚಾರುವಿಕೆ, ಹಿಪ್ಪೆರಕ್ಷಮಿ, ಎಂಡೊಮೆಟ್ರಿಯಾಸಿಸ್, ಬಂಜೆತನ ಹೀಗೆ ಸ್ತ್ರೀರೋಗಕ್ಕೆ ಸಂಬಂದಿಸಿದ 35 ರೋಗಿಗಳಿಗೆ ಉಚಿತವಾಗಿ ವಿವಿಧ ಕುತೂಹಲಕಾರಿ ಲ್ಯಾಪ್ರೋಸ್ಕೋಪಿ ತಸ್ತ್ರಚಿಕಿತ್ಸೆಗಳನ್ನು ಅಲ್ಟಿಯಸ್ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ ತಮ್ಮದೇ ಆದ ಕ್ಷೇತ್ರದಲ್ಲಿ ನುರಿತ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಮಾಡುವುದರ ಮೂಲಕ ಬಡರೋಗಿಗಳಿಗೆ ಬಹಳ ಅನುಕೂಲವಾಗುತ್ತಿದೆ.
ಕಳೆದ 3 ತಿಂಗಳುಗಳಿಂದ ನಡೆಸಿದ ಆರೋಗ್ಯ ಶಿಬಿರಗಳ ಮೂಲಕ ಕರ್ನಾಟಕ ಇತರೆ ಜಿಲ್ಲೆಗಳಿಂದ ಬಡರೋಗಿಗಳನ್ನು ಆಯ್ಕೆ ಮಾಡಲಾಗಿದ್ದು, ರೋಗಿಯ ಅವಯವಗಳಿಗೆ ಹೆಚ್ಚು ಹಾನಿಯಾಗದಂತೆ ಹಾಗು ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುವುದು ಈ ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆಯ ಪ್ರಮುಖ ಉದ್ದೇಶವಾಗಿದೆ. ಡಾ.ಬಿ.ರಮೇಶ್ ರವರ ತಂಡದವರು ಕಳೆದ 25 ವರ್ಷಗಳಿಂದ ಸಾವಿರಾರು ಲ್ಯಾಪರೋಸ್ಕೋಪಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಲಕ್ಷಾಂತರ ಸ್ತ್ರೀರೋಗ ತಜ್ಞರನ್ನು ಲ್ಯಾಪ್ರೋಸ್ಕೋಪಿಕ್ ತರಬೇತಿಯನ್ನು ನೀಡಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಕಾರ್ಯಗಾರದಲ್ಲಿ ಆಸ್ಟ್ರೇಲಿಯಾ, ಯುರೋಪ್, ಸ್ಪೇನ್ ದೇಶಗಳಿಂದ ಹಲವಾರು ನುರಿತ ವೈದ್ಯರ ತಂಡ ಭಾಗವಹಿಸಲಿದ್ದು, ಈ ಬ್ರಾಪ್ರೋಸ್ಕೋಪಿಯಿಂದಾಗುವ ಅನುಕೂಲವನ್ನು ಈ ಆರೋಗ್ಯ ಶಿಬಿರದಲ್ಲಿ ತಿಳಿಸುವುದೇ ಸಮ್ಮೇಳನದ ಮುಖ್ಯ ಉದ್ದೇಶ ಎಂದು ಡಾ.ಬಿ.ರಮೇಶ್ ತಿಳಿಸಿದರು.
ರೋಗಿಯ ಅವಯವಗಳಿಗೆ ಹೆಚ್ಚು ಹಾನಿಯಾಗದಂತೆ ಹಾಗು ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುವುದು ಈ ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆಯ ಪ್ರಮುಖ ಉದ್ದೇಶವಾಗಿದೆ. ಬನ್ನಿ ನಾವೆಲ್ಲ ಒಂದಾಗಿ ಮನುಕುಲದ ಒಳಿತಿಗಾಗಿ ಲ್ಯಾಪರೋಸ್ಕೋಪಿ ಚಿಕಿತ್ಸೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತ ಹಾಗು ಪರಿಣಾಮಕಾರಿಯನ್ನಾಗಿಸೋಣ. ಲ್ಯಾಪರೋಸ್ಕೋಪಿಕ್‌ನ ನೈಪುಣ್ಯತೆ ಮತ್ತು ಜ್ಞಾನದ ಆಸಕ್ತಿಯುಳ್ಳ ವೈದ್ಯರುಗಳಿಗೆ ತಿಳಿಸುವುದು ಈ ಸಮ್ಮೇಳನದ ಗುರಿಯಾಗಿದೆ ಎಂದು ಅಬ್ಬಿಯಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಬಿ.ರಮೇಶ್ ತಿಳಿಸಿದರು.
