ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಶಿವನೇಹಳ್ಳಿ ಗ್ರಾಮದ ಈಶ್ವರಯ್ಯ ಎಂಬುವರ ರಾಗಿ ಬಣವೆಗೆ ಸೋಮವಾರ ರಾತ್ರಿ ಬೆಂಕಿ ಬಿದ್ದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಧಳದವರು ಬಂದರೂ ಸಹ ಬೆಂಕಿಯನ್ನು ನಿಂದಿಸಿದರೂ ಸಹ ರಾಗಿ ಬಣವೆ ಸುಟ್ಟು ಕರಕಲಾಗಿದೆ. ಧನಕರುಗಳಿಗೆ ಮೇವುಇಲ್ಲದಂತೆ ಆಗಿದೆ. ಹಿಂದೆ ಇದೇ ಗ್ರಾಮದಲ್ಲಿ ಅನೇಕ ಭಾರಿ ರಾಗಿ ಬಣವೆಗಳಿಗೆ ಬೆಂಕಿ ಬೀಳುತ್ತಿದ್ದು ಯಾರು ಕೀಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ. ಸುಮಾರು 50ಸಾವಿರ ನಷ್ಠ ಉಂಟಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಎಂದು ರೈತ ಈಶ್ವರಯ್ಯ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಗೀತಾ ಎಕೆಪಿರಾಜು ಭೇಟಿ ನೀಡಿ ಕುಂಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಬರುವ ಸಹಾಯಧನವನ್ನು ಕೂಡಲೆ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು ಅದಷ್ವು ಬೇಗನೆ ಸಹಾಯಧನವನ್ನು ವಿತರಿಸಲಾಗುವುದು ಎಂದು ತಿಳಿಸಿದರು. ಚೇಳೂರು ಠಾಣೆಗೆ ಪ್ರಕರಣಾ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ