ಭಾರತದ ಪ್ರಜಾಪ್ರಭುತ್ವ ಈಗ ಪುನಶ್ಚೇತನಗೊಳ್ಳುತ್ತಿದೆ: ರಾಹುಲ್ ಗಾಂಧಿ

ವಾಷಿಂಗ್ಟನ್:

   ಕಳೆದ 10 ವರ್ಷಗಳಿಂದ ಭಾರತದಲ್ಲಿ ಹದಗೆಟ್ಟು ಹೋಗಿದ್ದ ಪ್ರಜಾಪ್ರಭುತ್ವ ಈಗ ತನ್ನ ಮೊದಲಿನ ಸ್ಥಿತಿಗೆ ಮರಳಲು ಹೋರಾಟ ನಡೆಸುತ್ತಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

   ಅಮೆರಿಕದ ವಾಷಿಂಗ್ಟನ್ ನಲ್ಲಿರುವ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಭಾರತೀಯ ಸ್ಥಳೀಯ ಕಾಲಮಾನ ನಿನ್ನೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಭಾರತೀಯ ಪ್ರಜಾಪ್ರಭುತ್ವವು ಹದಗೆಟ್ಟು ಹೋಗಿತ್ತು, ಈಗ ಮತ್ತೆ ಪುಟಿದೇಳಲು ಹೋರಾಡುತ್ತಿದೆ ಎಂದರು. ಮಹಾರಾಷ್ಟ್ರ ಸರ್ಕಾರವನ್ನು ನಮ್ಮಿಂದ ಕಿತ್ತುಕೊಂಡರು. ನಾನು ಅದನ್ನು ನನ್ನ ಸ್ವಂತ ಕಣ್ಣುಗಳಿಂದ ನೋಡಿದ್ದೇನೆ. ನಮ್ಮ ಶಾಸಕರನ್ನು ಖರೀದಿಸಿ ಇದ್ದಕ್ಕಿದ್ದಂತೆ ಬಿಜೆಪಿ ನಾಯಕರಾದರು. ಹೀಗೆ ಎಲ್ಲಾ ವಿಷಯದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವ ಆಕ್ರಮಣಕ್ಕೆ ಒಳಗಾಗಿದೆ. ಅತ್ಯಂತ ಕೆಟ್ಟದಾಗಿ ದುರ್ಬಲಗೊಂಡಿದೆ. ಈಗ ಅದು ಮತ್ತೆ ಹೋರಾಡುತ್ತಿದ್ದು, ಹಿಂದಿನ ಸ್ಥಿತಿಗೆ ಮರಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.

   ಈ ಬಾರಿಯ ಲೋಕಸಭೆ ಚುನಾವಣಾ ಫಲಿತಾಂಶಗಳನ್ನು ನೋಡಿದರೆ,ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ನಿಮಗೆ ಹೆಚ್ಚಿನ ಭರವಸೆ ನೀಡುತ್ತದೆಯೇ ಎಂದು ಸುದ್ದಿಗಾರರು ಕೇಳಿದಾಗ, ಹೌದು, ನನ್ನ ಪ್ರಕಾರ, ಆಗುತ್ತದೆ. ಆದರೆ ಭಾರತೀಯ ಮತದಾರ ಸಾಕಷ್ಟು ಬದಲಾಗಿದ್ದಾನೆ ಮತ್ತು ತಿಳುವಳಿಕೆ ಹೊಂದಿದ್ದಾನೆ ಎಂದು ಹೇಳುವಷ್ಟು ಪರಿಸ್ಥಿತಿ ಸುಧಾರಿಸಿಲ್ಲ ಎಂದರು. 

ನಮ್ಮಲ್ಲಿ ಸಮತೋಲನದ ಮನೋಭಾವ ಇದ್ದರೆ ಮತದಾರನು ಬಹಳ ಜ್ಞಾನ ಮತ್ತು ಸ್ಥಿತಿಸ್ಥಾಪಕನಾಗಿರಬಹುದು. ಇದು ಪ್ರಜಾಪ್ರಭುತ್ವಕ್ಕೆ ಪೂರಕವಾಗಿದೆ ಎಂದರು. ಈ ಬಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಬ್ಯಾಂಕ್ ಖಾತೆ ಸ್ಥಗಿತಗೊಂಡು ನಾವು ಚುನಾವಣೆ ಎದುರಿಸಿದ್ದೇವೆ. ಇಂತಹ ವಿಷಯಗಳು ಬಹುಶಃ ನಮ್ಮ ಭಾರತದಲ್ಲಿ ಮತ್ತು ಇರಾಕ್‌ನಲ್ಲಿ ಸಂಭವಿಸಬಹುದು. ನಾವು ಚುನಾವಣೆ ಸಂದರ್ಭದಲ್ಲಿ ಅಕ್ಷರಶಃ ಹಣದ ಕೊರತೆಯನ್ನು ಎದುರಿಸಿದ್ದೆವು ಎಂದರು.

ನನ್ನಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಭಾರತೀಯ ಇತಿಹಾಸದಲ್ಲಿ ಮಾನನಷ್ಟಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದ ಏಕೈಕ ವ್ಯಕ್ತಿ ನಾನು. ಜೈಲಿನಲ್ಲಿರುವ ಮುಖ್ಯಮಂತ್ರಿ ನಮ್ಮಲ್ಲಿದ್ದಾರೆ. ಇದನ್ನೆಲ್ಲಾ ಭಾರತೀಯ ಮತದಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಬದಲಾಗುತ್ತಿದ್ದಾನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ: ಭಾರತದಲ್ಲಿ ಈ 21ನೇ ಶತಮಾನದ ಆಧುನಿಕ ಜಗತ್ತಿನಲ್ಲಿ ನಾನು ದೇವರೊಂದಿಗೆ ಮಾತನಾಡುತ್ತೇನೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ನಾನು ಎಲ್ಲರಿಗಿಂತ ಭಿನ್ನ. ನೀವು ಜೈವಿಕ ವ್ಯಕ್ತಿಗಳು, ನೀವು ಜೈವಿಕವಲ್ಲದ ವ್ಯಕ್ತಿ. ನಾನು ದೇವರೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದೇನೆ ಎನ್ನುತ್ತಾರೆ.

ಅದು ಚುನಾವಣೆಯಲ್ಲಿ ನಮಗೆ ಒಂದು ವಿಷಯವಾಯಿತು. ನಾವು ಪ್ರಧಾನಿಯನ್ನು ಸೋಲಿಸಿದ್ದೇವೆ ಎಂದರು.

ಇಷ್ಟೆಲ್ಲಾ ಮಾತನಾಡಿದ ನಂತರ ಪ್ರಧಾನ ಮಂತ್ರಿಗಳು ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂವಿಧಾನ ಪುಸ್ತಕಕ್ಕೆ ನಮಸ್ಕರಿಸಿದ್ದು ವಿರೋಧಾಬಾಸವಾಗಿ ಕಂಡಿತು. ಒಂದೆಡೆ ಸಂವಿಧಾನವನ್ನು, ಪ್ರಜಾಪ್ರಭುತ್ವ ರಚನೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ನಂತರ ಭಾರತೀಯರು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಗೌರವ ಕೊಡಬೇಕು, ಅದನ್ನು ರಕ್ಷಿಸಬೇಕು ಎನ್ನುತ್ತಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು.

Recent Articles

spot_img

Related Stories

Share via
Copy link
Powered by Social Snap