ಬೋಲಂಗಿರ್:
ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು “ನಾಶಪಡಿಸಲಿದೆ” ಮತ್ತು ಆದಿವಾಸಿಗಳು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಒದಗಿಸಲಾದ ಮೀಸಲಾತಿಯನ್ನು ರದ್ದುಗೊಳಿಸಲು ಬಯಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.
ಇಂದು ಒಡಿಶಾದ ಬೋಲಂಗಿರ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುತ್ತದೆ ಮತ್ತು ದೇಶವನ್ನು 22 ಬಿಲಿಯನೇರ್‌ಗಳು ಮುನ್ನಡೆಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
“ಬಿಜೆಪಿ ಈ ಪುಸ್ತಕವನ್ನು ಹರಿದು ಹಾಕಲು ಬಯಸುತ್ತಿದೆ. ಆದರೆ ನಾವು ಕಾಂಗ್ರೆಸ್ ಮತ್ತು ಭಾರತದ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ” ಎಂದು ರಾಹುಲ್ ಗಾಂಧಿ ತಮ್ಮ ಕೈಯಲ್ಲಿರುವ ಸಂವಿಧಾನವನ್ನು ತೋರಿಸಿದರು.
“ಬಿಜೆಪಿ ಗೆದ್ದರೆ ಮೀಸಲಾತಿಯನ್ನು ರದ್ದುಪಡಿಸಲಾಗುತ್ತದೆ, ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಲಾಗುತ್ತದೆ ಮತ್ತು ದೇಶವನ್ನು 22 ಕೋಟ್ಯಾಧಿಪತಿಗಳು ಮುನ್ನಡೆಸುತ್ತಾರೆ. ಹೀಗಾಗಿ ಜನಪರ ಸರ್ಕಾರ ರಚನೆಯಾಗಬೇಕು’’ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ