ನವದೆಹಲಿ:
ರಾಯ್‌ಬರೇಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಎರಡು ದಿನಗಳ ಮುನ್ನ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ವಯನಾಡ್ ಜನತೆಗೆ ಭಾವನಾತ್ಮಕ ಪತ್ರ ಬರೆದಿದ್ದು, ನಿರಂತರವಾಗಿ ನಿಂದನೆಗಳನ್ನು ಎದುರಿಸಿದಾಗ ನಿಮ್ಮ ಬೇಷರತ್ ಪ್ರೀತಿ ನನ್ನನ್ನು ರಕ್ಷಿಸಿದೆ ಎಂದು ಹೇಳಿದ್ದಾರೆ.
ನೀವು ಅವಕಾಶ ನೀಡಿದರೆ ನನ್ನ ಸಹೋದರಿ ಪ್ರಿಯಾಂಕಾ ಗಾಂಧಿ ವಯನಾಡನ್ನು ಪ್ರತಿನಿಧಿಸುತ್ತಾರೆ ಮತ್ತು ಅವರು ನಿಮ್ಮ ಪ್ರತಿನಿಧಿಯಾಗಿ ಅತ್ಯುತ್ತಮವಾದ ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಳಿದ್ದಾರೆ.
ವಯನಾಡು ಜನ ತಮ್ಮ “ಕುಟುಂಬ ಮತ್ತು ಮನೆ” ಎಂದು ಬಣ್ಣಿಸಿದ ರಾಹುಲ್ ಗಾಂಧಿ, ವಯನಾಡ್ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಯ್ ಬರೇಲಿಯನ್ನು
ರಾಹುಲ್ ಗಾಂಧಿ ಅವರು ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಲೋಕಸಭಾ ಕ್ಷೇತ್ರಗಳನ್ನು ಗೆದ್ದರೂ ಒಂದನ್ನು ಬಿಟ್ಟುಕೊಡಬೇಕಾಯಿತು. “ಮೊದಲು ನಾನು ನಿಮಗೆ ಅಪರಿಚಿತನಾಗಿದ್ದೆ. ಆದರೂ ನೀವು ನನ್ನನ್ನು ನಂಬಿದ್ದೀರಿ. ನೀವು ನನ್ನನ್ನು ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯದಿಂದ ಅಪ್ಪಿಕೊಂಡಿದ್ದೀರಿ. ನೀವು ಯಾವ ರಾಜಕೀಯ ಪಕ್ಷವನ್ನು ಬೆಂಬಲಿಸಿದ್ದೀರಿ ಎಂಬುದು ಮುಖ್ಯವಲ್ಲ, ನೀವು ಯಾವ ಸಮುದಾಯದವರು ಅಥವಾ ನೀವು ಯಾವ ಧರ್ಮವನ್ನು ನಂಬಿದ್ದೀರಿ ಅಥವಾ ನೀವು ಯಾವ ಭಾಷೆಯಲ್ಲಿ ಮಾತನಾಡುತ್ತೀರಿ ಎಂಬುದು ಮುಖ್ಯವಲ್ಲ ಎಂದು ರಾಹುಲ್ ಹೇಳಿದ್ದಾರೆ.
“ನಾನು ದಿನದಿಂದ ದಿನಕ್ಕೆ ಹೆಚ್ಚು ನಿಂದನೆಗೆ ಒಳಗಾದಾಗ ನಿಮ್ಮ ಬೇಷರತ್ ಪ್ರೀತಿ ನನ್ನನ್ನು ರಕ್ಷಿಸಿತು. ನೀನು ನನಗೆ ಆಶ್ರಯ ನೀಡಿದ್ದೀರಿ. ನೀವು ನನ್ನ ಮನೆ ಮತ್ತು ನನ್ನ ಕುಟುಂಬ ಇದ್ದಂತೆ. ನೀವು ನನ್ನ ಮೇಲೆ ಅನುಮಾನ ಪಡುತ್ತಿದ್ದೀರಿ ಎಂದು ನನಗೆ ಒಂದು ಕ್ಷಣವೂ ಅನ್ನಿಸಲಿಲ್ಲ” ಎಂದಿದ್ದಾರೆ.