ಮಧ್ಯಪ್ರದೇಶ:
‘ಪ್ರದಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ್ದು ಭ್ರಷ್ಠಾಚಾರ ಧರ್ಮ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಆರೋಪಿಸಿದರು.
ಮಧ್ಯಪ್ರದೇಶದಲ್ಲಿ ಉಜ್ಜೈನ್ ನಲ್ಲಿ ಮಹಾಕಾಳೇಶ್ವರನಿಗೆ ಪೂಜೆಯನ್ನು ಸಲ್ಲಿಸಿದ ನಂತರ ಅವರು ಸೋಮವಾರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಉಗ್ರ ಭಾಷಣ ಮಾಡಿದ ಅವರು, ರಫೇಲ್ ಡೀಲ್ ಹಿಡಿದುಕೊಂಡು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದ್ದಾರೆ.
ಧರ್ಮದ ಬಗ್ಗೆ ಮಾತನಾಡುವವರು, ಧರ್ಮದ ಭ್ರಷ್ಠಾಚಾರ ಮಾಡುತ್ತಿದ್ದಾರೆ ಎಂದು ದೂರಿದರು. ದೇಶದ ಹಣವನ್ನು ಲೂಟಿ ಮಾಡಿ ಉದ್ಯಮಿಗಳು ಪರಾರಿಯಾಗುತ್ತಿದ್ದಾರೆ. ಒಬ್ಬ ಲಂಡನ್‍ನಲ್ಲಿದ್ದರೆ, ಮತ್ತೊಬ್ಬ ಅಮೇರಿಕಾದಲ್ಲಿರುತ್ತಾನೆ ಹೀಗಿರುವಾಗ ನಾವು ಇಂತಹ ಭಾರತವನ್ನು ಬಯಸುವುದಿಲ್ಲ. ಕಾಂಗ್ರೆಸ್ ಸರ್ಕಾರ ಆಡಳಿತ ಬಂದಲ್ಲಿ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ