ಸ್ನೇಹಿತೆಯ ಮದುವೆಗೆ ತೆರಳಿ ವಿವಾದಕ್ಕೀಡಾದ ರಾಹುಲ್​ ಗಾಂಧಿ: ಇವರು ಯಾರು ಗೊತ್ತೇ?

ಕಠ್ಮಂಡು:

ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಭೇಟಿಯ ಭಾಗವಾಗಿ ಐದು ದಿನಗಳ ಕಾಲ ನೇಪಾಳದ ಕಠ್ಮಂಡುವಿಗೆ ತೆರಳಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ರಾಹುಲ್ ತಮ್ಮ ನೇಪಾಳಿ ಗೆಳತಿ ಸುಮ್ನಿಮಾ ಉದಾಸ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಭಾರತದ ಇತರೆ ಕೆಲವು ವಿಐಪಿಗಳೂ ಭಾಗವಹಿಸುವ ನಿರೀಕ್ಷೆಯಿದೆ.ಇಷ್ಟಕ್ಕೂ ರಾಹುಲ್ ಗೆಳತಿ ಸುಮ್ನಿಮಾ ಉದಾಸ್ ಯಾರು? ಆಕೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಬ್ರೌನ್ ರೈಸ್‌ ಸೇವನೆ ʼಯಿಂದ ಈ ʻ ಅಘಾತಕಾರಿ ಆರೋಗ್ಯ ಸಮಸ್ಯೆʼಗಳಿಗೆ ಬ್ರೇಕ್‌ ಹಾಕಿ

 ನೇಪಾಳದ ನೈಟ್‌ಕ್ಲಬ್‌ಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ ದೃಶ್ಯಗಳು ನಿನ್ನೆ ಲಭ್ಯವಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ಈ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಟ್ವೀಟಾಟಿಕೆ ಮುಂದುವರಿದಿದೆ. ‘ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಳ್ಳುವ ನಾಯಕ ನೈಟ್‌ಕ್ಲಬ್‌ಗಳಲ್ಲಿ ತಿರುಗುತ್ತಿದ್ದಾರೆ’ ಎಂಬ ಟೀಕೆಯನ್ನು ಬಿಜೆಪಿ ಮಾಡುತ್ತಿದ್ರೆ, ಕಾಂಗ್ರೆಸ್​ ‘ಅದೊಂದು ವೈಯಕ್ತಿಕ ಭೇಟಿಯಾಗಿದೆ’ ಎಂದು ಹೇಳಿದೆ. ಇದೇ ಸಂದರ್ಭದಲ್ಲಿ ರಾಹುಲ್​ ಗಾಂಧಿ ತಮ್ಮ ಸ್ನೇಹಿತೆ ಸುಮ್ನಿಮಾ ಉದಾಸ್​ ಅವರ ಮದುವೆಗೆ ತೆರಳಿದ್ದಾರೆ ಎಂದು ಸ್ಪಷ್ಟನೆ ನೀಡಲಾಗಿದೆ.

 ಸುಮ್ನಿಮಾ ಉದಾಸ್​

ಸುಮ್ನಿಮಾ ಉದಾಸ್ ಒಬ್ಬರು ಪತ್ರಕರ್ತೆ. ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಯಾದ CNN ಇಂಟರ್‌ನ್ಯಾಶನಲ್‌ಗೆ ದೆಹಲಿ ವರದಿಗಾರರಾಗಿದ್ದಾರೆ. ಇವರು ಭಾರತದ ಪ್ರಮುಖ ರಾಜಕೀಯ ಬೆಳವಣಿಗೆಗಳ ಜೊತೆಗೆ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಕುರಿತು ಅನೇಕ ವಿಶೇಷ ಲೇಖನಗಳನ್ನು ಬರೆದಿದ್ದಾರೆ.

ಪಿಎಸ್‌ಐ ನೇಮಕಾತಿ ಅಕ್ರಮ: ತರಬೇತಿ ಪಡೆಯುತ್ತಿದ್ದ ಪಿಎಸ್‌ಐ ಸಿಐಡಿ ವಶಕ್ಕೆ

ದೇಶದಲ್ಲಿ ಸಂಚಲನ ಮೂಡಿಸಿದ ದೆಹಲಿ ಗ್ಯಾಂಗ್​ರೇಪ್​ ಪ್ರಕರಣ, ಮಲೇಷ್ಯಾ ವಿಮಾನ ಅಪಘಾತ ಮತ್ತು ಕಾಮನ್‌ವೆಲ್ತ್ ಭ್ರಷ್ಟಾಚಾರ ಹಗರಣದ ಬಗೆಗೂ ವಿಶೇಷ ಲೇಖನಗಳನ್ನು ಬರೆದಿದ್ದಾರೆ. ಸುಮ್ನಿಮಾ 2001 ರಿಂದ 2017 ರವರೆಗೆ ಸಿಎನ್‌ಎನ್‌ಗಾಗಿ ಕೆಲಸ ಮಾಡಿದ್ದಾರೆ ಮತ್ತು 2018 ರಿಂದ ಲುಂಬಿನಿ ಮ್ಯೂಸಿಯಂನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಂಸ್ಥಾಪಕರೂ ಹೌದು.

ರಾಹುಲ್​ ಗಾಂಧಿ ಸ್ನೇಹಿತೆ ಸುಮ್ನಿಮಾ ಉದಾಸ್​

 

ಲಿಂಗ ಸಮಸ್ಯೆಗಳ ಕುರಿತು ವರದಿ ಮಾಡಿದ್ದಕ್ಕಾಗಿ ಮಹಿಳಾ ಸಬಲೀಕರಣ ಪತ್ರಿಕೋದ್ಯಮ ಪ್ರಶಸ್ತಿಗಳ ಭಾಗವಾಗಿ ಮಾರ್ಚ್ 2014ರಲ್ಲಿ ಸುಮ್ನಿಮಾ ‘ವರ್ಷದ ಪತ್ರಕರ್ತೆ’ ಪ್ರಶಸ್ತಿ ಪಡೆದರು. ಗ್ರಾಮೀಣ ಭಾರತದಲ್ಲಿ ಗುಲಾಮಗಿರಿಯ ಬಗ್ಗೆ ವರದಿ ಮಾಡಿದ್ದಕ್ಕಾಗಿ 2012ರಲ್ಲಿ ಪ್ರತಿಷ್ಠಿತ ಸಿನಿ ಗೋಲ್ಡನ್ ಈಗಲ್ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. ಸುಮ್ನಿಮಾ ಉದಾಸ್ ಅವರ ತಂದೆ ಭೀಮ್ ಉದಾಸ್ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಮ್ಯಾನ್ಮಾರ್‌ನಲ್ಲಿ ನೇಪಾಳದ ರಾಯಭಾರಿಯಾಗಿದ್ದರು.

 ಸುಮ್ನಿಮಾ ಉದಾಸ್​ ಮಂಗಳವಾರ ನಡೆದ ಸುಮ್ನಿಮಾ ಅವರ ಮದುವೆಗೆ ರಾಹುಲ್ ಗಾಂಧಿ ಸೋಮವಾರ ಕಠ್ಮಂಡುವಿಗೆ ತೆರಳಿದ್ದರು ಎನ್ನುವುದು ಮೂಲಗಳಿಂದ ದೊರೆತ ಮಾಹಿತಿ. ಮೇ 5ರಂದು ಹಯಾತ್ ರೀಗೆನ್ಸಿ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಲಿದೆ. ಮಗಳ ಮದುವೆಗೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದಾಗಿ ಸುಮ್ನಿಮಾ ತಂದೆ ಭೀಮ್ ಉದಾಸ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap