ಮೋದಿ ಮುಂದೆ ರಾಹುಲ್‌ ಯಾವ ಲೆಕ್ಕ : ಬಿ ಎಸ್‌ ವೈ

ದಾವಣಗೆರೆ

      ಸಿದ್ದರಾಮಯ್ಯ ಲಿಂಗಾಯತ ಸಿಎಂ ಭ್ರಷ್ಟರು ಎಂಬ ಹೇಳಿಕೆ ವಿಚಾರಕ್ಕೆ ಜಗಳೂರಿನಲ್ಲಿ ಬಿ.ಎಸ್‌.ವೈ.ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯರಿಗೆ ಸೋಲು ನಿಶ್ಚಿತ ಅಂತಾ ಗೊತ್ತಾಗಿ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರು ಈ ರೀತಿಯ ಹೇಳಿಕೆಯನ್ನು ಕೊಡಬಾರದು. ಅವರು ರಾಜ್ಯದ ಜನರನ್ನು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಇನ್ನು ಕರ್ನಾಟಕದ ಬಗ್ಗೆ ರಾಹುಲ್ ಗಾಂಧಿಗೆ ಏನು ಗೊತ್ತು? ಪ್ರಧಾನಿ ಮೋದಿ ಅವರ ಮುಂದೆ ಅವರು ಯಾವ ಲೆಕ್ಕ? ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದರು.

     ಹಾಗೆಯೆ ಜಗಳೂರು ಬಿಜೆಪಿ ಅಭ್ಯರ್ಥಿ ರಾಮಚಂದ್ರ ದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಈ ಬಾರಿ 140 ಸ್ಥಾನ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಮತ್ತೆ ರಾಜ್ಯದಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಈಗಿನಿಂದ ನನ್ನ ರಾಜ್ಯ ಪ್ರವಾಸ ಆರಂಭವಾಗಿದೆ ಎಂದು ನಿನ್ನೆ ಹೇಳಿದ್ದರು. ರಾಜ್ಯದಲ್ಲಿ 70 ಕ್ಷೇತ್ರದಲ್ಲಿ ಓಡಾಡಿ ಪ್ರಚಾರ ಮಾಡುತ್ತೇನೆ‌. ಕೊನೆ ದಿನದವರೆಗೂ ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು. 
      ಹರಿಹರದಲ್ಲಿ ಬಿಜೆಪಿಯ ಸುನಾಮಿ ಬೀಸಿದೆ. ಚುನಾವಣೆಯ ಕಾವು ಏರುತ್ತಿದೆ. ನಾನು ರಾಜ್ಯದ ಉದ್ದಗಲಕ್ಕೂ ಪ್ರಯಾಣ ಬೆಳೆಸಿದ್ದೇನೆ. ಈ ಬಾರಿ ಬಿಜೆಪಿಯ ಸರ್ಕಾರ ನೂರಕ್ಕೆ ನೂರು ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದರು. ಹರಿಹರ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪರ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ದಿಕ್ಕು ತಪ್ಪಿದೆ. ಸಿದ್ದರಾಮಯ್ಯ ಒಂದು ರೀತಿ, ಡಿಕೆಶಿ ಒಂದು ರೀತಿ ಮಾತನಾಡುತ್ತಾರೆ. 2013-18ರಿಂದ ಕಾಂಗ್ರೆಸ್ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿ, ಬಿಡಿಎ, ಎಸ್ಸಿ ಎಸ್ಟಿ ಮಕ್ಕಳ ದಿಂಬು ಹಾಸಿಗೆಯಲ್ಲಿ ಲಂಚ ಹೊಡೆದಿದ್ದಾರೆ. ಕಾಂಗ್ರೆಸ್ ಅನೇಕ ಯೋಜನೆಗಳಲ್ಲಿ 100% ಭ್ರಷ್ಟಾಚಾರ ಮಾಡಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link